ಕೊಹ್ಲಿಗೊಂದು ನ್ಯಾಯ? ಬೇರೆಯವ್ರಿಗೆ ಒಂದು ನ್ಯಾಯ?
ತಿಂಗಳಿಗೂ ಹೆಚ್ಚು ಕಾಲ ಬ್ಯಾಟ್ ಮುಟ್ಟಲ್ಲ ಕೊಹ್ಲಿ
ಕೊಹ್ಲಿಗೆ ದೇಶ ಮೊದಲ? ಫ್ಯಾಮಿಲಿ ಮೊದಲ? ಎಂದ ಫ್ಯಾನ್ಸ್
ದುಲೀಪ್ ಟ್ರೋಫಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿರೋ ವಿರಾಟ್ ಕೊಹ್ಲಿ, ಮತ್ತೆ ಸುದೀರ್ಘ ವಿಶ್ರಾಂತಿಯ ಮೊರೆ ಹೋಗಿದ್ದಾರೆ. ಲಂಡನ್ನಲ್ಲಿ ಬೀಡು ಬಿಟ್ಟಿರೋ ಕೊಹ್ಲಿ, ಕಮ್ಬ್ಯಾಕ್ ಮಾಡೋದು ಇನ್ನೂ ಒಂದುವರೆ ತಿಂಗಳ ಬಳಿಕ ಬಾಂಗ್ಲಾ ಎದುರಿನ ಸರಣಿಯಲ್ಲಿ. ಕಳಪೆ ಫಾರ್ಮ್ ಸುಳಿಗೆ ಸಿಲುಕಿ ರನ್ಗಳಿಕೆಗೆ ಪರದಾಡ್ತಿರೋ ಕೊಹ್ಲಿ ಮತ್ತೆ ಸುದೀರ್ಘ ಅವಧಿಗೆ ಕ್ರಿಕೆಟ್ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ನಿರ್ಧಾರದಿಂದ ಕೊಹ್ಲಿ ಕರಿಯರ್ನ ಭವಿಷ್ಯದ ಪ್ರಶ್ನೆ ಎದ್ದಿದೆ.
ಶ್ರೀಲಂಕಾ ಪ್ರವಾಸದ ಅಂತ್ಯದ ಬಳಿಕ ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಸುದೀರ್ಘ ವಿಶ್ರಾಂತಿಗೆ ಜಾರಿದ್ದಾರೆ. ಕೊಲಂಬೋದಿಂದ ನೇರವಾಗಿ ಲಂಡನ್ಗೆ ಹಾರಿರುವ ವಿರಾಟ್ ಕೊಹ್ಲಿ, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಲಂಡನ್ನ ರಸ್ತೆ ಬದಿಯಲ್ಲಿ ಸಾಮಾನ್ಯನಂತೆ ಕೊಹ್ಲಿ ನಿಂತಿರೋ ವಿಡಿಯೋ ವೈರಲ್ ಆಗಿದೆ. ಇದ್ರ ಜೊತೆಗೆ ಕಿಂಗ್ ಕೊಹ್ಲಿಯ ಕ್ರಿಕೆಟ್ ಕರಿಯರ್ನ ಭವಿಷ್ಯದ ಚರ್ಚೆಯೂ ಶುರುವಾಗಿದೆ.
ಇದನ್ನೂ ಓದಿ:ಪ್ರೊ ಕಬಡ್ಡಿ ಬಿಡ್ಡಿಂಗ್! 5 ಆಟಗಾರರ ಮೇಲೆ ಕೋಟಿ ಕೋಟಿ ಹಣ.. ಸಚಿನ್ ಅತ್ಯಂತ ದುಬಾರಿ!
ಕೈ ಕೊಟ್ಟ ಕೊಹ್ಲಿ.. ದುಲೀಪ್ ಟ್ರೋಫಿಗೆ ಟಾಟಾ
ಮುಂಬರೋ ಬಾಂಗ್ಲಾದೇಶ ಸರಣಿಗೆ ಸಿದ್ಧತೆಯ ಭಾಗವಾಗಿ ಬಿಸಿಸಿಐ, ಟೀಮ್ ಇಂಡಿಯಾದ ಸ್ಟಾರ್ಗಳನ್ನ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಲು ಸೂಚಿಸಿತ್ತು. ವಿರಾಟ್ ಕೊಹ್ಲಿಗೂ ಕೂಡ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಡೊಮೆಸ್ಟಿಕ್ ಕಣದಿಂದ ಹಿಂದೆ ಸರಿದಿರೋ ಕೊಹ್ಲಿ ಮತ್ತೆ ವಿಶ್ರಾಂತಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಕೊಹ್ಲಿಗೊಂದು ನ್ಯಾಯ.? ಬೇರೆಯವರಿಗೆ ಒಂದು ನ್ಯಾಯಾನ ಎಂಬ ಪ್ರಶ್ನೆ ಹುಟ್ಟಿಸಿದೆ.
ಬಾಂಗ್ಲಾ ಟೆಸ್ಟ್ ಸರಣಿಗೆ 34 ದಿನಗಳು ಬಾಕಿ
ಮುಂಬರೋ ಬಾಂಗ್ಲಾ ಎದುರಿನ ಟೆಸ್ಟ್ ಸರಣಿಗೆ 34 ದಿನಗಳ ಅಂತರ ಇದೆ. ಒಂದು ತಿಂಗಳಿಗೂ ಹೆಚ್ಚು ಕಾಲ ವಿರಾಟ್ ಕೊಹ್ಲಿ ಬ್ಯಾಟ್ ಮುಟ್ಟಲ್ಲ. ವಿದೇಶದಲ್ಲಿರೋದ್ರಿಂದ ಅಭ್ಯಾಸದ ಕಣದಿಂದಿಲೂ ಹೊರಗಿರ್ತಾರೆ. ಸುದೀರ್ಘ ದಿನಗಳ ಕಾಲ ಮೈದಾನದಿಂದ ಹೊರಗುಳಿಯೋ ಕೊಹ್ಲಿ, ನೇರವಾಗಿ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಕಮ್ಬ್ಯಾಕ್ ಮಾಡೋ ನಿರ್ಧಾರ ಮಾಡಿದ್ದಾರೆ. ಕೊಹ್ಲಿಗೆ ಪ್ರಾಕ್ಟಿಸ್ ಬೇಡ್ವಾ? ಅಭ್ಯಾಸವನ್ನೇ ನಡೆಸದೇ ನೇರವಾಗಿ ಸರಣಿಗೆ ಬರೋ ನಿರ್ಧಾರ ಎಷ್ಟರ ಮಟ್ಟಿಗೆ ಸರಿ? ಅನ್ನೋ ಪ್ರಶ್ನೆ ಈಗ ಚರ್ಚೆಯಲ್ಲಿವೆ.
ಇದನ್ನೂ ಓದಿ:ವಿನಯ್ ಕುಮಾರ್, ಬಾಲಾಜಿ ಸೈಡ್ಲೈನ್.. ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿದೆ ಭಾರೀ ಲಾಬಿ..!
9 ತಿಂಗಳಿಂದ ಟೆಸ್ಟ್ ಕ್ರಿಕೆಟ್ ಆಡಿಲ್ಲ ಕೊಹ್ಲಿ
ಈ ವರ್ಷದ ಆರಂಭದಲ್ಲಿ ನಡೆದ ಸೌತ್ ಆಫ್ರಿಕಾ ಪ್ರವಾಸವೇ ಕೊನೆ. ಆ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡೇ ಇಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ತಂಡಕ್ಕೆ ಆಯ್ಕೆಯಾದ್ರೂ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಿದ್ದರಿಂದ ಕೊನೆಯ ಕ್ಷಣದಲ್ಲಿ ಸರಣಿಯಿಂದ ಹೊರಗುಳಿದಿದ್ರು. ಇದೀಗ 9 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ಗೆ ಕೊಹ್ಲಿ ಕಮ್ಬ್ಯಾಕ್ ಮಾಡ್ತಿದ್ದಾರೆ. ಸುದೀರ್ಘ ಕಾಲದಿಂದ ರೆಡ್ ಬಾಲ್ ಕ್ರಿಕೆಟನ್ನೇ ಆಡದ ಕೊಹ್ಲಿ, ಸಿದ್ಧತೆಯನ್ನೇ ನಡೆಸದೇ ನೇರವಾಗಿ ಬಾಂಗ್ಲಾ ಎದುರಿನ ಸರಣಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿರೋದು ಟೀಕೆಗೆ ಗುರಿಯಾಗುವಂತೆ ಮಾಡಿದೆ.
ಪದೇ ಪದೆ ವೈಫಲ್ಯ ಕಂಡರೂ ಎಚ್ಚೆತ್ತುಕೊಳ್ಳದ ಕೊಹ್ಲಿ
ಟಿ20 ವಿಶ್ವಕಪ್ನಲ್ಲಿ ಫೈನಲ್ ಪಂದ್ಯ ಹೊರತು ಪಡಿಸಿ ಉಳಿದ ಪಂದ್ಯಗಳಲ್ಲಿ ಕೊಹ್ಲಿ ಫ್ಲಾಪ್ ಶೋ ನೀಡಿದ್ರು. ಟೂರ್ನಿ ಅಂತ್ಯದ ಬಳಿಕ ಲಂಡನ್ನಲ್ಲಿ ಬೀಡು ಬಿಟ್ಟಿದ್ದ ಕೊಹ್ಲಿ, ಬಳಿಕ ಶ್ರೀಲಂಕಾ ಎದುರಿನ ಏಕದಿನ ಸರಣಿ ವೇಳೆ ವಾಪಾಸ್ಸಾಗಿದ್ರು. ಸಿದ್ಧತೆಯೆ ಇಲ್ಲದೇ ಅಖಾಡಕ್ಕಿಳಿದ ಕೊಹ್ಲಿ, ಮೂರು ಪಂದ್ಯಗಳಲ್ಲಿ ಅ್ಟಟ್ಟರ್ ಫ್ಲಾಪ್ ಶೋ ನೀಡಿದ್ರು. ಈ ವೈಫಲ್ಯ ಮಾತ್ರವಲ್ಲ.. ಈ ವರ್ಷದಲ್ಲಿ ಪದೇ ಪದೇ ರೆಸ್ಟ್ ಮೊರೆ ಹೊಗ್ತಿರೋದ್ರಿಂದ ಕೊಹ್ಲಿ ಬ್ಯಾಟ್ ಹಳೆ ಖದರ್ನಲ್ಲಿ ಸದ್ದೇ ಮಾಡಿಲ್ಲ.
ಇದನ್ನೂ ಓದಿ:ನೀರಜ್ ಬಗ್ಗೆ ಕೇಳ್ತಿದ್ದಂತೆ ನಾಚಿಕೊಂಡ ಮನು ಭಾಕರ್.. ಪ್ರೀತಿ, ಮದುವೆ ಬಗ್ಗೆ ಮೌನ ಮುರಿದ ಅಥ್ಲೀಟ್..!
2024ರಲ್ಲಿ ವಿರಾಟ್ ಕೊಹ್ಲಿ
2024ರಲ್ಲಿ 15 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ನಡೆಸಿರುವ ವಿರಾಟ್ ಕೊಹ್ಲಿ 296 ರನ್ಗಳಿಸಿದ್ದಾರೆ. ಕೇವಲ 19.73ರ ಸರಾಸರಿಯಲ್ಲಿ ರನ್ಗಳಿಸಿರೋ ಕೊಹ್ಲಿ 1 ಬಾರಿ ಮಾತ್ರ ಅರ್ಧಶತಕದ ಗಡಿ ದಾಟಿದ್ದಾರೆ.
ಅಭ್ಯಾಸದ ಕೊರತೆ..
ಅಭ್ಯಾಸದ ಕೊರತೆಯಿಂದಾಗಿ ಪದೇ ಪದೇ ಕೊಹ್ಲಿ ವೈಫಲ್ಯ ಅನುಭವಿಸ್ತಿದ್ದಾರೆ. ಶ್ರೀಲಂಕಾ ಮೂರು ಪಂದ್ಯದಲ್ಲಿ LBWಗೆ ವಿಕೆಟ್ ಒಪ್ಪಿಸಿದ್ದು, ಇದಕ್ಕೆ ಹಿಡಿದ ಕನ್ನಡಿಯಾಗಿದೆ. ಲಾಂಗ್ ಗ್ಯಾಪ್ ಕೊಹ್ಲಿಗೆ ಪದೇ ಪದೇ ಮುಳುವಾಗ್ತಿದ್ರೂ, ವಿಶ್ರಾಂತಿಗೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಕರಿಯರ್ ಆರಂಭದಲ್ಲಿ ದೇಶವೇ ಮೊದಲು ಎಂದು ಕ್ರಿಕೆಟ್ಗೆ ಆದ್ಯತೆ ಕೊಡ್ತಿದ್ದ ಕೊಹ್ಲಿ, ಇದೀಗ ಫ್ಯಾಮಿಲಿ ಫಸ್ಟ್ ಅಂತಿದ್ದಾರೆ. ಕೊಹ್ಲಿಯ ಈ ಆದ್ಯತೆ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಇದೀಗ ಮತ್ತೆ ರೆಸ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ ಬಾಂಗ್ಲಾ ಎದುರಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಪರ್ಫಾಮೆನ್ಸ್ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:‘ಈತ ಅಂದ್ರೆ ನಂಗೆ ಭಾರೀ ಭಯ..’ ಬ್ಯಾಟಿಂಗ್ ವೇಳೆ ರೋಹಿತ್ ಭಯದಿಂದ ಬೆಚ್ಚಿ ಬೀಳೋದು ಯಾರಿಗೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್