newsfirstkannada.com

ಕೊಹ್ಲಿ ಲಕ್ ಕಂಪ್ಲೀಟ್ ಚೇಂಜ್​.. 16 ವರ್ಷಗಳ ಕರಿಯರ್​ನಲ್ಲಿ ವಿರಾಟ್​ಗೆ ಇದು ಅನ್​ಲಕ್ಕಿ ಇಯರ್; ಯಾಕೆ?

Share :

Published August 10, 2024 at 3:53pm

    ಈ ವರ್ಷ ವಿರಾಟ್​, ಕೇವಲ ಒಂದೇ 1 ಏಕದಿನ ಸರಣಿ ಆಡಿದ್ದಾರಾ?

    ಒನ್ಸ್​ ಎ ಕಿಂಗ್ ಆಲ್​ವೇಸ್​ ಎ ಕಿಂಗ್ ಅನ್ನೋದು ಮರೆಯಬಾರದು

    ರನ್​ ಮಷಿನ್ ವಿರಾಟ್​​​ಗೆ ಇಂತಹ ಸ್ಥಿತಿ ಯಾವತ್ತೂ ಬಂದಿರಲಿಲ್ವಾ..? ​

ವಿರಾಟ್ ಕೊಹ್ಲಿ ಪಾಲಿಗೆ ಅತ್ಯಂತ ಕರಾಳ ವರ್ಷ. ಕೊಹ್ಲಿಗೆ ಇಂತಹ ಸ್ಥಿತಿ ಯಾವತ್ತೂ ಬಂದಿರಲಿಲ್ಲ. ಏನ್ರೀ ಹೀಗೇಳ್ತೀರಾ?. T20 ವಿಶ್ವಕಪ್ ಫೈನಲ್ಸ್​ನಲ್ಲಿ ವಿರಾಟ್​​​ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಏಕದಿನ ಕ್ರಿಕೆಟ್​ನಲ್ಲಿ ಆಡಿರೋದು ಜಸ್ಟ್​ ಮೂರೇ 3 ಪಂದ್ಯ. ಅದ್ಹೇಗೆ..? ಈ ವರ್ಷ ಕೊಹ್ಲಿಗೆ ಕರಾಳ ಅಂತೀರಾ ಅಂದ್ರೆ, ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇದನ್ನೂ ಓದಿ: KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?

2023ರ ಕ್ಯಾಲೆಂಡರ್​ನಲ್ಲಿ ವಿರಾಟ್​ ಕೊಹ್ಲಿ ಪಾಲಿಗೆ ಲಕ್ಕಿ ಇಯರ್. 3 ವರ್ಷಗಳ ಕರಾಳ ಅಧ್ಯಾಯಕ್ಕೆ ಬ್ರೇಕ್ ಹಾಕಿದ್ದ ವಿರಾಟ್, 2023ರಲ್ಲಿ ವಿರಾಟ ರೂಪವನ್ನೇ ತೋರಿದ್ದರು. ಏಕದಿನ ವಿಶ್ವಕಪ್​ನಲ್ಲಂತೂ ವಿಂಟೇಜ್ ಕೊಹ್ಲಿ ದರ್ಶನವೇ ಆಗಿತ್ತು. ಆದ್ರೆ, 2024ರ ವರ್ಷಕ್ಕೆ ಕಾಲಿಟ್ಟಿದ್ದೇ ತಡ ವಿರಾಟ್​ ಕೊಹ್ಲಿಯ ಲಕ್ ಕಂಪ್ಲೀಟ್ ಬದಲಾಗಿದೆ.

ಇದನ್ನೂ ಓದಿ: ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!

ಏಕದಿನ ಕ್ರಿಕೆಟ್​ನಲ್ಲಿ 2024 ಕೊಹ್ಲಿ ಪಾಲಿಗೆ ಕರಾಳ ವರ್ಷ.!

ಕೊಹ್ಲಿ.. ವಿಶ್ವ ಕ್ರಿಕೆಟ್​ನ ಸಾಮ್ರಾಟ. 16 ವರ್ಷಗಳ ವೃತ್ತಿ ಜೀವನದಲ್ಲಿ ಲೆಕ್ಕ ಇಲ್ಲದಷ್ಟು ದಾಖಲೆಗಳನ್ನ ಫೀಸ್ ಫೀಸ್ ಮಾಡಿದ್ದಾರೆ. ಆದ್ರೆ, 16 ವರ್ಷಗಳ ಏಕದಿನ ಕ್ರಿಕೆಟ್​ನ ವೃತ್ತಿ ಜೀವನದ ಪೈಕಿ 2024ರ ವರ್ಷ ನಿಜಕ್ಕೂ ಅನ್​ ಲಕ್ಕಿ. ಇದಕ್ಕೆ ಕಾರಣ ಪ್ರಸಕ್ತ ವರ್ಷದಲ್ಲಿ ಕೊಹ್ಲಿ​ ಏಕದಿನ ಕ್ರಿಕೆಟ್​ನಲ್ಲಿ ನೀಡಿರುವ ಪರ್ಫಾಮೆನ್ಸ್. ಪಸಕ್ತ ವರ್ಷ ವಿರಾಟ್​, ಕೇವಲ ಒಂದೇ 1 ಏಕದಿನ ಸರಣಿಯನ್ನಾಡಿದ್ದಾರೆ. ಆ ಒಂದು ಏಕದಿನ ಸರಣಿಯಲ್ಲೇ ವಿರಾಟ್ ಫೇಲ್ಯೂರ್ ಆಗಿದ್ದಾರೆ. ಆದ್ರೆ, ಇದೊಂದೇ ಫೇಲ್ಯೂರ್ ವಿರಾಟ್​ ಕೊಹ್ಲಿ ಪಾಲಿಗೆ ಕರಾಳ ಅಧ್ಯಾಯವಾಗಿ ಮಾರ್ಪಟ್ಟಿದೆ.

16 ವರ್ಷಗಳ ಕರಿಯರ್​ನಲ್ಲೇ ಅತ್ಯಂತ ಕಳಪೆ ದಾಖಲೆ..!

ವಿರಾಟ್ ಕೊಹ್ಲಿ ಏಕದಿನ ಫಾರ್ಮೆಟ್​ನ ಗ್ರೇಟೆಸ್ಟ್ ಬ್ಯಾಟ್ಸ್​ಮನ್. ಅದಕ್ಕೆ ವಿರಾಟ್ ಕೊಹ್ಲಿಯ ದಾಖಲೆಗಳೇ ಸಾಕ್ಷಿ. ಪ್ರತಿ ವರ್ಷ ರನ್​​​​​​​​​​​​​​​​​​ ಶಿಖರವನ್ನೇ ಕಟ್ಟುತ್ತಿದ್ದ ವಿರಾಟ್​, ವೃತ್ತಿ ಜೀವನದಲ್ಲೇ ಅತ್ಯಂತ ಕಳಪೆ ದಾಖಲೆ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಅದು ಕೂಡ ಲಂಕಾ ಎದುರಿನ ಏಕದಿನ ಸರಣಿಯಿಂದಾಗಿದೆ.

2024ರಲ್ಲಿ ಏಕದಿನ ಮಾದರಿಯಲ್ಲಿ ಕೊಹ್ಲಿ

ಈ ವರ್ಷ 3 ಪಂದ್ಯಗಳನ್ನಾಡಿರುವ ವಿರಾಟ್, 58 ರನ್ ಸಿಡಿಸಿದ್ದಾರೆ. ಅದು ಕೂಡ 19.3ರ ಎವರೇಜ್​​ನಲ್ಲಾಗಿದೆ. ಇದೇ ಬ್ಯಾಟಿಂಗ್ ಎವರೇಜ್​, ವಿರಾಟ್ ಪಾಲಿಗೆ ಕಹಿಯಾಗಿದೆ. ವಿರಾಟ್​ ಬ್ಯಾಟಿಂಗ್ ಫೇಲ್ಯೂರ್​​ ಇದೇ ಮೊದಲಲ್ಲ. ಈ ಹಿಂದಿನ 4 ವರ್ಷಗಳೂ ವಿರಾಟ್ ಫೇಲ್ಯೂರ್ ಆಗಿರುವ ಇತಿಹಾಸ ಇದೆ. ಒಂದೊಂದು ರನ್ ಗಳಿಸಲು ಪರದಾಡಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿಅಂಶಗಳು..

ಕೊಹ್ಲಿ ಪಾಲಿನ ಏಕದಿನ ಕರಾಳ ವರ್ಷಗಳು

2022ರಲ್ಲಿ 11 ಪಂದ್ಯಗಳನ್ನಾಡಿದ್ದ ವಿರಾಟ್​, ಕೇವಲ 27.5ರ ಸರಾಸರಿಯಲ್ಲಿ 302 ರನ್​ ಗಳಿಸಿದ್ದರು. 2008ರಲ್ಲಿ 5 ಪಂದ್ಯಗಳಿಂದ 31.80ರ ಸರಾಸರಿಯಲ್ಲಿ 159 ರನ್​ಗಳಿಸಿದ್ದ ವಿರಾಟ್​, 2015ರಲ್ಲಿ 20 ಪಂದ್ಯಗಳಿಂದ 36.64ರ ಸರಾಸರಿಯಲ್ಲಿ 623 ರನ್​ ಕಲೆಹಾಕಿದ್ರು. ಅಷ್ಟೇ ಅಲ್ಲ. 2021ರಲ್ಲೂ ಮೂರೇ ಮೂರು ಏಕದಿನ ಪಂದ್ಯಗಳನ್ನಾಡಿದ್ದ ವಿರಾಟ್, 43ರ ಬ್ಯಾಟಿಂಗ್ ಅವರೇಜ್​ನಲ್ಲಿ 129 ರನ್​ ಗಳಿಸಿದ್ರು.

ಇದನ್ನೂ ಓದಿ: ಒಲಿಂಪಿಕ್ಸ್​ನ ಯುವ ಪ್ಲೇಯರ್​ಗೆ ಕೋಟಿ ರೂಪಾಯಿ ಅನೌನ್ಸ್​.. ವಿಡಿಯೋ ಕಾಲ್ ಮಾಡಿ ಮಾತಾಡಿದ CM

ಹೀಗಾಗಿಯೇ 2024ರ ವರ್ಷ ವಿರಾಟ್​​​​ ಪಾಲಿಗೆ ವರ್ಷ ಬ್ಯಾಡ್ ಇಯರ್. ಇದಿಷ್ಟೇ ಅಲ್ಲ, ಈ ವರ್ಷ ವಿರಾಟ್​, ಏಕದಿನ ಫಾರ್ಮೆಟ್​ನಲ್ಲಿ ರನ್ ಗಳಿಸುವ ಅವಕಾಶವೂ ಸಿಗಲ್ಲ. ಯಾಕಂದ್ರೆ, ಪ್ರಸಕ್ತ ವರ್ಷ ಟೀಮ್ ಇಂಡಿಯಾ ಮುಂದೆ ಇದ್ದಿದ್ದು, ಶ್ರೀಲಂಕಾ ಎದುರಿನ 3 ಪಂದ್ಯಗಳ ಏಕದಿನ ಸರಣಿ ಈ ವರ್ಷದ ಕೊನೆ ಏಕದಿನ ಸರಣಿ ಆಗಿದೆ.

ಅದೇನೇ ಆಗಲಿ. ವಿರಾಟ್​ ಕೇವಲ 3 ಪಂದ್ಯಗಳಲ್ಲಿ ರನ್ ಗಳಿಸಲಿಲ್ಲ ಎಂಬ ಕಾರಣಕ್ಕೆ ಬ್ಯಾಟಿಂಗ್ ಎವರೇಜ್​ ಕಡಿಮೆಯಾಗಿರಬಹುದು. ಆದ್ರೆ, ವಿರಾಟ್​ ಕೊಹ್ಲಿಗಿರುವ ಕೆಪಾಸಿಟಿ, ರನ್ ಗಳಿಸಬೇಕೆಂಬ ಹಸಿವು ಮಾತ್ರ ಹಾಗೇ ಇದೆ. ಹೀಗಾಗಿ ದಾಖಲೆಗಳೂ ಏನೇ ಹೇಳಿದ್ರು. ಒನ್ಸ್​ ಎ ಕಿಂಗ್ ಆಲ್​ವೇಸ್​ ಎ ಕಿಂಗ್ ಅನ್ನೋದು ಮರೆಯುವಂತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ಲಕ್ ಕಂಪ್ಲೀಟ್ ಚೇಂಜ್​.. 16 ವರ್ಷಗಳ ಕರಿಯರ್​ನಲ್ಲಿ ವಿರಾಟ್​ಗೆ ಇದು ಅನ್​ಲಕ್ಕಿ ಇಯರ್; ಯಾಕೆ?

https://newsfirstlive.com/wp-content/uploads/2024/08/VIRAT_KOHLI.jpg

Load More