newsfirstkannada.com

ಪಾಕ್​​ನ ಅರ್ಷದ್​ ನದೀಮ್​ಗೆ ‘ಚಿನ್ನ’ದ ಜಾವೆಲಿನ್ ಸ್ಟಿಕ್​ ಕೊಡಿಸಿದ್ಯಾರು? ನೀರಜ್​ ಚೋಪ್ರಾ ತ್ಯಾಗದ ಕಥೆ ಗೊತ್ತಾ?

Share :

Published August 10, 2024 at 8:56pm

    ಅರ್ಷದ್​ ನನ್ನ ಮಗನಿದ್ದಂತೆ ಎಂದಿದ್ದ ನೀರಜ್​ ಚೋಪ್ರಾ ತಾಯಿ

    ಜಾವೆಲಿನ್ ಸ್ಟಿಕ್​ ಖರೀದಿ ಮಾಡಲು ಅರ್ಷದ್​ ಪಟ್ಟ ಕಷ್ಟ ಅಷ್ಟಿಷ್ಟಲ್ಲ

    ಪಾಕ್​ನ ಅರ್ಷದ್​ಗೆ ಜಾವೆಲಿನ್ ಸ್ಟಿಕ್ ಕೊಡಿಸಿದ್ದು ಭಾರತದವರೆ?

ಪ್ಯಾರಿಸ್ ಒಲಿಂಪಿಕ್ಸ್​ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪಾಕಿಸ್ತಾನದ ಅರ್ಷದ್​ ನದೀಮ್ ಅವರು 92.97 ಮೀಟರ್ ದೂರ ಈಟಿ ಎಸೆದು ದಾಖಲೆ ಬರೆದಿದ್ದಾರೆ. ಗೋಲ್ಡ್​ ಮೆಡಲ್​ಗೆ ಅರ್ಷದ್​ ನದೀಮ್ ಮುತ್ತಿಕ್ಕಿದರೆ, ಇತ್ತ ಭಾರತದ ಜಾವೆಲಿನ್​ ಸ್ಟಾರ್​ ಪ್ಲೇಯರ್ ನೀರಜ್ ಚೋಪ್ರಾ 89.45 ಮೀಟರ್​ ದೂರ ಎಸೆದು 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಇವರಿಬ್ಬರ ಈ ಆಟದ ಹಿಂದೆ ಜಾವೆಲಿನ್ (ಈಟಿ) ಖರೀದಿಯ ಮನಮೋಹಕ ಸಂಗತಿ ಇದೆ.

ಇದನ್ನೂ ಓದಿ: RCB ಫ್ಯಾನ್ಸ್​ಗೆ ಶಾಕಿಂಗ್ ನ್ಯೂಸ್​.. ಸ್ಟಾರ್​ ಪ್ಲೇಯರ್​ ಮೇಲೆ ಕಣ್ಣಿಟ್ಟ ಐಪಿಎಲ್​ನ ಈ 3 ಟೀಮ್ಸ್​?

2024ರ ಒಲಿಂಪಿಕ್ಸ್​ ನಡೆಯುವುದಕ್ಕೂ 5 ತಿಂಗಳ ಹಿಂದೆ ಪಾಕ್​ನ ಜಾವೆಲಿನ್ ಪ್ಲೇಯರ್ ಅರ್ಷದ್ ನದೀಮ್ ಬಳಿ ಚೆನ್ನಾಗಿರುವ ಈಟಿ ಇರಲಿಲ್ಲ. ಯಾವುದೋ ಹಳೆಯ ಈಟಿಯಿಂದ 7 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದನು. ಒಲಿಂಪಿಕ್ಸ್​ ಹೋಗುವ ಸ್ಪರ್ಧಿಗಳು ಶ್ರೇಷ್ಠ ಕೋಚ್​ ಅಡಿ, ಒಳ್ಳೆಯ ಈಟಿಗಳೊಂದಿಗೆ ಅಭ್ಯಾಸ ಮಾಡುತ್ತಿದ್ದರು. ಆದರೆ ನದೀಮ್​ ಹಳೆಯದರಲ್ಲಿ ಅಭ್ಯಾಸ ಮಾಡುತ್ತಿದ್ದ. ಒಂದು ಈಟಿ ಖರೀದಿ ಮಾಡೋದಕ್ಕೂ ಅವರ ಬಳಿ ಹಣವಿರಲಿಲ್ಲ. ಒಲಿಂಪಿಕ್ಸ್​ ಸಮೀಪ ಬಂದಂತೆ ಈಟಿ ಖರೀದಿ ಮಾಡಲು ನದೀಮ್ ಪಟ್ಟ ಕಷ್ಟ ಮಾತ್ರ ಯಾರಿಗೂ ಬೇಡ.

ಜಾವೆಲಿನ್ ಸ್ಟಿಕ್ ಬೆಲೆ 85 ಸಾವಿರ ರೂ.ಗಳಿಂದ 3 ಲಕ್ಷ ರೂ.

ಒಲಿಂಪಿಕ್ಸ್ ಹೋಗುವ ಮುನ್ನಾ ನನಗೊಂದು ಈಟಿ ಕೊಡಿಸಿ ಎಂದು ಪಾಕಿಸ್ತಾನದ ದೊಡ್ಡ ದೊಡ್ಡ ವ್ಯಕ್ತಿಗಳ ಬಳಿ ಕೇಳಿಕೊಂಡಿದ್ದಾರೆ. ರಾಷ್ಟ್ರೀಯ ಫೆಡರೇಶನ್, ಕೋಚ್​ಗಳ ಬಳಿಯು ಮನವಿ ಮಾಡಿದ್ದರು. ಆದರೆ ಯಾರೋಬ್ಬರು ಇವರ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಉತ್ತಮವಾದ, ಚೆನ್ನಾಗಿರೋ ಒಂದು ಜಾವೆಲಿನ್ ಸ್ಟಿಕ್ ಬೆಲೆ 85 ಸಾವಿರ ರೂ.ಗಳಿಂದ 3 ಲಕ್ಷ ರೂಪಾಯಿವರೆಗೆ ಇರುತ್ತದೆ. ದೇಶದ ಕೀರ್ತಿ ಹಾರಿಸಿರೋ ಒಳ್ಳೆಯ ಪ್ಲೇಯರ್​ಗೆ ಒಂದು ಜಾವೆಲಿನ್​ ಕೊಡಿಸೋ ಯೋಗ್ಯತೆ ಆ ದೇಶಕ್ಕೆ ಇರಲಿಲ್ಲ ಎನ್ನುವುದು ಇಲ್ಲಿ ನಾವು ಮನಗಾಣಬೇಕು.

ಇದನ್ನೂ ಓದಿ: KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?

ನದೀಮ್​ನ ಮಾತುಗಳು ನೀರಜ್​ ಚೋಪ್ರಾ ಕಿವಿಗಳಿಗೆ ಬೀಳುತ್ತವೆ. ಇದರಿಂದ ನೀರಜ್ ಚೋಪ್ರಾ ಬೇಸರಗೊಳ್ಳುತ್ತಾರೆ. ಒಂದು ವೃತ್ತಿಯಲ್ಲಿರೋ ವ್ಯಕ್ತಿಯ ಕಷ್ಟ ಅದೇ ವೃತ್ತಿಯಲ್ಲಿರೋ ಇನ್ನೊಬ್ಬನಿಗೆ ಮಾತ್ರ ಅರ್ಥವಾಗುತ್ತದೆ ಎನ್ನುವುದಕ್ಕೆ ಇವರಿಬ್ಬರೇ ಉದಾಹರಣೆ. ಚೋಪ್ರಾ ಕಿವಿಗೆ ಬಿದ್ದ ಮರು ದಿನವೇ ಜಾವೆಲಿನ್​ ನದೀಮ್​​ನ ಕೈಯಲ್ಲಿತ್ತು. ಚೆನ್ನಾಗಿರುವ, ಒಳ್ಳೆ ಕಂಪನಿಯ ಒಂದು ಜಾವೆಲಿನ್ ಸ್ಟಿಕ್ ಬೆಲೆ 85 ಸಾವಿರ ರೂಪಾಯಿ 3 ಲಕ್ಷ ರೂಪಾಯಿವರೆಗೆ ಇರುತ್ತದೆ. ಇಷ್ಟೊಂದು ಬೆಲೆ ಇರುವ ಜಾವೆಲಿನ್ ಸ್ಟಿಕ್ ಅನ್ನು ಅರ್ಷದ್​ ನದೀಮ್​ಗೆ ನೀರಜ್ ಚೋಪ್ರಾ ಅವರು ಕೊಡಿಸಿದ್ದರು.

ಇದನ್ನೂ ಓದಿ: ಕೊಹ್ಲಿ ಲಕ್ ಕಂಪ್ಲೀಟ್ ಚೇಂಜ್​.. 16 ವರ್ಷಗಳ ಕರಿಯರ್​ನಲ್ಲಿ ವಿರಾಟ್​ಗೆ ಇದು ಅನ್​ಲಕ್ಕಿ ಇಯರ್; ಯಾಕೆ?

ನೀರಜ್​ ಚೋಪ್ರಾ ಕೊಡಿಸಿದ ಆ ಜಾವೆಲಿನ್​ನಿಂದಲೇ ಅಭ್ಯಾಸ ಮಾಡಿ, ಮಾಡಿ ಕೊನೆಗೆ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ನದೀಮ್​ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ನೀರಜ್​ ಚೋಪ್ರಾರನ್ನ ಹಿಂದಿಕ್ಕಿ ನದೀಮ್​ ಚಿನ್ನ ಗೆದ್ದುಕೊಂಡಿದ್ದಾರೆ. ಇವರಿಬ್ಬರು ಮೈದಾನದಲ್ಲಿ ಇರುವಾಗ ಮಾತ್ರ ಪೈಪೋಟಿ ಇರುತ್ತದೆ. ಆದರೆ ಮೈದಾನದಿಂದ ಹೊರ ಬಂದ ಮೇಲೆ ಅಣ್ಣ-ತಮ್ಮಂದಿರಂತೆ ಇರುತ್ತಾರೆ. ಅರ್ಷದ್ ಒಂದು ವರ್ಷ ದೊಡ್ಡವರಾದರೂ ನನ್ನ ರೋಲ್​ ಮಾಡೆಲ್​ ನೀರಜ್​ ಚೋಪ್ರಾ ಎಂದು ಹೇಳುತ್ತಾರೆ. ಅಲ್ಲದೇ ನದೀಮ್​ ಗೋಲ್ಡ್​​ ಮೆಡಲ್​ ಗೆಲ್ಲುತ್ತಿದ್ದಂತೆ ನೀರಜ್ ಚೋಪ್ರಾ ತಾಯಿ ನದೀಮ್​ ಕೂಡ ನನ್ನ ಮಗನಿದ್ದಂತೆ ಹೇಳಿರುವುದು ಇಲ್ಲಿ ನೆನಪಿಸಿಕೊಳ್ಳಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಕ್​​ನ ಅರ್ಷದ್​ ನದೀಮ್​ಗೆ ‘ಚಿನ್ನ’ದ ಜಾವೆಲಿನ್ ಸ್ಟಿಕ್​ ಕೊಡಿಸಿದ್ಯಾರು? ನೀರಜ್​ ಚೋಪ್ರಾ ತ್ಯಾಗದ ಕಥೆ ಗೊತ್ತಾ?

https://newsfirstlive.com/wp-content/uploads/2024/08/Neeraj_Chopra_NADEEM.jpg

Load More