newsfirstkannada.com

ಹೋಟೆಲ್​ ಛಾವಣಿ ಮೇಲೆ ಬಿದ್ದ ಹೆಲಿಕಾಪ್ಟರ್​; ಪೈಲಟ್​ ಸಾವು, ನೂರಾರು ಮಂದಿಯ ಸ್ಥಳಾಂತರ

Share :

Published August 12, 2024 at 8:40am

Update August 12, 2024 at 8:42am

    ಹೋಟೆಲ್​ ಮೇಲ್ಛಾವಣಿಗೆ ಗುದ್ದಿದ ಹೆಲಿಕಾಪ್ಟರ್

    ಹೆಲಿಕಾಪ್ಟರ್ ನೆಲಕಪ್ಪಳಿಸಿದಂತೆ ಕಾಣಿಸಿಕೊಂಡ ಬೆಂಕಿ

    ಬೆಂಕಿಯ ಕೆನ್ನಾಲಿಗೆಗೆ ಸಾವನ್ನಪ್ಪಿದ ಪೈಲಟ್​.. ಹೋಟೆಲ್​ ಅತಿಥಿಗಳ ಸ್ಥಳಾಂತರ

ಹೆಲಿಕಾಪ್ಟರ್​ವೊಂದು ಹೋಟೆಲ್​ ಮೇಲ್ಛಾವಣಿಗೆ ಗುದ್ದಿದ ಪರಿಣಾಮ ಪೈಲಟ್​​ ಸಾವನ್ನಪ್ಪಿದ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಹೆಲಿಕಾಪ್ಟರ್​ ಗುದ್ದಿದ್ದಂತೆ ನಿಯಂತ್ರಣ ತಪ್ಪಿ ಹೋಟೆಲ್​ ಮೇಲೆ ಬಿದ್ದಿದೆ. ಅಲ್ಲಿ ತಂಗಿದ್ದ ನೂರಾರು ಅತಿಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಟ್ವಿನ್​ ಇಂಜಿನ್​ ಹೆಲಿಕಾಪ್ಟರ್​ ಹೋಟೆಲ್​ ಮೇಲ್ಛಾವಣಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ.ಕೂಡಲೇ ಅಲ್ಲಿದ್ದವರನ್ನು ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಬಂದ ತುರ್ತು ನಿಗಮದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ತೀರದ ಜನರೇ ಎಚ್ಚರ! ನಿನ್ನೆಗಿಂತ ಇಂದು ಹೊರಹರಿವಿನ ಪ್ರಮಾಣದಲ್ಲಿ ಏರಿಕೆ ಮಾಡಲು ಚಿಂತನೆ

ಹೆಲಿಕಾಪ್ಟರ್​ ಅವಘಡದಲ್ಲಿ ಪೈಲಟ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಪೈಲಟ್​ ಮತ್ತು ಹೆಲಿಕಾಪ್ಟರ್​ ಅಪಘಾತದ ಕುರಿತು ತನಿಖೆ ಶುರು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೋಟೆಲ್​ ಛಾವಣಿ ಮೇಲೆ ಬಿದ್ದ ಹೆಲಿಕಾಪ್ಟರ್​; ಪೈಲಟ್​ ಸಾವು, ನೂರಾರು ಮಂದಿಯ ಸ್ಥಳಾಂತರ

https://newsfirstlive.com/wp-content/uploads/2024/08/Australia.jpg

Load More