newsfirstkannada.com

ಜಡೇಜಾ, ಕೊಹ್ಲಿ, ರೈನಾ.. ಈ ತ್ರಿಮೂರ್ತಿಗಳಿಗೆ ಇರೋ ಸ್ಪೆಷಲ್ ಸ್ಕಿಲ್​ಗೆ ಬೆರಗಾಗಿದೆ ಕ್ರಿಕೆಟ್ ಜಗತ್ತು!

Share :

Published August 14, 2024 at 8:34am

    ರೈನಾ ಟೀಂ ಇಂಡಿಯಾದ ಮಾಜಿ ಸ್ಟಾರ್​ ಕ್ರಿಕೆಟರ್

    ಜಡೇಜಾ, ಕೊಹ್ಲಿ ಇನ್ನೂ ಭಾರತದ ಪರ ಆಡ್ತಿದ್ದಾರೆ

    ಈ ತ್ರಿಮೂರ್ತಿಗಳಿಗೆ ಇರುವ ವಿಶೇಷ ಸ್ಕಿಲ್ ಬಗ್ಗೆ ಗೊತ್ತಾ?

ಇಟ್ಟ ಗುರಿ ಬಿಟ್ಟ ಬಾಣ ಮಿಸ್ಸೇ ಆಗಲ್ಲ ಅನ್ನೋ ಮಾತಿದ್ಯಲ್ಲ. ಈ ಮಾತು ಟೀಮ್​ ಇಂಡಿಯಾದ ಈ ತ್ರಿಮೂರ್ತಿಗಳಿಗೆ ಹೇಳಿ ಮಾಡಿಸಿದಂತಿದೆ. ಇವ್ರು ಗುರಿ ಇಟ್ಟು ಎಸೆದ್ರು, ಅಂದ್ರೆ ಮುಗೀತು ಕಥೆ. ವಿಕೆಟ್​ ಉಡೀಸ್​​​ ಅಂತಾಲೇ ಅರ್ಥ.

ಕ್ರಿಕೆಟ್​ ಅನ್ನೋ ಜಂಟಲ್​ಮನ್​ ಗೇಮ್​ನಲ್ಲಿ ಯಾವುದೇ ಕ್ಷಣದಲ್ಲಿ ಬೇಕಾದರೂ ಗೇಮ್​ ಚೇಂಜ್​ ಆಗಿ ಬಿಡುತ್ತೆ. ಒಂದು ಸಿಕ್ಸರ್​, ಒಂದು ಬೌಂಡರಿ, ಒಂದು ವಿಕೆಟ್​​ ಪಂದ್ಯದ ಫಲಿತಾಂಶವನ್ನೇ ಉಲ್ಟಾ ಮಾಡಿ ಬಿಡುತ್ತೆ. ಟೀಮ್​ ಇಂಡಿಯಾದಲ್ಲಂತೂ ಈ ಗೇಮ್​ ಚೇಂಜರ್​ಗಳ ದಂಡೇ ಇದೆ. ಈ ತ್ರಿಮೂರ್ತಿಗಳ ಗೇಮ್​ ಚೇಂಜಿಂಗ್​ ಆಟ ಬ್ಯಾಟಿಂಗ್​, ಬೌಲಿಂಗ್​ಗೆ ಮಾತ್ರ ಸೀಮಿತವಾಗಿಲ್ಲ.. ಫೀಲ್ಡಿಂಗ್​ನಲ್ಲೂ ಇವ್ರದ್ದೇ ದರ್ಬಾರ್​. ಈ ತ್ರಿಮೂರ್ತಿಗಳ ಬಳಿ ಚೆಂಡು ಹೋದ್ರೆ ಎದುರಾಳಿ ಬ್ಯಾಟ್ಸ್​ಮನ್​ಗಳು ಓಡೋ ರಿಸ್ಕೇ ತೆಗೆದುಕೊಳ್ಳಲ್ಲ. ಯಾಕಂದ್ರೆ ಇವ್ರು ಇಟ್ಟ ಗುರಿ ಮಿಸ್​ ಆಗೋದೇ ಇಲ್ಲ.

ಇದನ್ನೂ ಓದಿ:ಪತ್ನಿ, ಇಬ್ಬರು ಮಕ್ಕಳು, ಹೆತ್ತ ಅಮ್ಮನನ್ನೂ ಕತ್ತು ಸೀಳಿ ಸಾಯಿಸಿದ.. ಪೊಲೀಸ್ ಕ್ವಾರ್ಟರ್ಸ್​​ನಲ್ಲಿ ಐವರ ಬಲಿ

ರವೀಂದ್ರ ಜಡೇಜಾ, ವಿರಾಟ್​ ಕೊಹ್ಲಿ ಹಾಗೂ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ. ಈ ಮೂವರೇ ಟೀಮ್​ ಇಂಡಿಯಾದ ಪಾಲಿನ ಫೀಲ್ಡಿಂಗ್​ನ ಗೇಮ್​ ಚೇಂಜರ್ಸ್​. ಜಡೇಜಾ ಎಂತಾ ಖತರ್ನಾಕ್​ ಫೀಲ್ಡರ್​ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಫೀಲ್ಡಿಂಗ್​ ವಿಚಾರದಲ್ಲಿ ಕೊಹ್ಲಿ ಕಲೆಗಾರನೇ ಬಿಡಿ. ಸುರೇಶ್​ ರೈನಾ ಫೀಲ್ಡ್​ನಲ್ಲಿ ಮಾಡಿದ ಮ್ಯಾಜಿಕ್​ನ ಇಂದಿಗೂ ಫ್ಯಾನ್ಸ್​ ಮರೆತಿಲ್ಲ. ಈವರೆಗೆ ಟೀಮ್​ ಇಂಡಿಯಾ ಪರ ಡೈರೆಕ್ಟ್​ ಹಿಟ್ ಥ್ರೋ ಎಸೆದು ಅತಿ ಹೆಚ್ಚು ವಿಕೆಟ್​ ಉಡೀಸ್​ ಮಾಡಿದವರಲ್ಲಿ ಈ ಮೂವರಿಗೆ ಅಗ್ರಸ್ಥಾನ. ಈ ಪಟ್ಟಿಯಲ್ಲಿ ಜಡೇಜಾ ಮೊದಲ ಸ್ಥಾನದಲ್ಲಿದ್ರೆ, ಕೊಹ್ಲಿ 2 ಹಾಗೂ ​ ರೈನಾ 3ನೇ ಸ್ಥಾನದಲ್ಲಿದ್ದಾರೆ. ಹೀಗಾಗಿಯೇ ಎದುರಾಳಿ ತಂಡದ ಆಟಗಾರರು ಇವ್ರ ಬಳಿ ಚೆಂದು ಹೋದ್ರೆ, ಕ್ರಿಸ್​ ಬಿಟ್ಟು ಕದಲೋದೆ ಇಲ್ಲ.

ಇದನ್ನೂ ಓದಿ:ಕೊನೆಗೂ ತಲೆ ಬಾಗಿದ ಕಿಂಗ್, ನಡೆಯಲಿಲ್ಲ ಕೊಹ್ಲಿ ಆಟ.. ಕಾಲಚಕ್ರ ತಿರುಗುವುದು ಅಂದ್ರೆ ಇದೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಡೇಜಾ, ಕೊಹ್ಲಿ, ರೈನಾ.. ಈ ತ್ರಿಮೂರ್ತಿಗಳಿಗೆ ಇರೋ ಸ್ಪೆಷಲ್ ಸ್ಕಿಲ್​ಗೆ ಬೆರಗಾಗಿದೆ ಕ್ರಿಕೆಟ್ ಜಗತ್ತು!

https://newsfirstlive.com/wp-content/uploads/2024/08/VIRAT-KOHLI-3.jpg

Load More