newsfirstkannada.com

ನಿಲ್ಲೆ, ನಿಲ್ಲೆ ತುಂಗಭದ್ರೆ.. ಪೋಲಾಗ್ತಿರುವ ಜೀವಜಲ ತಡೆಯಲು ಹರಸಾಹಸ; ತಾತ್ಕಾಲಿಕ ಗೇಟ್‌ ಅಳವಡಿಕೆ ಏನಾಯ್ತು?

Share :

Published August 15, 2024 at 10:22pm

    ಜೀರೋ ಟ್ರಾಫಿಕ್.. ಖಾಕಿ ಸರ್ಪಗಾವಲಿನಲ್ಲಿ ತಾತ್ಕಾಲಿಕ ಗೇಟ್ ಆಗಮನ

    ಶುಭ ಮುಹೂರ್ತದಲ್ಲಿ ಶುರುವಾಗಿದೆ ತಾತ್ಕಾಲಿಕ ಗೇಟ್​ ಅಳವಡಿಕೆ ಸಾಹಸ

    ಗೇಟ್ ಇನ್‌ಸ್ಟಾಲ್ ಯಶಸ್ವಿಯಾದ್ರೆ ಉಳಿಯೋದು ಎಷ್ಟು TMC ನೀರು?

ಇಡೀ ದೇಶದ ಕಣ್ಣೀಗ ತುಂಗಭದ್ರಾ ಜಲಾಶಯದತ್ತ ನೆಟ್ಟಿದೆ. TB DAMನ ಕ್ರಸ್ಟ್​ ಗೇಟ್​ ಮುರಿದು ಐದು ದಿನಗಳಾಗಿವೆ. ಇದೀಗ ಸಿಎಂ ಸೂಚನೆಯಂತೆ ರೈತರಿಗಾಗಿ ಡ್ಯಾಂನ ಅಧಿಕಾರಿಗಳು ದೊಡ್ಡ ಸಾಹಸಮಯ ಕೆಲಸಕ್ಕೆ ಕೈ ಹಾಕಿದ್ದಾರೆ. ಪೋಲಾಗುತ್ತಿರುವ ನೀರನ್ನು ತಡೆಯಲು ಜಿಂದಾಲ್​ನಿಂದ ತರಿಸಿರುವ ಸ್ಟಾಪ್​ ಲಾಗ್​ ಗೇಟ್​ ಅಳವಡಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಇಳಿಕೆ.. ಎಷ್ಟು TMC ನೀರು ಪೋಲಾಗಿದೆ?

ಪೋಲಾಗ್ತಿರುವ ತುಂಗಭದ್ರೆಯನ್ನು ತಡೆಯಲು ಹರಸಾಹಸ
ಶುಭ ಮುಹೂರ್ತದಲ್ಲಿ ತಾತ್ಕಾಲಿಕ ಗೇಟ್​ ಅಳವಡಿಕೆ ಆರಂಭ
ಮೂರು ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ಗೇಟ್​ ಮುರಿದು ಹೋಗಿ ಐದು ದಿನಗಳಾಗಿದೆ. ಅನ್ನದಾತರಿಗೆ ವರವಾಗಬೇಕಿದ್ದ ಜೀವಜಲ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹೀಗಾಗಿ ಬೋರ್ಗರೆದು ಹರಿಯುತ್ತಿರುವ ನೀರನ್ನು ತಡೆಯಲು ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ದುರ್ಘಟನೆ ನಡೆದ ಐದು ದಿನಗಳ ಬಳಿಕ ತಾತ್ಕಾಲಿಕ ಗೇಟ್​ ಅಳವಡಿಕೆ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

ಡ್ಯಾಂ ತಜ್ಞ ಕನ್ಹಯ್ಯ ನೇತೃತ್ವದಲ್ಲಿ ಸ್ಪಾಪ್​ ಗೇಟ್​ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಾರಾಯಣ ಸ್ಟೀಲ್ ವರ್ಕ್ ‌, ಹಮೀದ್ ಇಂಜಿನಿಯರ್ ‌ವರ್ಕ್ಸ್ ಹಾಗೂ ಜಿಂದಾಲ್ ಕಂಪನಿ. ಈ ಮೂರು ಕಂಪನಿಗಳು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಮೂರು ದಿನದೊಳಗೆ ಗೇಟ್ ಇನ್‌ಸ್ಟಾಲ್ ಯಶಸ್ವಿಯಾದ್ರೆ ಜಲಾಶಯದಲ್ಲಿ ಕನಿಷ್ಠ 65 TMC ನೀರು ಉಳಿಸಲು ಸಾಧ್ಯವಿದೆ. ಹೀಗಾಗಿ ಸದ್ಯಕ್ಕೆ ಇದೊಂದೇ ಉತ್ತಮ ಮಾರ್ಗ ಎಂದು ಸ್ಟಾಪ್​ಲಾಗ್​ ಗೇಟ್​ ಅಳವಡಿಸುತ್ತಿದ್ದಾರೆ.

ಇದನ್ನೂ ಓದಿ: ‘ಭಗವಂತನ ಮೇಲೆ ಭಾರ ಹಾಕಿ ಕೆಲಸ ಶುರು ಮಾಡ್ತೇವೆ’.. ಅಪಾಯದಲ್ಲಿರೋ ತುಂಗಭದ್ರಾ ಡ್ಯಾಂ ರಿಪೇರಿಗೆ ಮುಂದಾದ ತಜ್ಞ

ಜೀರೋ ಟ್ರಾಫಿಕ್.. ಖಾಕಿ ಸರ್ಪಗಾವಲಿನಲ್ಲಿ ಗೇಟ್ ಆಗಮನ
ಸ್ಟಾಪ್​ ಲಾಗ್​ ಗೇಟ್​ಗಳು ಕಳೆದ ರಾತ್ರಿಯೇ ಟಿ.ಬಿ ಡ್ಯಾಗ್​ಗೆ ಬರಬೇಕಿತ್ತು. ಆದ್ರೆ ಮಳೆಯಿಂದಾಗಿ ವಿಳಂಬವಾಗಿತ್ತು. ಇಂದು ಬೆಳಗ್ಗೆ ಬಳ್ಳಾರಿಯ ಜಿಂದಾಲ್ ಕಂಪನಿಯಿಂದ ಹೊಸಪೇಟೆಗೆ ಜೀರೋ ಟ್ರಾಫಿಕ್​ ಮತ್ತು ಖಾಕಿ ಸರ್ಪಗಾವನಲ್ಲಿ ತರಲಾಗಿದೆ.

ತಾತ್ಕಾಲಿಕ ಗೇಟ್​ ಅಳವಡಿಕೆ!
14 ಟನ್ ಗಾತ್ರದ 5 ಸ್ಟಾಪ್ ಲಾಗ್ ಗೇಟ್​ಗಳನ್ನು ಟಿಬಿ ಡ್ಯಾಂಗೆ ತರಲಾಗಿದೆ. ಜಿಂದಾಲ್ ಕಂಪನಿಯಲ್ಲಿ ತಯಾರಾಗಿರುವ ಗೇಟ್​ಗಳು ಒಂದೊಂದು 60 ಅಡಿ ಉದ್ದ 4 ಅಡಿ ಅಗಲದ ಸ್ಟಾಪ್ ಲಾಗ್ ಗೇಟ್ ಆಗಿವೆ. ಮೊದಲ ಹಂತದಲ್ಲಿ 3 ಗೇಟ್​ಗಳನ್ನು ಇನ್​ಸ್ಟಾಲ್​ ಮಾಡಲು ಪ್ಲಾನ್​ ಮಾಡಲಾಗಿದೆ. ಇದರಿಂದ ಒಟ್ಟು 70 ಟಿಎಂಸಿ ನೀರು ತಡೆಯಬಹುದಾಗಿದೆ. ಸುಮಾರು 100ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಹರಿಯೋ ನೀರಿನಲ್ಲಿ ಸ್ಟಾಪ್ ಲಾಗ್ ಗೇಟ್​ ಅಳವಡಿಕೆ ಕಾರ್ಯ ಬಿರುಸಿನಿಂದ ಸಾಗಿದೆ.

26 ಗಂಟೆಗಳ ಕಾರ್ಯ.. ನಾಳೆ ಗುಡ್​ನ್ಯೂಸ್​ ಸಿಗುವ ವಿಶ್ವಾಸ!
ಹರಿಯೋ ನೀರಿನಲ್ಲಿ ಗೇಟ್​ ಅಳವಡಿಕೆ ಕಾರ್ಯ ಅಂದುಕೊಂಡಷ್ಟು ಸುಲಭವಲ್ಲ. ಸ್ವಲ್ಪ ಯಾಮಾರಿದ್ರೂ, ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಬಹಳ ಎಚ್ಚರಿಕೆಯಿಂದ ಸ್ಟಾಪ್​ಲಾಗ್​ ಗೇಟ್​ ಅಳವಡಿಕೆ ಮಾಡಲಾಗ್ತಿದೆ. ಸುಮಾರು 26 ಗಂಟೆಗಳ ಕಾಲ ಈ ಕಾರ್ಯಾಚರಣೆ ನಡೆಯಲಿದೆ. 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಇದುವರೆಗೆ 7 ಅಡಿಯಷ್ಟು. ಅಂದ್ರೆ 27 ಟಿಎಂಸಿ ನೀರು ಖಾಲಿಯಾಗಿದ್ದು ಸದ್ಯ 78 ಟಿಎಂಸಿ ನೀರಿದೆ. ಕ್ರಸ್ಟ್​ ಗೇಟ್ ಅಳವಡಿಕೆಗೆ ಒಟ್ಟು 60 ಟಿಎಂಸಿ ನೀರು ಖಾಲಿ ಮಾಡುವ ಅನಿರ್ವಾಯತೆ ಇತ್ತು. ಇನ್ನು ನೀರಿನ ಒತ್ತಡ ಹೆಚ್ಚಾದ್ರೆ ಸಮಸ್ಯೆ ಎದುರಾಗಲಿದೆ. ಹೀಗಾಗಿ 33 ಗೇಟ್​ಗಳ ಮೂಲಕ ಸದ್ಯ 1.40 ಲಕ್ಷ ಕ್ಯುಸೆಕ್ಸ್ ನೀರು ಹೊರಬಿಡಲಾಗ್ತಿದ್ದು, ನಾಳೆ ಸಂಜೆಯೊಳಗೆ ಗುಡ್​ನ್ಯೂಸ್​ ಸಿಗಲಿದೆ ಎಂದು ಡ್ಯಾಂ ತಜ್ಞ ಕನ್ಹಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಟಾಪ್​ ಲಾಗ್​ ಬ್ಯಾಲೆನ್ಸ್‌ ಆಗದ ಹಿನ್ನೆಲೆಯಲ್ಲಿ ಆರಂಭದಲ್ಲಿ ಕೊಂಚ ತೊಡಕುಂಟಾಯ್ತು. ಬಳಿಕ ಬ್ಯಾಲೆನ್ಸ್​ ಮಾಡಿ ಮೇಲೆತ್ತಲು ಕನ್ಹಯ್ಯ ಸೂಚನೆ ನೀಡಿದರು. ಇನ್ನೊಂದೆಡೆ ಗೇಟ್​ನ ಜಾಗದಲ್ಲಿ ಚೈನ್​ ಲಿಂಕ್​ ಮಿಸ್​ ಮ್ಯಾಚ್​ ಆದ ಕಾರಣ, ಓರ್ವ ತಂತ್ರಜ್ಙನನ್ನು ಕ್ರೇನ್​ ಮೂಲಕ ಗೇಟ್​ ಭಾಗಕ್ಕೆ ಇಳಿಸಿ ಸರಿ ಪಡಿಸಲು ಯತ್ನಿಲಾಯಿತು.

ಇದನ್ನೂ ಓದಿ: ಫಸ್ಟ್‌ ನೈಟ್‌ಗೆ ಹೋಗೋ ಮುನ್ನ ಇದನ್ನು ತಿನ್ನಲೇಬೇಕು; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಅನ್ನದಾತರ ಹಿತದೃಷ್ಟಿಗಾಗಿ ದೊಡ್ಡ ರಿಸ್ಕ್​ ತೆಗೆದುಕೊಂಡು ಹರಿಯುವ ನೀರಲ್ಲೇ ಸ್ಟಾಪ್​ ಲಾಗ್​ ಗೇಟ್​ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಇವರ ಈ ಕಾರ್ಯ ಯಶಸ್ವಿಯಾಗಲಿ ಎಂದು ಇಡೀ ರಾಜ್ಯದ ಜನತೆಯೇ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಲ್ಲೆ, ನಿಲ್ಲೆ ತುಂಗಭದ್ರೆ.. ಪೋಲಾಗ್ತಿರುವ ಜೀವಜಲ ತಡೆಯಲು ಹರಸಾಹಸ; ತಾತ್ಕಾಲಿಕ ಗೇಟ್‌ ಅಳವಡಿಕೆ ಏನಾಯ್ತು?

https://newsfirstlive.com/wp-content/uploads/2024/08/TB-Dam-Gate-Cut-2.jpg

Load More