newsfirstkannada.com

ಜಮ್ಮು-ಕಾಶ್ಮೀರ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌.. 10 ವರ್ಷಗಳ ಬಳಿಕ 3 ಮಹತ್ವದ ಹೆಜ್ಜೆ; ಏನದು?

Share :

Published August 16, 2024 at 4:05pm

Update August 16, 2024 at 4:08pm

    10 ವರ್ಷಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ

    ಚುನಾವಣೆಗೆ ದಿನಾಂಕ ನಿಗದಿ ಮಾಡಿದ ಕೇಂದ್ರ ಚುನಾವಣಾ ಆಯೋಗ

    ಜಮ್ಮು ಕಾಶ್ಮೀರದಲ್ಲಿ 3 ಹಂತಗಳಲ್ಲಿ ನಡೆಯಲಿದೆ 90 ಕ್ಷೇತ್ರಗಳಿಗೆ ಮತದಾನ

ನವದೆಹಲಿ: ಜಮ್ಮು ಕಾಶ್ಮೀರ ಹಾಗೂ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್​ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ನಮ್ಮ ಅಧಿಕಾರಿಗಳು ಕಣಿವೆ ರಾಜ್ಯದ ಎಲ್ಲಾ ಕಡೆಗೂ ಹೋಗಿ ಚುನಾವಣೆಯ ತಯಾರಿ ಮಾಡಿದ್ದಾರೆ. ಅಲ್ಲಿನ ಜನರ ಆಶಯವೂ ಕೂಡ ಆದಷ್ಟು ಬೇಗ ಚುನಾವಣೆ ಎದುರಿಸುವುದಾಗಿದೆ. ಜಮ್ಮು ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆಯಲ್ಲಿ ದೂರ ದೂರದವರಗೆ ಸಾಲುಗಟ್ಟಿ ಜನ ಮತದಾನ ಮಾಡಿದ್ದಾರೆ. ಅವರಲ್ಲಿ ಹೊಸ ಬದಲಾವಣೆ ತರುವ ಹುಮ್ಮಸ್ಸಿನಲ್ಲಿದ್ದಾರೆ. ತಮ್ಮ ಭವಿಷ್ಯವನ್ನು ತಾವೇ ಬರೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ ಎಂದು ರಾಜೀವ್ ​ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: 2 ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ಘೋಷಣೆ.. ಕರ್ನಾಟಕದ 3 ಕ್ಷೇತ್ರಗಳಿಗೆ ಬೈ-ಎಲೆಕ್ಷನ್ ಅನೌನ್ಸ್ ಸಾಧ್ಯತೆ

ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಪ್ರಕ್ರಿಯೆ ಹೇಗೆ ನಡೆಯಲಿದೆ ಅನ್ನೋದನ್ನ ವಿವರಿಸಿದ ರಾಜೀವ್​ ಕುಮಾರ್ ಬುಲೆಟ್ ಬದಲಾಗಿ ಬುಲೆಟ್​ನ್ನು ಜನರು ಆಯ್ಕೆ ಮಾಡಿಕೊಂಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 87.09 ಲಕ್ಷ ಮತದಾರರಿದ್ದಾರೆ. ಅದರಲ್ಲಿ ಮಹಿಳೆಯರು 42.62 ಲಕ್ಷ ಹಾಗೂ ಪುರುಷರು 44.46 ಲಕ್ಷ ದಷ್ಟಿದ್ದರೆ. ನೂತನ ಮತದಾರರು 3.71 ಲಕ್ಷದಷ್ಟಿದ್ದಾರೆ. ಯುವಕರು 20 ಲಕ್ಷದಷ್ಟು ಮತದಾರರಿದ್ದಾರೆ ಎಂದು ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಒಟ್ಟು 11, 838 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:Breaking: ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು.. ಭೂ ವೀಕ್ಷಣಾ ಕಿರು ಉಪಗ್ರಹ ಯಶಸ್ವಿ ಉಡಾವಣೆ

10 ವರ್ಷಗಳ ಬಳಿಕ 3 ಹಂತದಲ್ಲಿ ಮತದಾನ!
ಜಮ್ಮು ಕಾಶ್ಮೀರದಲ್ಲಿ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ಮಾಡಲು ಚುನಾವಣೆ ಆಯೋಗ ಸಜ್ಜಾಗಿದೆ. ಸೆಪ್ಟಂಬರ್ 18 ರಂದು ಮೊದಲ ಹಂತ, 24 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಹಾಗೆ ಎರಡನೇ ಹಂತದ ಮತದಾ ಸೆ. 25 ರಂದು ನಡೆಯಲಿದ್ದು 26 ಕ್ಷೇತ್ರಗಳ ಮತದಾರರು ಮತ ಹಾಕಲಿದ್ದಾರೆ ಮತ್ತು ಅಕ್ಟೋಬರ್ 1ಕ್ಕೆ 40 ಕ್ಷೇತ್ರಗಳಿಗೆ ಮೂರನೇ ಹಂತದ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 4ಕ್ಕೆ ಅಂದ್ರೆ ಗಾಂಧಿ ಜಯಂತಿಯ ಎರಡು ದಿನದ ಬಳಿಕ ಜಮ್ಮು, ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮ್ಮು-ಕಾಶ್ಮೀರ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌.. 10 ವರ್ಷಗಳ ಬಳಿಕ 3 ಮಹತ್ವದ ಹೆಜ್ಜೆ; ಏನದು?

https://newsfirstlive.com/wp-content/uploads/2024/08/ELECTION-COMMISSION.jpg

Load More