newsfirstkannada.com

IPL 2025: ಫ್ಯಾನ್ಸ್​​ಗೆ ಗುಡ್​ನ್ಯೂಸ್​​.. ಕೆ.ಎಲ್​ ರಾಹುಲ್​​ಗೆ ಈ ತಂಡದಿಂದ ಭರ್ಜರಿ ಆಫರ್​​

Share :

Published August 12, 2024 at 6:08pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ

    ಸ್ಟಾರ್​ ಆಟಗಾರನನ್ನು ಕೈ ಬಿಡಲು ಡೆಲ್ಲಿ ಕ್ಯಾಪಿಟಲ್ಸ್​​ ತಂಡ ನಿರ್ಧಾರ

    ರಿಷಭ್​ ಪಂತ್​ ಬದಲಿಗೆ ಕನ್ನಡಿಗ ಕೆ.ಎಲ್​ ರಾಹುಲ್​​ ಕ್ಯಾಪ್ಟನ್ಸಿ ಪಟ್ಟ

ಕನ್ನಡಿಗ ಕೆ.ಎಲ್​ ರಾಹುಲ್​​ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕ್ಯಾಪ್ಟನ್​​. ಡೆಲ್ಲಿ ಕ್ಯಾಪಿಟಲ್ಸ್ ರೆಡಿ ಮಾಡಿಕೊಂಡ ಸ್ಟಾರ್‌ ನಾಯಕನ ಪಟ್ಟಿಯಲ್ಲಿ ಕೆ.ಎಲ್​ ರಾಹುಲ್​ ಹೆಸರು ಇದೆ. ಕೆ.ಎಲ್​​ ರಾಹುಲ್‌ ಅವರು ಬ್ಯಾಟಿಂಗ್‌ಗೆ ಬಲ ತುಂಬ ಬಲ್ಲ ಆಟಗಾರ. ಇವರಲ್ಲೂ ನಾಯಕತ್ವದ ಗುಣಗಳು ಸಾಕಷ್ಟಿವೆ.

ಕಳೆದ ಸೀಸನ್​ನಲ್ಲಿ ಕೆ.ಎಲ್​ ರಾಹುಲ್​ ಮುಂದಾಳತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಒಂದು ಬಾರಿ ಪ್ಲೇ ಆಫ್‌ಗೆ ಕ್ವಾಲಿಫೈ ಆಗಿತ್ತು. ಆದರೆ ತಂಡ ನೀರಸ ಪ್ರದರ್ಶನ ನೀಡಿದ್ದರಿಂದ ಎಲ್‌ಎಸ್‌ಜಿ ಇವರಿಗೂ ಗೇಟ್ ಪಾಸ್ ನೀಡುವ ಸಾಧ್ಯತೆ ಇದೆ. ಹಾಗಾಗಿ ಇವರನ್ನು ಡೆಲ್ಲಿ ಕ್ಯಾಪಿಟಲ್ಸ್​​​ ಮೆಗಾ ಆಕ್ಷನ್​​ನಲ್ಲಿ ಖರೀದಿ ಮಾಡೋ ಸಾಧ್ಯತೆ ಇದೆ.

ಇಂಡಿಯನ್​ ಪ್ರೀಮಿಯರ್​​ ಲೀಗ್​​ 2025ರ ಮೆಗಾ ಆಕ್ಷನ್​​ಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು? ಯಾರನ್ನು ಬಿಡಬೇಕು ಎಂಬುದರ ಬಗ್ಗೆ ಐಪಿಎಲ್​​ ತಂಡಗಳು ತೀರ್ಮಾನಿಸುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್‌ ಕೂಡ ತನ್ನ ರೀಟೈನ್​ ಲಿಸ್ಟ್​​ ಫೈನಲ್​ ಮಾಡಿದೆ. ಇತ್ತೀಚಿನ ವರದಿಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್‌ ಪಂತ್‌ ಅವರನ್ನು ಕೈ ಬಿಡುವ ಸಾಧ್ಯತೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ಪಂತ್​ಗೆ ಕೊಕ್​​ ಯಾಕೆ?

ಡೆಲ್ಲಿ ಕ್ಯಾಪಿಟಲ್ಸ್‌ ಕೋಚ್‌ ಆಗಿದ್ದ ರಿಕ್ಕಿ ಪಾಂಟಿಂಗ್ ಈ ವರ್ಷದ ಆರಂಭದಲ್ಲೇ ತಂಡ ತೊರೆದಿದ್ದರು. ಇದರ ಬೆನ್ನಲ್ಲೇ ರಿಷಭ್‌ ಪಂತ್‌ ಕೂಡ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ತೊರೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ರಿಷಭ್‌ ಪಂತ್‌ 2024ರ ಐಪಿಎಲ್​​​ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಹಾಗಾಗಿ ಪಂತ್​ ಅವರನ್ನು ತಂಡದಿಂದ ಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಕ್ಯಾಪ್ಟನ್ಸಿ ರೇಸ್​ನಲ್ಲಿ ಕೆ.ಎಲ್​ ರಾಹುಲ್​​ ಹೆಸರು..!

ಈ ಬಾರಿ ಐಪಿಎಲ್‌ ಮೆಗಾ ಹರಾಜು ರೋಚಕವಾಗಿ ಇರಲಿದೆ. ಬಹುತೇಕ ತಂಡಗಳು ಹೊಸ ನಾಯಕನಿಗಾಗಿ ಹುಡುಕಾಟದಲ್ಲಿ ತೊಡಗಿವೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಸದ್ಯಕ್ಕೆ ಲಭ್ಯವಿರೋ ಮಾಹಿತಿ ಪ್ರಕಾರ ಪಂತ್​ ಜಾಗಕ್ಕೆ ಇಬ್ಬರು ಅನುಭವಿಗಳ ಹೆಸರು ಕೇಳಿ ಬಂದಿದೆ. ಕನ್ನಡಿಗ ಕೆ.ಎಲ್​ ರಾಹುಲ್​ ಅವರು ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮುನ್ನಡೆಸಬಹುದು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL 2025: ಫ್ಯಾನ್ಸ್​​ಗೆ ಗುಡ್​ನ್ಯೂಸ್​​.. ಕೆ.ಎಲ್​ ರಾಹುಲ್​​ಗೆ ಈ ತಂಡದಿಂದ ಭರ್ಜರಿ ಆಫರ್​​

https://newsfirstlive.com/wp-content/uploads/2024/04/KL-Rahul_RCB.jpg

Load More