newsfirstkannada.com

ವಿನಯ್​ ಕುಮಾರ್​, ಬಾಲಾಜಿ ಸೈಡ್​ಲೈನ್.. ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿದೆ ಭಾರೀ ಲಾಬಿ..!

Share :

Published August 16, 2024 at 9:08am

    ಸೌತ್​ ಆಫ್ರಿಕಾದ ಈ ಸ್ಪೀಡ್​ಸ್ಟರ್​​ ಎಲ್ಲರಿಗಿಂತ ಡಿಫ್ರೆಂಟ್

    ಟೀಮ್​ ಇಂಡಿಯಾಗೆ ಮಾರ್ಕೆಲ್​ ಬೌಲಿಂಗ್​ ಕೋಚ್​

    ಮಾರ್ಕೆಲ್​ ಆಯ್ಕೆಯ ಹಿಂದಿರೋ ಲೆಕ್ಕಾಚಾರ ಏನು?

ಹೆಡ್​ ಕೋಚ್​ ಗೌತಮ್​ ಗಂಭೀರ್​ ಬೆಂಬಲ ಇದ್ದಿದ್ರಿಂದ ಮಾರ್ನೆ ಮಾರ್ಕೆಲ್​ ಬೌಲಿಂಗ್​​ ಕೋಚ್​ ಆಗ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆ ನಿರೀಕ್ಷೆ ಕೊನೆಗೂ ನಿಜವಾಗಿದೆ. ಈ ಆಯ್ಕೆಗೆ ಗಂಭೀರ್​ ಲಾಬಿ ಮಾತ್ರ ಕಾರಣವಲ್ಲ. ಮಾರ್ಕೆಲ್​ ಸೆಲೆಕ್ಷನ್​ ಹಿಂದೆ ಇನ್ನೂ ಹಲವು ಲೆಕ್ಕಾಚಾರಗಳಿವೆ.

ನಿರೀಕ್ಷೆಯಂತೆ ಟೀಮ್​ ಇಂಡಿಯಾದ ನೂತನ ಬೌಲಿಂಗ್​ ಕೋಚ್​ ಆಗಿ ಸೌತ್​ ಆಫ್ರಿಕಾ ಸ್ಪೀಡ್ ​ಸ್ಟರ್​​ ಮಾರ್ನೆ ಮಾರ್ಕೆಲ್​ ಎಂಟ್ರಿ ಕೊಟ್ಟಿದ್ದಾರೆ. ಆರ್​. ವಿನಯ್​ ಕುಮಾರ್​, ಲಕ್ಮೀಪತಿ ಬಾಲಾಜಿಯಂತಹ ಟೀಮ್​ ಇಂಡಿಯಾದ ಮಾಜಿ ವೇಗಿಗಳು ಕೂಡ ಈ ಬೌಲಿಂಗ್​ ಕೋಚ್​ ರೇಸ್​​ಗಿಳಿದಿದ್ರು. ಇವರೆಲ್ಲರನ್ನ ಹಿಂದಿಕ್ಕಿ ಮಾರ್ನೆ ಮಾರ್ಕೆಲ್​ ಕೋಚ್​ ಆಗಿ ಆಯ್ಕೆಯಾಗಿದ್ದಾರೆ. ಮಾರ್ನೆ ಮಾರ್ಕೆಲ್​ ಆಯ್ಕೆಗೆ ಹೆಡ್​ ಕೋಚ್​ ಗಂಭೀರ್​ ಲಾಬಿ ಇದೆ ಅನ್ನೋದು ಓಪನ್​ ಸೀಕ್ರೆಟ್.​ ಅದ್ರ ಹೊರತಾಗಿ ಮಾರ್ಕೆಲ್​ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ.

ಇದನ್ನೂ ಓದಿ:ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಜೋರಾ..? ಈ ಮುಹೂರ್ತದಲ್ಲಿ ಮಾತ್ರ ಪೂಜೆ ಮಾಡಿ.. Don’t Miss

ಎಲ್ಲರಿಗಿಂತ ಡಿಫ್ರೆಂಟ್​ ಸೌತ್​ ಆಫ್ರಿಕಾದ ಈ ಸ್ಪೀಡ್​ಸ್ಟರ್​
ವೆಂಕಟೇಶ್​ ಪ್ರಸಾದ್​, ಎರಿಕ್​ ಸಿಮನ್ಸ್​, ಜೋ ಡೆವಿಸ್​, ಭರತ್​ ಅರುಣ್​​ ಹಾಗೂ ಪರಾಸ್​ ಮಾಂಬ್ರೆ.. ಇವರೆಲ್ಲರೂ ಟೀಮ್​ ಇಂಡಿಯಾ ಬೌಲಿಂಗ್​ ಕೋಚ್​ಗಳಾಗಿ ಈ ಹಿಂದೆ ಕೆಲಸ ಮಾಡಿದ್ದಾರೆ. ಇವರೆಲ್ಲರಿಗಿಂತ ಮಾರ್ನೆ ಮಾರ್ಕೆಲ್​ ಸ್ಪೆಷಲ್​​.! ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಇವರೆಲ್ಲರಿಗಿಂತ ಮಾರ್ಕೆಲ್​ ಹೆಚ್ಚು ಸಕ್ಸಸ್​ ಕಂಡಿದ್ದಾರೆ. 86 ಟೆಸ್ಟ್, 117 ಏಕದಿನ, 44 ಟಿ20 ಆಡಿದ್ದಾರೆ. ಈ ಹಿಂದಿದ್ದ ಯಾವೊಬ್ಬ ಬೌಲಿಂಗ್​ ಕೋಚ್​ಗೂ ಇಷ್ಟು ಇಂಟರ್​​ನ್ಯಾಷನಲ್​ ಪಂದ್ಯಗಳನ್ನ ಆಡಿದ ಅನುಭವವೇ ಇರಲಿಲ್ಲ.

ಕೋಚಿಂಗ್​ನಲ್ಲೂ ಮಾರ್ಕೆಲ್​ಗಿದೆ ಅಪಾರ ಅನುಭವ
ಈ ಹಿಂದೆ ಇದ್ದ ಬೌಲಿಂಗ್​ ಕೋಚ್​ಗಳಿಗೆ ಹೋಲಿಸಿದ್ರೆ ಕೋಚಿಂಗ್​ ಅನುಭವದ ವಿಚಾರದಲ್ಲೂ ಮಾರ್ನೆ ಮಾರ್ಕೆಲ್​ ಬೆಸ್ಟ್​ ಎನಿಸಿದ್ದಾರೆ. ಫ್ರಾಂಚೈಸಿ ಕ್ರಿಕೆಟ್​ ಜೊತೆಗೆ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲೂ ಆಟಗಾರರಿಗೆ ಪಾಠ ಮಾಡಿ ಸಕ್ಸಸ್​ ಕಂಡಿದ್ದಾರೆ.

ಮಾರ್ಕೆಲ್​ ಕೋಚಿಂಗ್​ ಅನುಭವ

  • 3 ಸೀಸನ್​ಗಳಲ್ಲಿ IPLನ ಲಕ್ನೋ ತಂಡದ ಬೌಲಿಂಗ್​ ಕೋಚ್​
  • 2023ರಲ್ಲಿ ಪಾಕಿಸ್ತಾನ ಕ್ರಿಕೆಟ್​​ ತಂಡಕ್ಕೆ ಮಾರ್ಗದರ್ಶನ
  • 2022ರ T20 ವಿಶ್ವಕಪ್​ ವೇಳೆ ನಮೀಬಿಯಾದ ಸಲಹೆಗಾರ
  • ಮಹಿಳಾ T20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​ ತಂಡಕ್ಕೆ ಪಾಠ
  • SAT20 ಲೀಗ್​ನಲ್ಲಿ ಡರ್ಬನ್​ ಸೂಪರ್​ ಜೈಂಟ್ಸ್​ನ ಕೋಚ್​​

ಅಗ್ರೆಸ್ಸಿವ್​ ಆಟವೇ ಬಲ, ರಿಯಲ್​​ ಫೈಟರ್​​
ಟೀಮ್​ ಇಂಡಿಯಾದ ಹೆಡ್​ ಕೋಚ್​ ಗೌತಮ್ ಗಂಭೀರ್​ರಂತೆ ಮಾರ್ನೆ ಮಾರ್ಕೆಲ್​ ಕೂಡ ಅಗ್ರೆಸ್ಸಿವ್​ ಆಟಕ್ಕೆ ಫೇಮಸ್​. ಸೌತ್​ ಅಫ್ರಿಕಾ ಪರ ಆಡಿದ ಪಂದ್ಯಗಳಲ್ಲಿ ಅಗ್ರೆಸ್ಸಿವ್​ ಆ್ಯಟಿಟ್ಯೂಡ್​ನಿಂದಲೇ ಗಮನ ಸೆಳೆದಿದ್ರು. ಮೈದಾನಕ್ಕೆ ಇಳಿದ ಮೇಲೆ ರಿಯಲ್​ ಫೈಟರ್​​ನಂತೆ ಹೋರಾಡ್ತಿದ್ದ ಮಾರ್ಕೆಲ್​, ಸೌತ್​ ಆಫ್ರಿಕಾ ಪಾಲಿನ ಮ್ಯಾಚ್​ ವಿನ್ನರ್​ ಆಗಿ ರೂಪುಗೊಂಡಿದ್ರು. ಮಾರ್ನೆ ಮಾರ್ಕೆಲ್​ರ ಫೈಟಿಂಗ್​ ಸ್ಪಿರಿಟ್​ ಟೀಮ್​ ಇಂಡಿಯಾಗೆ ನೆರವಾಗಲಿದೆ.

ಇದನ್ನೂ ಓದಿ:‘ಈತ ಅಂದ್ರೆ ನಂಗೆ ಭಾರೀ ಭಯ..’ ಬ್ಯಾಟಿಂಗ್ ವೇಳೆ ರೋಹಿತ್ ಭಯದಿಂದ ಬೆಚ್ಚಿ ಬೀಳೋದು ಯಾರಿಗೆ?

ಯುವ ವೇಗಿಗಳ ಪಾಲಿಗೆ ದಿ ಬೆಸ್ಟ್​​ ಗುರು
ಮೊಹಮ್ಮದ್​ ಶಮಿ, ಜಸ್​ಪ್ರಿತ್​ ಬೂಮ್ರಾ.. ಇಬ್ಬರನ್ನ ಹೊರತುಪಡಿಸಿದ್ರೆ ಟೀಮ್​ ಇಂಡಿಯಾದಲ್ಲಿರೋದು ಯುವ ವೇಗಿಗಳೇ. ಮೊಹಮ್ಮದ್​ ಸಿರಾಜ್​​ಗೆ ಅನುಭವವಿದ್ರೂ ಇನ್​ಕನ್ಸಿಸ್ಟೆನ್ಸಿ ಸಮಸ್ಯೆಯಿದೆ. ಆರ್ಷ್​ದೀಪ್​ ಸಿಂಗ್​, ಮಯಾಂಕ್​ ಯಾದವ್​, ಉಮ್ರಾನ್​ ಮಲಿಕ್​.. ಹೀಗೆ ಹಲವಾರು ಯಂಗ್​ಸ್ಟರ್​ ಟೀಮ್​ ಇಂಡಿಯಾದ ಫ್ಯೂಚರ್​ ಸ್ಟಾರ್ಸ್​ ಎನಿಸಿಕೊಂಡಿದ್ದಾರೆ. ಇವರೆಲ್ಲರನ್ನೂ ಭವಿಷ್ಯದ ಸೂಪರ್​​ ಸ್ಟಾರ್​​ಗಳನ್ನಾಗಿ ರೂಪಿಸುವಲ್ಲಿ ಅನುಭವಿ ಮಾರ್ಕೆಲ್​ ಪ್ರಮುಖ ಪಾತ್ರ ನಿರ್ವಹಿಸಬಲ್ಲರು.

ಟೀಮ್​ ಇಂಡಿಯಾ ಬೇಕಾದ ಪರ್ಫೆಕ್ಟ್​ ಟೀಮ್​ಮ್ಯಾನ್​
ನೂತನ ಬೌಲಿಂಗ್​ ಕೋಚ್​ ಮಾರ್ನೆ ಮಾರ್ಕೆಲ್​ ಒಬ್ಬ ಪರ್ಫೆಕ್ಟ್​ ಟೀಮ್​ ಮ್ಯಾನ್ ಕೂಡ ಹೌದು.! ತಂಡದ ಒಳಿತಿಗಾಗಿ ಯಾವುದೇ ಕೆಲಸವನ್ನ ಬೇಕಾದ್ರೂ ಸಮರ್ಥವಾಗಿ ನಿಭಾಯಿಸಬಲ್ಲ ಗುಣ ಮಾರ್ಕೆಲ್​​ಗಿದೆ. ಈ ಎಲ್ಲ ಕಾರಣಗಳಿಂದಲೇ ಟೀಮ್​ ಇಂಡಿಯಾ ಮಾಜಿ ವೇಗಿಗಳನ್ನ ಹಿಂದಿಕ್ಕಿ ಮಾರ್ಕೆಲ್​ ಬೌಲಿಂಗ್​​ ಕೋಚ್​ ಹುದ್ದೆಗೇರಿದ್ದಾರೆ. ಪಟ್ಟಕ್ಕೇರಿರುವ ಮಾರ್ಕೆಲ್​ ಮೇಲೆ ನಿರೀಕ್ಷೆಗಳು ಸಾಕಷ್ಟಿದ್ದು, ಎಷ್ಟರಮಟ್ಟಿಗೆ ಸಕ್ಸಸ್​​ ಕಾಣ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿನಯ್​ ಕುಮಾರ್​, ಬಾಲಾಜಿ ಸೈಡ್​ಲೈನ್.. ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿದೆ ಭಾರೀ ಲಾಬಿ..!

https://newsfirstlive.com/wp-content/uploads/2024/08/MORKEL-BEST.jpg

Load More