ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ
ಸೂರ್ಯಕುಮಾರ್ ಯಾದವ್ಗೆ ಈ ತಂಡದಿಂದ ಭರ್ಜರಿ ಆಫರ್!
2025ರ ಐಪಿಎಲ್ ಮೆಗಾ ಆಕ್ಷನ್ನಲ್ಲಿ ಖರೀದಿ ಮಾಡಲು ಪ್ಲಾನ್
ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೆ ಹಲವು ತಂಡಗಳು ಆಟಗಾರರ ರಿಲೀಸ್ ಪಟ್ಟಿಯನ್ನು ಫೈನಲ್ ಮಾಡಿಲ್ಲ. ಮುಂಬೈ ಇಂಡಿಯನ್ಸ್ ಕೂಡ ಹಲವರನ್ನು ರಿಲೀಸ್ ಮಾಡಲು ಮುಂದಾಗಿದೆ. ಭಾರತ ಟಿ20 ಕ್ರಿಕೆಟ್ ತಂಡದ ಸೂರ್ಯಕುಮಾರ್ ಯಾದವ್ ಕೂಡ ಮುಂಬೈ ಇಂಡಿಯನ್ಸ್ ತಂಡದಲ್ಲಿ ಉಳಿದುಕೊಳ್ಳುವುದು ಕಷ್ಟ. ಇದಕ್ಕೆ ಕಾರಣ ಇವರು ಸಹ ನಾಯಕತ್ವವನ್ನು ಬಯಸುತ್ತಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಬೇರೆ ತಂಡಗಳತ್ತ ಮುಖ ಮಾಡಬಹುದು. ಈ ಅವಕಾಶವನ್ನು ಬಳಸಿಕೊಳ್ಳಲು ಎಲ್ಲ ತಂಡಗಳು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿವೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ಸ್ಥಾನ ತುಂಬ ಬಲ್ಲ ಆಟಗಾರರ ಪಟ್ಟಿಯಲ್ಲಿ ಕೇವಲ ಕೆ.ಎಲ್ ರಾಹುಲ್ ಮಾತ್ರವಲ್ಲ ಸೂರ್ಯಕುಮಾರ್ ಯಾದವ್ ಕೂಡ ಇದ್ದಾರೆ. ಇವರು ಟೀಮ್ ಇಂಡಿಯಾದ ನಾಯಕರಾಗಿಯೂ ತಮ್ಮ ಕ್ಷಮತೆ ಸಾಬೀತು ಪಡಿಸಿದ್ದಾರೆ. ಹೀಗಾಗಿ ಇವರ ಮೇಲೂ ಡೆಲ್ಲಿ ಕ್ಯಾಪಿಟಲ್ಸ್ ಹದ್ದಿನ ಕಣ್ಣಿಟ್ಟಿದೆ. ಜತೆಗೆ ಆರ್ಸಿಬಿ ಕೂಡ ಸೂರ್ಯ ಅವರನ್ನು ಬಿಡ್ ಮಾಡಬಹುದು. ಆದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಎಲ್ಲಾ ಮಾಸ್ಟರ್ ಪ್ಲಾನ್ ಮಾಡಿದ್ದು, ಸೂರ್ಯ ಅವರನ್ನು ಖರೀದಿ ಮಾಡಲು ಚಿಂತಿಸಿದೆ.
ಇದನ್ನೂ ಓದಿ: IPL 2025: ಪಂತ್ಗೆ ಬಿಗ್ ಶಾಕ್ ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್.. ಕನ್ನಡಿಗನಿಗೆ ಭರ್ಜರಿ ಗುಡ್ನ್ಯೂಸ್!
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಆಕ್ಷನ್ಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು? ಯಾರನ್ನು ಬಿಡಬೇಕು ಎಂಬುದರ ಬಗ್ಗೆ ಐಪಿಎಲ್ ತಂಡಗಳು ತೀರ್ಮಾನಿಸುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ತನ್ನ ರೀಟೈನ್ ಲಿಸ್ಟ್ ಫೈನಲ್ ಮಾಡಿದೆ. ಇತ್ತೀಚಿನ ವರದಿಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರನ್ನು ಕೈ ಬಿಡುವ ಸಾಧ್ಯತೆಯಿದೆ.
ಡೆಲ್ಲಿ ತಂಡದಿಂದ ಪಂತ್ಗೆ ಗೇಟ್ ಪಾಸ್
ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿದ್ದ ರಿಕ್ಕಿ ಪಾಂಟಿಂಗ್ ಈ ವರ್ಷದ ಆರಂಭದಲ್ಲೇ ತಂಡ ತೊರೆದಿದ್ದರು. ಇದರ ಬೆನ್ನಲ್ಲೇ ರಿಷಭ್ ಪಂತ್ ಕೂಡ ಐಪಿಎಲ್ನಲ್ಲಿ ಡೆಲ್ಲಿ ತಂಡವನ್ನು ತೊರೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ರಿಷಭ್ ಪಂತ್ 2024ರ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಹಾಗಾಗಿ ಪಂತ್ ಅವರನ್ನು ತಂಡದಿಂದ ಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ: IPL 2025: ಫ್ಯಾನ್ಸ್ಗೆ ಗುಡ್ನ್ಯೂಸ್.. ಕೆ.ಎಲ್ ರಾಹುಲ್ಗೆ ಈ ತಂಡದಿಂದ ಭರ್ಜರಿ ಆಫರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ