newsfirstkannada.com

ಅಪ್ಪ ಇಲ್ಲ, ಅಮ್ಮ ಇಲ್ಲ.. ಅಮನ್ ಜೀವನದ ಕತೆ ಕೇಳಿದ್ರೆ ಅಚ್ಚರಿಯಾಗುತ್ತೆ!

Share :

Published August 10, 2024 at 8:08am

Update August 10, 2024 at 8:46am

    ಅಮನ್ ಒಲಿಂಪಿಕ್ಸ್​ ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯ ಅಥ್ಲೀಟ್

    ಅಮನ್ ಪ್ಯಾರಿಸ್​​ ಒಲಿಂಪಿಕ್ಸ್​ಗೆ ಆಯ್ಕೆಯಾಗಲು ಏನು ಮಾಡಿದ್ರು ಗೊತ್ತಾ?

    ಅಮ್ಮ ಇಲ್ಲ, ಅಪ್ಪ ಇಲ್ಲ.. ಪ್ಯಾರಿಸ್​​ನಲ್ಲಿ ಭಾರತದ ಬಾವುಟ ಹಾರಿಸಿದ ಹರಿಯಾಣದ ಯುವಕ

ಅಮನ್​​ ಸೆಹ್ರಾವತ್​. 21 ವರ್ಷದ ಚಿರ ಯುವಕ. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಈ ಪರಾಕ್ರಮಿ ಕಂಚಿನ ಪದಕ ಗೆಲ್ಲುವ ಮೂಲಕ ಮತ್ತೊಂದು ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಆ ಮೂಲಕ ಭಾರತಕ್ಕೆ 5ನೇ ಕಂಚಿನ ಪದಕವನ್ನು ತಂದಿದ್ದಾರೆ.

ಅಮನ್​ ಸಣ್ಣ ವಯಸ್ಸಿನಲ್ಲೇ ಒಲಿಂಪಿಕ್ಸ್​ ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯ ಅಥ್ಲೀಟ್​ ಆಗಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ರಿಯೋ ಒಲಿಂಪಿಕ್ಸ್​​ನಲ್ಲಿ ಬ್ಯಾಡ್ಮಿಂಟನ್​ ವಿಭಾಗದಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗೆದ್ದರು. ಆವಾಗ ಪಿವಿ ಸಿಂಧು ಅವರಿಗೆ 21 ವರ್ಷ, 1 ತಿಂಗಳು ಮತ್ತು 14 ದಿನಗಳ ದಾಖಲೆ ಬರೆದಿದ್ದರು. ಆದರೀಗ ಆ ದಾಖಲೆಯನ್ನು ಅಮನ್​​ ಮುರಿದಿದ್ದಾರೆ.

ಅಮನ್​​ ಸೆಹ್ರಾವತ್ ಯಾರು?

ಅಮನ್ ಸೆಹ್ರಾವತ್ ಹರಿಯಾಣದ ಮೂಲದವರು. ಅಲ್ಲಿನ ಜಜ್ಜರ್ ಜಿಲ್ಲೆಯ ಬಿರೋಹರ್ ಗ್ರಾಮದವರು. 10ನೇ ವಯಸ್ಸಿನಲ್ಲಿ ಅಮನ್​ ತನ್ನ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾರೆ. ಅನಾರೋಗ್ಯದ ಕಾರಣ 2013ರಲ್ಲಿ ತಂದೆ ಸೋಮ್​ವೀರ್​ ಸೆಹ್ರಾವತ್​ ಸಾವನ್ನಪ್ಪುತ್ತಾರೆ. ಬಳಿಕ ಒಂದು ವರ್ಷದ ಬಳಿಕ ಅದೇ ನೋವಿನಲ್ಲಿ ತಾಯಿ ಕಮಲೇಶ್​​ ಸೆಹ್ರಾವತ್​ ನಿಧನರಾಗುತ್ತಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಅಮನ್​ ತನ್ನ ಸಹೋದರಿ ಪೂಜಾ ಜೊತೆಗೆ ಅಜ್ಜ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಆಶ್ರಯದಲ್ಲಿ ಬೆಳೆದರು.

ಅಮನ್ ಚಿಕ್ಕ ವಯಸ್ಸಿನಿಂದಲೇ ಕುಸ್ತಿಯ ಬಗ್ಗೆ ಒಲವು. ಕ್ರೀಡೆಯಲ್ಲಿ ತೊಡಗಿರುವ ತನ್ನ ಸಹೋದರಿಯನ್ನು ನೋಡಿದ ನಂತರ ಕುಸ್ತಿ ಆಡಲು ಮುಂದಾಗುತ್ತಾರೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕ ಗೆದ್ದಾಗ ತಮ್ಮ ನಿಲುವುನ್ನು ಬಲಗೊಳಿಸಿದರು. ಭಾರತಕ್ಕೆ ಕುಸ್ತಿ ಆಡಬೇಕು ಎಂದು ನಿರ್ಧರಿಸಿದರು.

ಒಲಿಂಪಿಕ್ಸ್​ ಪದಕ ವಿಜೇತರಾದ ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಬಜರಂಗ್ ಪೂನಿಯಾ ಮತ್ತು ರವಿ ದಹಿಯಾ ಟ್ರೈನಿಂಗ್​ ಪಡೆದ ನವದೆಹಲಿಯ ಛತ್ರಸಾಲ್ ಕ್ರೀಡಾಂಗಣ ತೆರಳಿ ಕುಸ್ತಿಯನ್ನು ಕಲಿತರು.

ಒಲಿಂಪಿಕ್ಸ್​ಗೆ ಆಯ್ಕೆಯಾಗಿದ್ದು ಹೇಗೆ?

ಅಮನ್ ಅವರು ಒಲಿಂಪಿಕ್ಸ್​ನಲ್ಲಿ ಭಾಗವಹಿಸಬೇಕು ಎಂದು ಆರಾಧ್ಯ ದೈವ ಎಂದು ಪರಿಗಣಿಸಿದ್ದ ರವಿ ದಹಿಯಾ ಅವರ ಜೊತೆಗೆ ಸೆಣೆಸಾಡಿದರು. ಟೋಕಿಯೋ ಒಲಿಂಪಿಕ್ಸ್​ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಅವರನ್ನು ಸೋಲಿಸುವ ಮೂಲಕ ಅಮನ್ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪ ಇಲ್ಲ, ಅಮ್ಮ ಇಲ್ಲ.. ಅಮನ್ ಜೀವನದ ಕತೆ ಕೇಳಿದ್ರೆ ಅಚ್ಚರಿಯಾಗುತ್ತೆ!

https://newsfirstlive.com/wp-content/uploads/2024/08/Aman-1.jpg

Load More