2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೆ ಈಗಿನಿಂದಲೇ ತಯಾರಿ
ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್
ಕೇವಲ ರಾಹುಲ್, ಪಾಂಡ್ಯ ಮಾತ್ರವಲ್ಲ ಮತ್ತೋರ್ವನ ಮೇಲೂ ಆರ್ಸಿಬಿ ಕಣ್ಣು!
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ವರ್ಷದ ಕೊನೆಯಲ್ಲಿ ನಡೆಯಲಿರೋ ಐಪಿಎಲ್ ಮೆಗಾ ಆಕ್ಷನ್ನಲ್ಲಿ ಸ್ಟಾರ್ ಆಟಗಾರರನ್ನೇ ಖರೀದಿಸಲು ಎಲ್ಲಾ ತಂಡಗಳು ಮುಂದಾಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಫ್ ಡುಪ್ಲೆಸಿಸ್ ಅವರನ್ನು ರಿಲೀಸ್ ಮಾಡಲು ಮುಂದಾಗಿದ್ದು, ಹೊಸ ನಾಯಕನ ಹುಡುಕಾಟದಲ್ಲಿದೆ.
ಇನ್ನು, ಲಕ್ನೋ ಸೂಪರ್ ಜೈಂಟ್ಸ್ ತಂಡ ತೊರೆದು ಕೆ.ಎಲ್ ರಾಹುಲ್ ಆರ್ಸಿಬಿ ಕ್ಯಾಪ್ಟನ್ ಆಗೋ ಸಾಧ್ಯತೆ ಇದೆ. ಜತೆಗೆ ಒಂದು ವೇಳೆ ಕೆ.ಎಲ್ ರಾಹುಲ್ ಸಿಗದಿದ್ರೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೂ ಮಣೆ ಹಾಕುವ ಸಾಧ್ಯತೆ ಇದೆ. ಇದರ ಮಧ್ಯೆ ಮತ್ತೋರ್ವ ಸ್ಟಾರ್ ಆಟಗಾರನ ಹೆಸರು ಆರ್ಸಿಬಿ ಕ್ಯಾಪ್ಟನ್ ರೇಸ್ನಲ್ಲಿ ಇದೆ.
ಏಡನ್ ಮಾರ್ಕ್ರಮ್ ಆರ್ಸಿಬಿ ತಂಡಕ್ಕೆ..?
ಸೌತ್ ಆಫ್ರಿಕಾದ ಸ್ಟಾರ್ ಆಟಗಾರ ಏಡನ್ ಮಾರ್ಕ್ರಮ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಾರೆ. ಮುಂದಿನ ಸೀಸನ್ಗೆ ಸನ್ರೈಸರ್ಸ್ ಹೈದರಾಬಾದ್ ತಂಡವು ಏಡನ್ ಮಾರ್ಕ್ರಮ್ ಅವರನ್ನು ರಿಲೀಸ್ ಮಾಡಲಿದ್ದಾರೆ. ಹಾಗಾಗಿ ಏಡನ್ ಮಾರ್ಕ್ರಮ್ ಅವರನ್ನು ಖರೀದಿ ಮಾಡಲು ಆರ್ಸಿಬಿ ಪ್ಲಾನ್ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
Overseas Captaincy Options
Aiden Markram To RCB ?#IPL2025 pic.twitter.com/mZCpfzp1eQ
— RCBIANS OFFICIAL (@RcbianOfficial) August 11, 2024
ಯಾರು ಈ ಏಡನ್ ಮಾರ್ಕ್ರಮ್..?
ಕಳೆದ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸಾಕಷ್ಟು ಪ್ರಮುಖ ಬೆಳವಣಿಗೆಗಳು ನಡೆದವು. 2023ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೈದರಾಬಾದ್ ತಂಡವನ್ನು ಮಾರ್ಕ್ರಮ್ ಮುನ್ನಡೆಸಿದ್ದರು. ಬಳಿಕ 2024ರ ಐಪಿಎಲ್ನಲ್ಲಿ ಏಡನ್ ಮಾರ್ಕ್ರಮ್ಗೆ ಕೊಕ್ ನೀಡಿ ಪ್ಯಾಟ್ ಕಮಿನ್ಸ್ಗೆ ಪಟ್ಟ ಕಟ್ಟಲಾಯ್ತು. 2023ರ ಆವೃತ್ತಿಯಲ್ಲಿ ಮಾರ್ಕ್ರಮ್ ನೇತೃತ್ವದ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಮಾರ್ಕ್ರಮ್ 2024ರ ಐಪಿಎಲ್ ಅವಧಿಯಲ್ಲಿ ಕೇವಲ 199 ರನ್ಗಳನ್ನು ಪೇರಿಸಿದ್ರು. SRH ಸೀಸನ್ ಕೊನೆ ಪಂದ್ಯಗಳಲ್ಲಿ ಏಡನ್ ಮಾರ್ಕ್ರಮ್ ಅವರನ್ನು ಹೊರಗಿಟ್ಟಿತ್ತು.
ಇದನ್ನೂ ಓದಿ: IPL 2025: ಹಾರ್ದಿಕ್ ಪಾಂಡ್ಯಗೆ ಗೇಟ್ ಪಾಸ್.. ಮುಂಬೈ ಇಂಡಿಯನ್ಸ್ಗೆ ಹೊಸ ಕ್ಯಾಪ್ಟನ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ