ಆ 2 ಘಟನೆಗಳು ಕೊಹ್ಲಿ ಫ್ಯಾನ್ಸ್ ಮರೆಯಲು ಅಸಾಧ್ಯ!
ಫ್ಯಾನ್ಸ್ಗೆ ಕಾಡುತ್ತವೇ ಯಾಕೆ ಆ ಎರಡು ಘಟನೆಗಳು?
ಎರಡು T20 ವಿಶ್ವಕಪ್.. ಎರಡು ಮೂಮೆಂಟ್ಸ್ ಸ್ಮರಣೀಯ
ಜೆರ್ಸಿ ನಂಬರ್ 18. ಇದು ಕಿವಿಗೆ ಅಪ್ಪಳಿದ ಕೂಡಲೇ ಕ್ರಿಕೆಟ್ ಜಗತ್ತಿನಲ್ಲಿ ನೆನಪಾಗುವ ಹೆಸರು ವಿರಾಟ್ ಕೊಹ್ಲಿ. ನೆಚ್ಚಿನ ಅಭಿಮಾನಿಗಳಿಗೆ ನಂಬರ್-18 ಅಂದ್ರೆ ಎಲ್ಲಿಲ್ಲದ ಪ್ರೀತಿ ಹಾಗೂ ವಿಶೇಷವಾದ ಎಮೋಷನಲ್. ಇದೇ ಫ್ಯಾನ್ಸ್ಗೆ 18.5ನೇ ಓವರ್ ಅಂದ್ರೆ ಖುಷಿಯ ಜೊತೆ ಬೇಸರ ಮೂಡುತ್ತೆ. ಖುಷಿ ಹಾಗೂ ದುಃಖ ಎರಡಕ್ಕೂ ಕಾರಣವಾದ ನಂಬರ್ ಅದು.
ನಂಬರ್ 18. ವಿಶ್ವ ಸಾಮ್ರಾಟನ ಜರ್ಸಿ ನಂಬರ್. ಈ ಜರ್ಸಿ ನಂಬರ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಜರ್ಸಿ ನಂಬರ್ 18 ಅಂದ್ರೆ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರವಲ್ಲ. ಇಡೀ ಪ್ರಪಂಚಕ್ಕೆ ಗೊತ್ತು. ಆ ಜರ್ಸಿ ನಂಬರ್ ಗತ್ತೇನು ಅನ್ನೋದು. ಅದು ಜರ್ಸಿ ನಂಬರ್ ಮಾತ್ರವೇ ಅಲ್ಲ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಎಮೋಷನ್. ಇದೇ ವಿರಾಟ್ ಅಭಿಮಾನಿಗಳಿಗೆ ವಿಶ್ವ ಕ್ರಿಕೆಟ್ನ ಆ ಎರಡು ಘಟನೆಗಳು ಎಂದೆಂದಿಗೂ ಮರೆಯಲು ಅಸಾಧ್ಯ. ಅದೇ 18.5ನೇ ಓವರ್.
ಇದನ್ನೂ ಓದಿ:ವಿನಯ್ ಕುಮಾರ್, ಬಾಲಾಜಿ ಸೈಡ್ಲೈನ್.. ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿದೆ ಭಾರೀ ಲಾಬಿ..!
ವಿರಾಟ್ ಕೊಹ್ಲಿಗಾಗಲಿ, ವಿರಾಟ್ ಕೊಹ್ಲಿಯನ್ನ ಆರಾಧಿಸುವ ಕೋಟ್ಯಾಂತರ ಅಭಿಮಾನಿಗಳಿಗೆ 18.5ನೇ ಓವರ್ನ ಎರಡು ಘಟನೆಗಳು ಎಂದೆಂದಿಗೂ ಕಾಡುವ ನೆನಪುಗಳು. ಒಂದು ನೆನಪು ಸಂಭ್ರಮದಲ್ಲೇ ತೇಲಿಸಿದ್ರೆ, ಮತ್ತೊಂದು ಮೌನಕ್ಕೆ ಜಾರಿಸುತ್ತೆ.
18.5ನೇ ಓವರ್ನಲ್ಲಿ ಗ್ರೇಟೆಸ್ಟ್ ಶಾಟ್
ಕಳೆದ ಟಿ20 ವಿಶ್ವಕಪ್ ಟೂರ್ನಿಯ ಇಂಡೋ-ಪಾಕ್ ಪಂದ್ಯವನ್ನ ಬೇಕಾದ್ರೂ ಮರೀಬೋದು. 2022ರ ಟಿ20 ವಿಶ್ವಕಪ್ನ ಹ್ಯಾರಿಸ್ ರೌಫ್ ಬೌಲಿಂಗ್ನಲ್ಲಿ ಕೊಹ್ಲಿ ಸಿಡಿಸಿದ ಸಿಕ್ಸರ್ನ ಮರೆಯಲಾಸಾಧ್ಯ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟದ ಪರಿ ಹಂಗಿತ್ತು.
8 ಎಸೆತಕ್ಕೆ 28 ರನ್. ಹೈ ಫ್ರೆಷರ್ ಗೇಮ್. ಕ್ವಾಲಿಟಿ ಫೇಸ್ ಬೌಲರ್. 140ರ ವೇಗದ ಬಾಲ್.. ಫುಲ್ ಲೆನ್ತ್ ಬಾಲ್. ಕೊಹ್ಲಿಯ ಫೂಟ್ ಬ್ಯಾಲೆನ್ಸ್ ಕೂಡ ಸರಿ ಇರಲಿಲ್ಲ. ಕೊಹ್ಲಿಯ ಟೈಮಿಂಗ್ ಆ್ಯಂಡ್ ಪವರ್ ಸ್ಟ್ರೋಕ್ಗೆ ಹ್ಯಾರಿಸ್ ತಲೆ ಮೇಲಿಂದ ಹಾರಿ ಹೋಗಿದ್ದ ಚೆಂಡು ಬೌಂಡರಿ ಗೆರೆ ದಾಟಿತ್ತು. ಈ ನಂಬಲಾಸಾಧ್ಯವಾಗಿದ್ದ ಆ ಸಿಕ್ಸರ್ ಭಾರತವನ್ನ ಗೆಲುವಿನ ಟ್ರ್ಯಾಕ್ಗೆ ತಂದು ನಿಲ್ಲಿಸಿತ್ತು. ಇಂಟ್ರೆಸ್ಟಿಂಗ್ ಅಂದ್ರೆ 18ನೇ ಓವರ್ನ 5ನೇ ಬಾಲ್ನಲ್ಲಿ ಸಿಡಿದ ಈ ಶಾಟ್, ಶತಮಾನದ ಶಾಟ್ ಅಂತಾನೇ ಹೆಸರುವಾಸಿಯಾಗಿದೆ. ವಿಶ್ವ ಕ್ರಿಕೆಟ್ನ ಗ್ರೇಟೆಸ್ಟ್ ಶಾಟ್ ಆಗಿದೆ. ಇದೇ ಶ್ರೇಷ್ಠ ಶಾಟ್ಗೂ ವಿರಾಟ್ ಕೊಹ್ಲಿಯ ಟಿ20 ಕರಿಯರ್ ಅಂತ್ಯಕ್ಕೂ ನಂಟಿದೆ.
ಇದನ್ನೂ ಓದಿ:ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಜೋರಾ..? ಈ ಮುಹೂರ್ತದಲ್ಲಿ ಮಾತ್ರ ಪೂಜೆ ಮಾಡಿ.. Don’t Miss
18.5ನೇ ಓವರ್ನಲ್ಲೇ ಕೊಹ್ಲಿ ಟಿ20 ಕರಿಯರ್ ಎಂಡ್..!
2022ರ ಟಿ20 ವಿಶ್ವಕಪ್ನಲ್ಲಿ ಪಾಕ್ ಎದುರಿನ ಆ ಶಾಟ್ ಸಿಡಿದಿದ್ದು 18.5ನೇ ಓವರ್ನಲ್ಲಾದ್ರೆ ವಿರಾಟ್ ಕೊಹ್ಲಿಯ ಟಿ20 ವೃತ್ತಿ ಜೀವನ ಅಂತ್ಯವಾಗಿದ್ದು 18.5 ಓವರ್ನಲ್ಲೇ ಆಗಿದೆ. ಜಸ್ಟ್ ಒಂದೂವರೆ ತಿಂಗಳ ಹಿಂದಿನ ಕತೆ ಇದು. ಟಿ20 ವಿಶ್ವಕಪ್ ಫೈನಲ್ ಪಂದ್ಯವೇ ವಿರಾಟ್ ಪಾಲಿಗೆ ಕೊನೆಯಾಗಿತ್ತು. ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ವಿರಾಟ್, ಟೀಮ್ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದ್ರು. ಈ ಪಂದ್ಯದಲ್ಲಿ 76 ರನ್ ಸಿಡಿಸಿದ್ದ ವಿರಾಟ್, ಮಾರ್ಕೊ ಯಾನ್ಸನ್ಗೆ ವಿಕೆಟ್ ಒಪ್ಪಿಸಿದ್ದು 18.5ನೇ ಓವರ್ನಲ್ಲೇ ಆಗಿತ್ತು. ಇದು ಜಸ್ಟ್ ವಿರಾಟ್ ವಿಕೆಟ್ ಒಪ್ಪಿಸಿದ ಬಾಲ್ ಆಗಿರಲಿಲ್ಲ. ಟಿ20 ವೃತ್ತಿ ಜೀವನದ ಅಂತ್ಯವೇ ಆಗಿತ್ತು.
18.5ನೇ ಓವರ್ ವಿರಾಟ್ ಕೊಹ್ಲಿ ಫಾನ್ಸ್ಗೆ ಎಮೋಷನ್
ವಿರಾಟ್ ಕೊಹ್ಲಿ ಸಿಡಿಸಿದ್ದ ಈ ಗ್ರೇಟೆಸ್ಟ್ ಶಾಟ್ಗೆ 2 ವರ್ಷಗಳೇ ಕಳೆದಿವೆ. ಹಾಗಿದ್ದರೂ ಆ ಮಿರಾಕಲ್ ಶಾಟ್, ಇಂದಿಗೂ ಫ್ಯಾನ್ಸ್ ಮನದಲ್ಲಿ ಅಚ್ಚಳಿಯದಂತೆಯೇ ಇದೆ. ಈ ಶಾಟ್ ಒಂದನ್ನೇ ಅಲ್ಲ. ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಫೈನಲ್ನಲ್ಲಿ ಔಟಾದ ರೀತಿಯನ್ನು ಫ್ಯಾನ್ಸ್ ಮರೆಯಲ್ಲ. ಇಂಟ್ರೆಸ್ಟಿಂಗ್ ಅಂದ್ರೆ ವಿರಾಟ್ 2022ರ ಟಿ20 ವಿಶ್ವಕಪ್ನಲ್ಲಿ ಸಿಡಿಸಿದ್ದ ಗ್ರೇಟೆಸ್ಟ್ ಸಿಕ್ಸರ್ ಹಾಗೂ ಕೊನೆ ಪಂದ್ಯದಲ್ಲಿ ವಿಕೆಟ್ ಒಪ್ಪಿಸಿದ ಎರಡೂ ಬಾಲ್ಗಳು 18.5ನೇ ಓವರ್ನಲ್ಲಿ ಅನ್ನೋದು ನಿಜಕ್ಕೂ ವಿಪರ್ಯಾಸ. ಅದೇನೇ ಆಗಲಿ, ವಿರಾಟ್ ಜರ್ಸಿ ನಂಬರ್ 18 ಫ್ಯಾನ್ಸ್ಗೆ ಎಲ್ಲಿಲ್ಲದ ಎಮೋಷನ್. ಆದ್ರೀಗ ಇದೇ ಫ್ಯಾನ್ಸ್ಗೆ 18.5ನೇ ಓವರ್ ಮತ್ತಷ್ಟು ಎಮೋಷನಲ್ ಆಗಿ ಮಾಡಿರೋದು ಸುಳ್ಳಲ್ಲ.
ಇದನ್ನೂ ಓದಿ:‘ಈತ ಅಂದ್ರೆ ನಂಗೆ ಭಾರೀ ಭಯ..’ ಬ್ಯಾಟಿಂಗ್ ವೇಳೆ ರೋಹಿತ್ ಭಯದಿಂದ ಬೆಚ್ಚಿ ಬೀಳೋದು ಯಾರಿಗೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್