newsfirstkannada.com

ಲಿಂಗ ವಿವಾದದಲ್ಲಿ ಸಿಲುಕಿ ಚಿನ್ನ ಗೆದ್ದ ಬಾಕ್ಸರ್.. ಪ್ಯಾರಿಸ್​ನಿಂದ ಮೂರು F-16 ಜೆಟ್​ಗಳ ರಕ್ಷಣೆಯಲ್ಲಿ ತವರಿಗೆ ವಾಪಸ್..!

Share :

Published August 14, 2024 at 1:38pm

Update August 14, 2024 at 1:39pm

    ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿರುವ ಲಿನ್ ಯು-ಟಿಂಗ್

    ಲಿನ್ ಯು-ಟಿಂಗ್ ತೈವಾನ್​​ನ ಜನಪ್ರಿಯ ಬಾಕ್ಸರ್

    ಪ್ಯಾರಿಸ್ ಒಲಿಂಪಿಕ್ಸ್​ ವಿವಾದಗಳಿಗೆನೂ ಕಮ್ಮಿ ಇರಲಿಲ್ಲ

ಪ್ಯಾರಿಸ್ ಒಲಿಂಪಿಕ್ಸ್​ ವಿವಾದಗಳಿಗೆನೂ ಕಮ್ಮಿ ಇರಲಿಲ್ಲ. ಅದರಲ್ಲೂ ಲಿಂಗ ವಿವಾದ ಭಾರೀ ಸದ್ದು ಮಾಡಿತ್ತು. ಇಬ್ಬರು ಮಹಿಳಾ ಬಾಕ್ಸರ್‌ಗಳು ಲಿಂಗ ವಿವಾದದ ಕ್ರಾಸ್‌ಫೈರ್‌ನಲ್ಲಿ ಸಿಕ್ಕಿಬಿದ್ದರು. ಅಲ್ಜೀರಿಯಾದ ಬಾಕ್ಸರ್ ಇಮಾನ್ ಖಲೀಫಾ (Imane Khelif) ಮತ್ತು ತೈವಾನ್‌ನ ಲಿನ್ ಯು-ಟಿಂಗ್ (Li Yu Ting) ಲಿಂಗದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಇಬ್ಬರು ಬಾಕ್ಸರ್ಸ್ ಪ್ಯಾರಿಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಲೇಟೆಸ್ಟ್ ಸುದ್ದಿ ಏನೆಂದರೆ ಲಿನ್ ಯು-ಟಿಂಗ್​ಗೆ ಪ್ಯಾರಿಸ್​​ನಿಂದ ತವರಿಗೆ ಹೋಗಲು ಭಾರೀ ಭದ್ರತೆ ನೀಡಲಾಗಿದೆ. ಅಚ್ಚರಿಯ ವಿಚಾರ ಏನೆಂದರೆ ಎಫ್ -16 ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಲಾಗಿದೆ. ಅಂದ್ಹಾಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತೈವಾನ್ 7 ಪದಕಗಳನ್ನು ಗೆದ್ದಿದೆ. ಅದರಲ್ಲಿ 2 ಚಿನ್ನದ ಪದಕಗಳು. ಈ ಒಂದು ಚಿನ್ನವನ್ನು ಮಹಿಳಾ ಬಾಕ್ಸರ್ ಲಿನ್ ಯು-ಟಿಂಗ್ ಗೆದ್ದಿದ್ದಾರೆ. ಚಿನ್ನದ ಪದಕ ವಿಜೇತ ಲಿನ್ ಯು-ಟಿಂಗ್ ಮತ್ತು ಇತರ ಆಟಗಾರರು ತವರಿಗೆ ಮರಳಿದ್ದಾರೆ. ಈ ವೇಳೆ ಕ್ರೀಡಾಪಟುಗಳಿದ್ದ ಆಟಗಾರರಿಗೆ ಮೂರು F-16 ಯುದ್ಧವಿಮಾನಗಳು ಭದ್ರತೆ ನೀಡಿವೆ.

ಇದನ್ನೂ ಓದಿ:ನಂಬಿಕೆ, ವಂಚನೆ..! ಪಾಂಡ್ಯ-ನಟಾಶಾ ಡಿವೋರ್ಸ್​​ಗೆ ಟ್ವಿಸ್ಟ್.. ನಟಾಶಾ ಹೀಗ್ಯಾಕೆ ಮಾಡ್ತಿದ್ದಾರೆ?

ಒಲಿಂಪಿಕ್ ಅಥ್ಲೀಟ್‌ಗಳಿಗೆ ಕೃತಜ್ಞತೆ ಸಲ್ಲಿಸಲು F-16 ಜೆಟ್ ಅನ್ನು ತೈವಾನ್ ಬಳಸಿದೆ ಎಂದು ಅಲ್ಲಿನ ರಕ್ಷಣಾ ಇಲಾಖೆ ತಿಳಿಸಿದೆ. ತೈವಾನ್‌ನ ರಕ್ಷಣಾ ಸಚಿವಾಲಯವು ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಂಡಿದೆ. ಲಿನ್ ಯು-ಟಿಂಗ್ ಫೈನಲ್‌ನಲ್ಲಿ ಪೋಲೆಂಡ್‌ನ ಜೂಲಿಯಾ ಸ್ಜೆರೆಮೆಟಾ ಅವರನ್ನು 5-0 ಅಂತರದಿಂದ ಸೋಲಿಸಿ ಚಿನ್ನ ಗೆದ್ದಿದ್ದಾರೆ. ಸೆಮಿಫೈನಲ್, ಕ್ವಾರ್ಟರ್-ಫೈನಲ್ ಮತ್ತು ರೌಂಡ್-16 ಪಂದ್ಯಗಳಲ್ಲೂ ಇವರು 5-0 ಅಂತರದಿಂದ ಗೆಲುವು ಸಾಧಿಸಿದ್ದರು. ಲಿನ್ ಅವರ ಈ ಪ್ರದರ್ಶನದಿಂದಾಗಿ ಅವರ ವಿರುದ್ಧ ಆರೋಪಗಳು ಕೇಳಿಬಂದವು. ಆಕೆ ಹೆಣ್ಣಾ, ಗಂಡಾ ಎಂಬ ಪ್ರಶ್ನೆಯನ್ನು ಕೇಳಲು ಶುರುಮಾಡಿದ್ದರು. ಲಿನ್ ಯು-ಟಿಂಗ್ ಮತ್ತು ಇಮಾನ್ ಖಲೀಫಾ 2023ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಿಂದ ಕೈಬಿಡಲ್ಪಟ್ಟ ಮಹಿಳಾ ಬಾಕ್ಸರ್‌ಗಳು. ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು.

ಇದನ್ನೂ ಓದಿ:BCCIಗೆ ಬಿಗ್ ಶಾಕ್ ಕೊಟ್ಟ ಕೋಲ್ಕತ್ತ ಪೊಲೀಸ್; ಟೀಂ ಇಂಡಿಯಾ ವೇಳಾಪಟ್ಟಿಯಲ್ಲಿ ದಿಢೀರ್ ಬದಲಾವಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಿಂಗ ವಿವಾದದಲ್ಲಿ ಸಿಲುಕಿ ಚಿನ್ನ ಗೆದ್ದ ಬಾಕ್ಸರ್.. ಪ್ಯಾರಿಸ್​ನಿಂದ ಮೂರು F-16 ಜೆಟ್​ಗಳ ರಕ್ಷಣೆಯಲ್ಲಿ ತವರಿಗೆ ವಾಪಸ್..!

https://newsfirstlive.com/wp-content/uploads/2024/08/LI-YU_TING.jpg

Load More