newsfirstkannada.com

ಗಾಂಜಾ ಸೇದ್ತಿದ್ದ, ತನ್ನದೇ ಮನೆಯಲ್ಲೇ ಕಳ್ಳತನ ಮಾಡ್ತಿದ್ದ! ದುನಿಯಾ ವಿಜಯ್​ ಜೊತೆ ಸತ್ಯ ಬಿಚ್ಚಿಟ್ಟ 16 ವರ್ಷದ ಬಾಲಕ

Share :

Published August 14, 2024 at 6:53am

    ಪುಟ್ಟ ಹುಡುಗ ಹೇಳಿದ ಡ್ರಗ್ಸ್​ ಕಥೆಗೆ ದುನಿಯಾ ವಿಜಿ ಶಾಕ್

    16 ವರ್ಷದ ಬಾಲಕನೊಬ್ಬನನ್ನ ಗಾಂಜಾ ಸೇದ್ತಿದ್ದ ಕಥೆ ಇದು

    ಭೀಮ ಸಿನಿಮಾದ ಮೂಲಕ ಜಾಗೃತಿ ಮೂಡಿಸುತ್ತಿರೋ ವಿಜಯ್​

ಸಿಲಿಕಾನ್ ಸಿಟಿ, ಐಟಿ ಸಿಟಿ, ಉದ್ಯಾನಗರಿ ಅಂತೆಲ್ಲಾ ಕರೆಸಿಕೊಳ್ಳೋ ಬೆಂಗಳೂರಲ್ಲಿ ಡ್ರಗ್ಸ್​ ಭೂತವೂ ಓಡಾಡ್ತಿರೋದು ಮುಚ್ಚಿಟ್ಟ ಸತ್ಯವೇನೂ ಅಲ್ಲ. ಸಾಮಾನ್ಯ ಗಲ್ಲಿಯಿಂದ ಹಿಡಿದು ಸೆಲೆಬ್ರಿಟಿಗಳ ಮನೆಯವರೆಗೂ ಈ ಅಮಲಿನ ಜಾಲ ವ್ಯಾಪಿಸಿದೆ. ಇದೀಗ ದುನಿಯಾ ವಿಜಯ್ ಭೀಮನ ಅವತಾರದಲ್ಲಿ ಬಂದು ಡ್ರಗ್ಸ್​ನ ಸತ್ಯ ಬಿಚ್ಚಿಡ್ತಿದ್ದಾರೆ. ​ರಿಯಲ್ ಸ್ಥಿತಿಯನ್ನ ರಿಯಲ್ ಆಗಿಯೇ ಬಹಿರಂಗ ಪಡಿಸ್ತಿದ್ದಾರೆ.

ಕೌನ್ ರೆ ಉನೇ ಅಂತ ರಾಜಧಾನಿಯ ಗಲ್ಲಿಗಲ್ಲಿಗಳಲ್ಲಿ ಘಾಟು ಹೊಡೀತಿದ್ದ ಗಾಂಜಾ, ಡ್ರಗ್ಸ್​ನ ರಿಯಾಲಿಟಿಯನ್ನ ದುನಿಯಾ ವಿಜಯ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ರು. ಇದು ಸಿನಿಮಾಗೆ ಮಾತ್ರ ಸೀಮಿತವಲ್ಲ. ಬದಲಾಗಿ ರಿಯಲ್ ಲೈಫ್​ನಲ್ಲೂ ಡ್ರಗ್ಸ್​ ವಿರುದ್ಧ ಹೋರಾಟಕ್ಕೆ ಧುಮುಕಿದ್ದಾರೆ.

ಬೆಂಗಳೂರಿನಲ್ಲಿ ಹೈಸ್ಕೂಲ್ ಮಕ್ಕಳಿಗೂ ಸಿಕ್ತಿದ್ಯಾ ಗಾಂಜಾ?

16 ವರ್ಷದ ಬಾಲಕನೊಬ್ಬನನ್ನ ದುನಿಯಾ ವಿಜಯ್ ಮಾತನಾಡಿಸಿದ್ದು, ಆತ ತಾನು ಗಾಂಜಾ ಸೇದ್ತಿದ್ದ ಕಥೆಯನ್ನ ಬಿಚ್ಚಿಟ್ಟಿದ್ದಾನೆ. ಈ ಬಾಲಕನ ಪುಟ್ಟ ಧ್ವನಿಯಲ್ಲಿ ಗಾಂಜಾದಂತ ಭಯಾನಕ ಸತ್ಯ ಹೊರಬಿದ್ದಿದೆ. ಈತ ಇದಕ್ಕಾಗಿ ತನ್ನದೇ ಮನೆಯಲ್ಲೇ ಕಳ್ಳತನವನ್ನೂ ಮಾಡ್ತಿದ್ದನಂತೆ.

ಪಟ್ಲಿ ಅನ್ನೋ ಪೆಡಂಭೂತದಿಂದ ಸದ್ಯ ಈ ಬಾಲಕ ಬಚಾವಾಗಿದ್ದಾರೆ. ರೀಹ್ಯಾಬ್​ಗೆ ಸೇರಿ ಈ ಬಾಲಕ ಗಾಂಜಾದಿಂದ ಮುಕ್ತನಾಗಿದ್ದಾರೆ. ಆದ್ರೆ ಇನ್ನೂ ಹಲವರು ವಿಧವಿಧವಾದ ಅಮಲಿನ ಪದಾರ್ಥಕ್ಕೆ ದಾಸರಾಗಿದ್ದಾರೆ. ಕಾಲೇಜು ಯುವತಿಯರೂ ಡ್ರಗ್ಸ್​ನ ಸುಳಿಯಲ್ಲಿ ಸಿಲುಕಿರೋದನ್ನೂ ವಿಜಯ್ ಬಯಲು ಮಾಡಿದ್ದಾರೆ.

ನೋಡಿದ್ರಲ್ವಾ ಹೆಣ್ಮಕ್ಕಳೇ ಹೆಚ್ಚಾಗಿ ಈ ಡ್ರಗ್ಸ್​ ಜಾಲದಲ್ಲಿ ಸಿಲುಕಿ ವಿಲವಿಲ ಅಂತಿದ್ದಾರಂತೆ. ಇದಿಷ್ಟೆ ಅಲ್ಲದೇ ಮಾತ್ರೆಗಳಿಂದಲೂ ಅಮಲೇರಿಸಿಕೊಳ್ಳೋ ಭಯಾನಕ ಘಟನೆಯೂ ಬೆಂಗಳೂರು ಸಾಕ್ಷಿಯಾಗ್ತಿದೆ.

ಸದ್ಯ ಈ ಡ್ರಗ್ಸ್​ ಬಗ್ಗೆ ಯುವಸಮೂಹದಲ್ಲಿ ಜಾಗೃತಿ ಮೂಡಿಸೋ ಕೆಲಸವನ್ನ ದುನಿಯಾ ವಿಜಯ್ ಮಾಡ್ತಿದ್ದಾರೆ. ಸಿನಿಮಾದ ಜೊತೆಗೆ ಇಂಥಾ ಪ್ರಯತ್ನ ನಿರಂತರವಾಗಿರಲಿ. ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನೂ ಕೂಡ ಈ ದೇಶದ ಭವಿಷ್ಯವನ್ನ ಡ್ರಗ್ಸ್​ ಸುಳಿಗೆ ಸಿಲುಕದಂತೆ ತಡೆಯಬೇಕಿದೆ. ಪೊಲೀಸರು ಕೂಡ ಈ ಬಗ್ಗೆ ಕ್ರಮ ವಹಿಸೋದು ಅತೀ ಅಗತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಾಂಜಾ ಸೇದ್ತಿದ್ದ, ತನ್ನದೇ ಮನೆಯಲ್ಲೇ ಕಳ್ಳತನ ಮಾಡ್ತಿದ್ದ! ದುನಿಯಾ ವಿಜಯ್​ ಜೊತೆ ಸತ್ಯ ಬಿಚ್ಚಿಟ್ಟ 16 ವರ್ಷದ ಬಾಲಕ

https://newsfirstlive.com/wp-content/uploads/2024/08/Duniya-Vijay-1.jpg

Load More