newsfirstkannada.com

ಶ್ರಾವಣ ಮಾಸದಂದು ಭಾರೀ ಅನಾಹುತ.. ಸಿದ್ಧೇಶ್ವರನಾಥನ ಸನ್ನಿಧಿಯಲ್ಲಿ ಕಾಲ್ತುಳಿತ.. 7 ಸಾವು, 35 ಮಂದಿ ಗಂಭೀರ

Share :

Published August 12, 2024 at 7:25am

Update August 12, 2024 at 9:14am

    ಶ್ರಾವಣ ಮಾಸದ 4ನೇ ಸೋಮವಾರದಂದು ಭಕ್ತರಿಂದ ತುಂಬಿದ ದೇವಸ್ಥಾನ

    ದೇವಾಲಯಕ್ಕೆ ಜಲಾಭಿಷೇಕ ಮಾಡಿಸಲು ಅಪಾರ ಸಂಖ್ಯೆಯ ಭಕ್ತರು ಆಗಮನ

    ಲಾಠಿ ಪ್ರಹಾರದಿಂದ ನಡೆಯಿತೇ ಈ ಕಾಲ್ತುಳಿತ.. ಇದಕ್ಕೆ ಹೊಣೆ ಯಾರು?

ಇಂದು ಬೆಳಗ್ಗೆ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಿಂದಾಗಿ 3 ಮಹಿಳೆಯರು ಸೇರಿ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ.

ಬಿಹಾರದ ಜೆಹಾನಾಬಾದ್​ನಲ್ಲಿರುವ ದೇವಸ್ಥಾನದ ಮಖ್ದುಂಪುರ ಬ್ಲಾಕ್​ನ ಬಳಿ ಇರುವ ವನವರ್​ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಮಖ್ದುಂಪುರ ಮತ್ತು ಜೆಹಾನಾಬಾದ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಅಧಿಕಾರಿಗಳ ಯಡವಟ್ಟು, ರೈತರಿಗೆ ಸಂಕಟ.. ಖಾಲಿಯಾಗುತ್ತಿದೆ ನೀರು! ರಿಪೇರಿ ಯಾವಾಗ?

ಶ್ರಾವಣ ಮಾಸದ 4ನೇ ಸೋಮವಾರದಂದು ದೇವಸ್ಥಾನದಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಜಲಾಭಿಷೇಕ ಮಾಡಿಸಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.

ಇದನ್ನೂ ಓದಿ: ಕೋಸ್ಟಾ ಹಾಟ್ ಚಾಕೊಲೇಟ್ ಸೇವಿಸೋ ಮುನ್ನ ಹುಷಾರ್.. ಸಾವಿಗೆ ಕಾರಣವಾಯ್ತು ಒಂದೇ ಒಂದು ಸಿಪ್‌!

ಕಾಲ್ತುಳಿತ ವೇಳೆ ಸಂಬಂಧಿಕರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಈ ಘಟನೆ ಬಗ್ಗೆ ಮಾತನಾಡಿದ್ದು, ಆಡಳಿತದ ಕೊರತೆಯಿಂದ ಕಾಲ್ತುಳಿತ ಸಂಭವಿಸಿದೆ. ರಾಷ್ಟ್ರೀಯ ಕೆಡೆಟ್​​​ ಕಾರ್ಪ್ಸ್​​​​ನ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಆದರೆ ಅವರು ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊಲೆ ಕೇಸ್​ಗೆ ಟ್ವಿಸ್ಟ್​​.. 50 ದಿನವಾದ್ರೂ ಬಯಲಾಗದ ನಟ ದರ್ಶನ್​ ಐಫೋನ್​ ರಹಸ್ಯ; ಮುಂದೇನು?

ನಂತರ ಮಾತು ಮುಂದುವರೆಸಿದ ಅವರು, ಲಾಠಿ ಪ್ರಹಾರದ ವೇಳೆ ಜನರು ಓಡಲು ಶುರು ಮಾಡಿದ್ದಾರೆ. ಈ ವೇಳೆ ಕೆಲವರು ಬಿದ್ದಿದ್ದಾರೆ. ಇದು ಸಂಪೂರ್ಣ ಆಡಳಿತದ ತಪ್ಪು. ಶ್ರಾವಣ ಸಮಯದಲ್ಲಿ ದೇವಾಲಯದಲ್ಲಿ ಸಾಕಷ್ಟು ಜನರು ಸೇರುತ್ತಾರೆ, ವಿವಿಧ ಊರುಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಆದರೆ ಪೂಜೆಗೆಂದು ಭಕ್ತರಿಗೆ ಈ ರೀತಿಯ ಘಟನೆ ಎದುರಾಗಿರೋದು ವಿಪರ್ಯಾಸ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರಾವಣ ಮಾಸದಂದು ಭಾರೀ ಅನಾಹುತ.. ಸಿದ್ಧೇಶ್ವರನಾಥನ ಸನ್ನಿಧಿಯಲ್ಲಿ ಕಾಲ್ತುಳಿತ.. 7 ಸಾವು, 35 ಮಂದಿ ಗಂಭೀರ

https://newsfirstlive.com/wp-content/uploads/2024/08/Bihar.jpg

Load More