newsfirstkannada.com

Tungabhadra Dam: ಕಿತ್ತುಹೋದ 19ನೇ ಕ್ರೆಸ್ಟ್​ ಗೇಟ್.. ಬರಿದಾಗಲಿದೆ ತುಂಗೆಯ ಒಡಲು! ಸಂಪೂರ್ಣ ಖಾಲಿ ಮಾಡ್ತಾರಾ ಡ್ಯಾಂ ನೀರು?

Share :

Published August 11, 2024 at 7:35am

Update August 11, 2024 at 12:18pm

    ಗೇಟ್​ ದುರಸ್ತಿಗೆ 50 ಟಿಎಂಸಿ ನೀರು ಹೊರ ಬಿಡಬೇಕಾದ ಪರಿಸ್ಥಿತಿ

    ಡ್ಯಾಂ ನೀರು ಖಾಲಿ ಮಾಡುವುದಕ್ಕೆ ನಾಲ್ಕೈದು ದಿನ ಬೇಕಾಗುತ್ತಾ?

    ಜಲಾಶಯದ ಆಣೆಕಟ್ಟು ಬಳಿ ಪೊಲೀಸ್ ಬಿಗಿ ಬಂದೋಬಸ್ತ್

ಬೆಂಗಳೂರು: ಮಳೆಯಿಂದಾಗಿ ಹೊಸಪೇಟೆ ನಗರದ ಹೊರಭಾಗದಲ್ಲಿರೋ ತುಂಗಾಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದ ಕಾರಣ ಜಲಾಶಯ ಗೇಟ್​ಗೆ ಭಾರೀ ಹಾನಿಯಾಗಿದೆ. ಪರಿಣಾಮ ಜಲಾಶಯದ 19ನೇ ಚೈನ್​ಲಿಂಕ್​ ಗೇಟ್​ ಕಟ್​ ಆಗಿದೆ. ಸದ್ಯ ನದಿ ಪಾತ್ರದಲ್ಲಿ ಜನರಲ್ಲಿ ಆತಂಕ ಶುರುವಾಗಿದೆ.

ಬರಿದಾಗುತ್ತಾ ಡ್ಯಾಂ?

19ನೇ ಚೈನ್​ ಲಿಂಕ್ ಗೇಟ್​ ಕಟ್​ನಿಂದ ಡ್ಯಾಂ ಬರಿದಾಗುವ ಭೀತಿ ಎದುರಾಗಿದೆ. ಎಲ್ಲಾ ಗೇಟ್​ಗಳನ್ನು ಓಪನ್ ಮಾಡಿ ನೀರು ಹೊರಕ್ಕೆ ಬಿಡಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಗೇಟ್​ ದುರಸ್ತಿಗೆ 50 ಟಿಎಂಸಿ ನೀರು ಹೊರ ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ದಿನಕ್ಕೆ 2 ಲಕ್ಷ ಕ್ಯೂಸೆಕ್ ನೀರು ತುಂಗಭದ್ರಾ ನದಿಗೆ ಹರಿಸಬೇಕಾಗಿದೆ. ಗೇಟ್ ದುರಸ್ತಿಗೆ 7-8 ದಿನ ಬೇಕೆಂದು ಕೊಪ್ಪಳ ಶಾಸಕ ಹಿಟ್ನಾಳ್​ ಹೇಳಿದ್ದಾರೆ. ಜೊತೆಗೆ ನದಿ ಪಾತ್ರಕ್ಕೆ ತೆರಳದಂತೆ ಗ್ರಾಮದ ಜನರಿಗೆ ರಾಘವೇಂದ್ರ ಹಿಟ್ನಾಳ್​​ ಮನವಿ ಮಾಡಿದ್ದಾರೆ.
ಜಲಾಶಯದ ಆಣೆಕಟ್ಟು ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ತುಂಗಭದ್ರಾ ನೀರಾವರಿ ವಲಯದ ಸಿಇ ಎಲ್ ಬಸವರಾಜ್ ಈ ಕುರಿತು ನ್ಯೂಸ್​​ಫಸ್ಟ್​ ಜೊತೆಗೆ ಮಾತನಾಡಿದ್ದಾರೆ. 69 ವರ್ಷದ ಡ್ಯಾಂ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಘಟನೆಯಾಗಿದೆ. 19ನೇ ಕ್ರಸ್ಟ್​ ಗೇಟ್ ಒಂದ್​ ಕಡೆ ಡಿ-ಲಿಂಕ್​ ಆಗಿ‌ ಕಟ್ ಆಗಿ ಹೋಗಿದೆ. ಉಳಿದ ಗೇಟ್​ಗಳನ್ನು ಓಪನ್ ಮಾಡಿ ನದಿಗೆ ನೀರು ಹರಿಸಲಾಗ್ತಿದೆ. ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗ್ತಿದೆ. ಇರೋ ನೀರಲ್ಲಿ ಕೆಲಸ ಮಾಡಲು ಆಗುತ್ತಾ? ಇಲ್ವೋ ನೋಡಬೇಕು ಎಂದು ಹೇಳಿದ್ದಾರೆ.

ಬಳಿಕ ಬೆಳಗ್ಗೆ ಜಲಾಶಯಕ್ಕೆ ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಲಿದೆ. ತಜ್ಞರ ತಂಡ ಬಂದ ಬಳಿಕ ಮುಂದಿನ ಕ್ರಮದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಸದ್ಯ ಡ್ಯಾಂಗೆ ಯಾವುದೇ ತೊಂದರೆ ಇಲ್ಲ ಎಂದ ಸಿಇ ಬಸವರಾಜ್ ಹೇಳಿದ್ದಾರೆ.

ಡ್ಯಾಂ ನೀರು ಖಾಲಿ ಮಾಡುತ್ತಾರಾ?

19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಹಿನ್ನೆಲೆ, 105 ಟಿಎಂಸಿಯಲ್ಲಿ 55 ರಿಂದ 65 ಟಿಎಂಸಿ ವರೆಗೂ ನೀರು ಖಾಲಿ ಮಾಡುವುದು ಅನಿವಾರ್ಯವಾಗಿದೆ. 1633 ಅಡಿಯಲ್ಲಿ 20 ರಿಂದ 21 ಅಡಿಯಷ್ಟು ನೀರು ಖಾಲಿಯಾದ್ರೆ ಮಾತ್ರ ಗೇಟ್ ದುರಸ್ತಿ ಕಾರ್ಯ ಸಾಧ್ಯವಾಗಲಿದೆ. ನೀರು ಖಾಲಿ ಮಾಡುವುದಕ್ಕೆ ನಾಲ್ಕೈದು ದಿನ ಬೇಕಾಗಲಿದೆ. ನೀರು ಖಾಲಿ ನಂತರ ಬೇಕು ದುರಸ್ತಿ ಮಾಡಲು 7-8 ದಿನ ಬೇಕಾಗಲಿದೆ.

ಎರಡು ವಾರಗಳ ಕಾಲ ನೀರು ಪೋಲು ಅನಿವಾರ್ಯ. ನುರಿತ ತಜ್ಞರು ಬಂದ್ರೂ ಗೇಟ್ ದುರಸ್ತಿಗೆ ಎರಡು ವಾರಗಳ ಸಮಯ ಬೇಕಾಲಿದೆ ಎನ್ನಲಾಗುತ್ತಿದೆ. ಸದ್ಯ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿರುವ ಮಾಹಿತಿ ಲಭಿಸಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ ನಿಂದ ತಜ್ಞರ ತಂಡ ಬಂದ ಮೇಲೆ ದುರಸ್ತಿ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಪರಿಸ್ಥಿತಿ ನೋಡಿ ದುರಸ್ತಿ ಪ್ಲಾನ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tungabhadra Dam: ಕಿತ್ತುಹೋದ 19ನೇ ಕ್ರೆಸ್ಟ್​ ಗೇಟ್.. ಬರಿದಾಗಲಿದೆ ತುಂಗೆಯ ಒಡಲು! ಸಂಪೂರ್ಣ ಖಾಲಿ ಮಾಡ್ತಾರಾ ಡ್ಯಾಂ ನೀರು?

https://newsfirstlive.com/wp-content/uploads/2024/08/Tungabadra-dam-6.jpg

Load More