newsfirstkannada.com

IPL ಮಾದರಿಯಲ್ಲೇ ಮತ್ತೊಂದು ಲೀಗ್; ಬಿಸಿಸಿಐ ಮುಂದೆ ಬಿಗ್ ಪ್ರಾಜೆಕ್ಟ್​..!

Share :

Published August 14, 2024 at 3:10pm

    BCCIನ ಮುಂದಿನ ಬಿಗ್ ಪ್ರಾಜೆಕ್ಟ್ ಆಗುತ್ತಾ ಈ ಲೀಗ್?

    ದಿಗ್ಗಜರ ಮನವಿಗೆ ಅಸ್ತು ಎನ್ನುತ್ತಾ ಬಿಗ್​ಬಾಸ್​..?

    ಜಯ ಶಾ ಜೊತೆ ಚರ್ಚಿಸಿದ್ದಾರೆ ದಿಗ್ಗಜ ಆಟಗಾರರು..!

ಇಂಡಿಯನ್ ಕ್ರಿಕೆಟ್​ ಫ್ಯಾನ್ಸ್​ ಇನ್ಮುಂದೆ ಡಬಲ್ ಎಂಟರ್​ಟೈನ್ಮೆಂಟ್ ಸಿಗೋದು ಫಿಕ್ಸ್​. ಯಾಕಂದ್ರೆ ಇಂಡಿಯನ್ ಪ್ರೀಮಿಯರ್ ಲೀಗ್​ನಂತಹ ಮತ್ತೊಂದು ಪ್ರಿಮೀಯರ್​ ಲೀಗ್ ಶ್ರೀಘ್ರವೇ ಆರಂಭವಾಗಲಿದೆ. ಆ ಲೆಜೆಂಡರಿ ಕ್ರಿಕೆಟರ್​ಗಳಿಗಾಗಿಯೇ ಹೊಸ ವಿನ್ಯಾಸ ಟಿ20 ಲೀಗ್ ಶುರುವಾಗಲಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​. ವಿಶ್ವ ಕ್ರಿಕೆಟ್​ನ ರಿಚೆಸ್ಟ್​ ಲೀಗ್​. ಕ್ರಿಕೆಟ್​ ಜಗತ್ತನ್ನೇ ಬದಲಾಯಿಸಿದ ಟೂರ್ನಿ. ಅದು ಯಾವ ಮಟ್ಟಕ್ಕೆ ಅಂದ್ರೆ 2008ರಲ್ಲಿ ಶುರುವಾದ ಈ ಕಲರ್ ಫುಲ್​ ಲೀಗ್, ಕ್ರಿಕೆಟ್​ ಲೋಕವನ್ನೇ ಆಳ್ತಿದೆ. ಅಷ್ಟರ ಮಟ್ಟಿಗೆ ವಿಶ್ವ ಕ್ರಿಕೆಟ್​​ನ ಬ್ರ್ಯಾಂಡ್​ ಆಗಿರೋ ಐಪಿಎಲ್ ಇರೋ ಕ್ರೇಜ್​​ ನಿಜಕ್ಕೂ ನಂಬಲು ಅಸಾಧ್ಯ. ಆದ್ರೀಗ ಇಂಥದ್ದೇ ಮತ್ತೊಂದು ಐಪಿಎಲ್​ ಟೂರ್ನಿಯನ್ನ ಆಯೋಜಿಸಲು ಬಿಸಿಸಿಐ ರೆಡಿಯಾಗಿದೆ.

ಇದನ್ನೂ ಓದಿ: ಪೂಜೆ, ಹೋಮ, ಹವನ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ; ನಟ ದೊಡ್ಡಣ್ಣ ವಿರುದ್ಧ ಕ್ರಮಕ್ಕೆ ಆಗ್ರಹ

IPL​ ಮಾದರಿ ಮತ್ತೊಂದು T-20​​​​​​​​​​​​​​​​​​​​​​​​​​​​ ಲೀಗ್​..!
ಈಗಾಗಲೇ ಬಿಸಿಸಿಐ ಇಂಡಿಯನ್ ಪ್ರಿಮೀಯರ್ ಲೀಗ್​​, ವುಮೆನ್ಸ್​ ಪ್ರೀಮಿಯರ್ ಲೀಗ್​ನ ಆಯೋಜಿಸಿ ಸಕ್ಸಸ್ ಕಂಡಿದೆ. ವಿಶ್ವದಲ್ಲೇ ದುಬಾರಿ ಲೀಗ್​ಗಳಾಗಿ ಜನಪ್ರಿಯತೆ ಪಡೆದಿವೆ. ಈ ನಡುವೆ ಮಾಜಿ ಆಟಗಾರರು, ಐಪಿಎಲ್​​ನಂತ ಮತ್ತೊಂದು ಟಿ20 ಲೀಗ್​ ನಡೆಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಕೆಲ ಲೆಜೆಂಡರಿ ಆಟಗಾರರು ಬಿಸಿಸಿಐ ಕಾರ್ಯದರ್ಶಿ ಜಯ ಶಾರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಜಯ ಶಾ ಕೂಡ ಪೂರಕವಾಗಿಯೇ ಸ್ಪಂದಿಸಿದ್ದಾರೆ ಎನ್ನಲಾಗ್ತಿದೆ.

ಈಗಾಗಲೇ ನಿವೃತ್ತಿ ಘೋಷಿಸಿರುವ ಕ್ರಿಕೆಟಿಗರು, ಚುಟುಕು ಕ್ರಿಕೆಟ್​​ನಲ್ಲಿ ಬ್ಯುಸಿಯಾಗಿದ್ದಾರೆ. ಯುವರಾಜ್ ಸಿಂಗ್, ಸುರೇಶ್​ ರೈನಾ, ಇರ್ಫಾನ್ ಪಠಾಣ್, ಯೂಸೂಫ್ ಪಠಾಣ್ ಸೇರಿದಂತೆ ಕೆಲ ಆಟಗಾರರ ಲೆಜೆಂಡ್ಸ್​ ಲೀಗ್​ನಲ್ಲಿ ಆಡ್ತಿದ್ದಾರೆ. ತಮ್ಮ ಸಾಮಾರ್ಥ್ಯ ಕುಗ್ಗಿಲ್ಲ ಅನ್ನೋದನ್ನ ಫ್ರೂವ್ ಮಾಡಿದ್ದಾರೆ. ಕೆಲ ಮಾಜಿ ಆಟಗಾರರು ಖಾಸಗಿ ಲೀಗ್​ಗಳ ಬದಲಿಗೆ ಬಿಸಿಸಿಐ ನೇತೃತ್ವದಲ್ಲೇ ಆಡೋಕೆ ಬಯಸ್ತಿದ್ದಾರೆ.

ಇದನ್ನೂ ಓದಿ:BCCI ಕಟ್ಟಪ್ಪಣೆಗೆ ಬೆಚ್ಚಿಬಿದ್ದ ಟೀಮ್​ ಇಂಡಿಯಾ ಸೂಪರ್ ಸ್ಟಾರ್ಸ್​.. ಕೊಹ್ಲಿ, ರೋಹಿತ್​ಗೂ ಶಾಕ್..!

ಹೇಗಿರಲಿದೆ ಇಂಡಿಯನ್​ ಲೆಜೆಂಡ್ಸ್ ಲೀಗ್​
ಥೇಟ್ ಐಪಿಎಲ್​​ನಲ್ಲಿ ರೂಪಿಸಿದಂತೆಯೇ ಕ್ಯಾಪಿಟಲ್ ಸಿಟಿಗಳ ತಂಡವನ್ನು ರೂಪಿಸಲಾಗುತ್ತೆ. ಬಿಡ್ ಮೂಲಕವೇ ಹರಾಜಿನಲ್ಲಿರುವ ಮಾಜಿ ಆಟಗಾರರನ್ನು ಖರೀದಿಸಲಾಗುತ್ತೆ. ಆಯಾ ರಾಜ್ಯಗಳ ಐಕಾನಿಕ್​​​​​ ಆಟಗಾರರು ಆಯಾ ತಂಡವನ್ನ ಪ್ರತಿನಿಧಿಸಲಿದ್ದಾರೆ. ಇದು ಕಾರ್ಯರೂಪಕ್ಕೆ ಬಂದ್ರೆ ಫೇವರಿಟ್ ಪ್ಲೇಯರ್​ಗಳಾಗಿರುವ ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್​​​​ರನ್ನ ಎದುರಾಳಿಗಳಾಗಿ ಅಂಗಳದಲ್ಲಿ ನೋಡೋದ್ರಲ್ಲಿ ಅನುಮಾನವೇ ಇಲ್ಲ. ಇದು ಫ್ಯಾನ್ಸ್​ಗೂ ಕಿಕ್ ಕೊಡೊದ್ರಲ್ಲಿ ಅನುಮಾನವೇ ಇಲ್ಲ.

ಹಿಟ್​ ಆಗಿದೆ ಲೆಜೆಂಡ್ಸ್​ ಲೀಗ್..
ಈಗಾಗಲೇ ಲೆಜೆಂಡ್ಸ್​ ಕ್ರಿಕೆಟ್​ ಲೀಗ್ ಜನಪ್ರಿಯತೆ ಪಡೆದುಕೊಳ್ತಿದೆ. ರೋಡ್ ಸೇಫ್ಟಿ ಲೀಗ್, ಲೆಜೆಂಡ್ಸ್​ ಲೀಗ್ ಕ್ರಿಕೆಟ್​, ವರ್ಲ್ಡ್​​ ಚಾಂಪಿಯನ್ಸ್​ ಆಫ್ ಲೆಜೆಂಡ್ಸ್​ ಹೆಸರಿನಲ್ಲಿ ಟಿ20 ಲೀಗ್​ಗಳು ನಡೀತಿವೆ. ಇತ್ತಿಚೆಗಷ್ಟೇ ಇಂಗ್ಲೆಂಡ್​ನಲ್ಲಿ ನಡೆದ ವರ್ಲ್ಡ್​​ ಚಾಂಪಿಯನ್ಸ್​ ಆಫ್ ಲೆಜೆಂಡ್ಸ್​ ಟೂರ್ನಿಯಲ್ಲಿ ಯುವರಾಜ್ ಸಿಂಗ್ ನೇತೃತ್ವದ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಭಾರೀ ಸಕ್ಸಸ್​ ಅನ್ನೇ ಕಂಡಿವೆ. ಈ ಟೂರ್ನಿಗಳನ್ನು ನೋಡಲು ಫ್ಯಾನ್ಸ್​ ಕೂಡ ಸ್ಟೇಡಿಯಂಗೆ ಬಂದಿದ್ದಿದೆ. ಹೀಗಾಗಿ ಭಾರತದಲ್ಲಿರುವ ಕ್ರಿಕೆಟ್ ಕ್ರೇಜ್​​ಗೆ ಬಿಸಿಸಿಐ ಅಸ್ತು ಎನ್ನುವ ಸಾಧ್ಯತೆ ದಟ್ಟವಾಗಿದೆ. ಇದಿಷ್ಟೇ ಅಲ್ಲ, ಇಂಥ ಲೆಜೆಂಡ್ಸ್​ ಲೀಗ್ ಯಾವ ಕ್ರಿಕೆಟ್ ಸಂಸ್ಥೆಯೂ ಆಯೋಜಿಸಿಲ್ಲ. ಭಾರತದಲ್ಲಿ ಕ್ರಿಕೆಟ್​​ಗಿರುವ ಕ್ರೇಜ್​​ ಬಗ್ಗೆ ಬಿಡಿಸಿ ಹೇಳುವ ಅಗತ್ಯವಂತೂ ಇಲ್ಲ, ಈ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಲಿರುವ ಬಿಸಿಸಿಐಗೆ ಲಾಭವೂ ಇದ್ದೇ ಇದೆ.

ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!

ಮುಂದಿನ ವರ್ಷವೇ ಹೊಸ ಲೀಗ್!
ಐಪಿಎಲ್ ಹಾಗೂ ವುಮೆನ್ಸ್ ಪ್ರೀಮಿಯರ್ ಲೀಗ್​ನ ಸಿದ್ಧತೆಯಲ್ಲಿ ಬಿಸಿಸಿಐ ಬ್ಯುಸಿಯಾಗಿದೆ. ಈ ನಡುವೆಯೇ ಮಾಜಿ ಕ್ರಿಕೆಟರ್​ಗಳು ಪ್ರಪೋಸಲ್ ಇಟ್ಟಿದ್ದಾರೆ. ಈಗಲೇ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡೋದು ಅನುಮಾನ. ಬಿಸಿಸಿಐಗೂ ಲೆಜೆಂಡರಿ ಕ್ರಿಕೆಟಿಗರ ಟೂರ್ನಿ ಆಯೋಜಿಸುವ ಒಲವಿದ್ದು, 2025 ರಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದ್ದು, ಏನಾಗುತ್ತೆ ಅನ್ನೋದನ್ನ ಕಾದು ನೋಡೊಣ.

ಇದನ್ನೂ ಓದಿ:ಖುಷಿಯಲ್ಲಿದ್ದ ಬೆನ್ನಲ್ಲೇ ದುಃಖ; ಪೃಥ್ವಿ ಷಾಗೆ ಮತ್ತೆ ಬಿಗ್ ಶಾಕ್.. ಈಗ ಏನಾಯ್ತು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL ಮಾದರಿಯಲ್ಲೇ ಮತ್ತೊಂದು ಲೀಗ್; ಬಿಸಿಸಿಐ ಮುಂದೆ ಬಿಗ್ ಪ್ರಾಜೆಕ್ಟ್​..!

https://newsfirstlive.com/wp-content/uploads/2024/05/RCB-vs-CSK.jpg

Load More