ಮತ್ತೆ ವಿನೇಶ್ ಫೋಗಟ್ ಆಟದ ಬಗ್ಗೆ ನೆನೆದು ಹಾಡಿಹೊಗಳಿದ ಪ್ರಧಾನಿ
ಕುಸ್ತಿ ಅಂಗಳದಲ್ಲಿ ಮತ್ತೆ ತೊಡೆ ತಟ್ಟಿ ನಿಲ್ಲೋಕೆ ಸಜ್ಜಾದ್ರಾ ವಿನೇಶ್ ಫೋಗಟ್
ಸೊಲೇ ಕಾಣದ ಜಗಜಟ್ಟಿ ಸೂಸಾಕಿಯನ್ನೇ ಸೋಲಿಸಿ ಭರವಸೆ ನೀಡಿದ್ದ ವಿನೇಶ್
ವಿನೇಶ್ ಫೋಗಟ್ ಒಲಂಪಿಕ್ಸ್ನ ಕುಸ್ತಿಯಾಟದಲ್ಲಿ ಗೆದ್ದಿದ್ದ ಗಟ್ಟಿಗಿತ್ತಿ. ಸೋಲೇ ಕಾಣದವಳನ್ನ ಸೋಲಿಸಿದ್ದ ಚಿನ್ನದ ಹುಡುಗಿ. ಆದ್ರೆ, ಕೇವಲ ನೂರು ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಕುಸ್ತಿ ಅಂಗಳದಿಂದ ಹೊರಬಿದ್ದ ನತದೃಷ್ಟೇ. ಮತ್ತೆ ಕುಸ್ತಿ ಅಂಗಳಕ್ಕೆ ಕಾಲಿಡಲ್ಲ ಅಂದಿದ್ದ ವಿನೇಶ್ ಇದೀಗ ಭವಿಷ್ಯದಲ್ಲಿ ಕುಸ್ತಿ ಅಂಗಳದಲ್ಲಿ ಮತ್ತೆ ತೊಡೆ ತಟ್ಟಿ ನಿಲ್ಲೋ ಸುಳಿವು ಕೊಟ್ಟಿದ್ದಾರೆ.
ಇದನ್ನೂ ಓದಿ: ಅನಾಥ.. ಬಾಲ್ಯದಲ್ಲೇ ಡಿಪ್ರೆಶನ್; ಒಲಿಂಪಿಕ್ಸ್ ಕುಸ್ತಿಯಲ್ಲಿ ಗೆದ್ದ ಅಮನ್ ಕಥೆಯೇ ರೋಚಕ; ತಪ್ಪದೇ ಓದಿ!
ಈ ಬಾರಿಯ ಒಲಂಪಿಕ್ಸ್ನಲ್ಲಿ 50 ಕೆಜಿ ವಿಭಾಗದಲ್ಲಿ ಕುಸ್ತಿ ಅಖಾಡಕ್ಕೆ ಧುಮುಕಿದ್ದ ವಿನೇಶ್ ಫೋಗಟ್, ಸೊಲೇ ಕಾಣದ ಜಗಜಟ್ಟಿ ಸೂಸಾಕಿಯನ್ನೇ ಸೋಲಿಸಿ ಶತ ಕೋಟಿ ಭಾರತೀಯರ ಕಣ್ಣಲ್ಲಿ ಬಂಗಾರದ ಆಸೆ ಮೂಡಿಸಿದ್ರು. ಇನ್ನೇನು ಬಂಗಾರಾನೋ.. ಬೆಳ್ಳಿನೋ ಭಾರತದ ಕಿರೀಟಕ್ಕೆ ಬಂದೇ ಬಿಡ್ತು ಅಂತಾ ಎಲ್ಲರೂ ಕಾಯುತ್ತಿದ್ದರು. ಆದ್ರೆ, ಆಗಿದ್ದೇ ಬೇರೆ ಜಸ್ಟ್ 100 ಗ್ರಾಂ.. ನೂರೇ ನೂರು ಗ್ರಾಂ ತೂಕ ಹೆಚ್ಚಾಗಿದ್ದ ಕಾರಣಕ್ಕೆ ವಿನೇಶ್ ಫೋಗಟ್ ಒಲಂಪಿಕ್ಸ್ ಅಂಗಳದಿಂದ ಹೊರಬಿದ್ದಿದ್ರು.
ಇನ್ನು, ಇದೇ ಬೇಸರದಲ್ಲೇ ವಿನೇಶ್ ಫೋಗಟ್ ಕುಸ್ತಿಗೆ ಗುಡ್ ಬಾಯ್ ಹೇಳಿದ್ರು. ಅಮ್ಮ.. ನಾನು ಕುಸ್ತಿ ನನ್ನ ವಿರುದ್ಧ ಗೆದ್ದಿದೆ. ನಾನು ಸೋತಿದ್ದೇನೆ, ಅಂತ ಭಾವನಾತ್ಮಕವಾಗಿ ಪೋಸ್ಟ್ ಮಾಡಿ ನಿವೃತ್ತಿ ಘೋಷಿಸಿ ಬಿಟ್ರು. ಬಳಿಕ ಬೆಳ್ಳಿ ಪದಕವಾದ್ರೂ ಸಿಗಲಿ ಅಂತಾ ಸಿಎಎಸ್ ಕೋರ್ಟ್ನಲ್ಲಿ ಅರ್ಜಿ ಕೂಡ ಸಲ್ಲಿಸಿದ್ರು. ದುರದೃಷ್ಟವಶಾತ್, ಆ ಪ್ರಯತ್ನ ಕೂಡ ವಿನೇಶ್ ಕೈ ಹಿಡಿಯಲಿಲ್ಲ.
2032ರ ತನಕ ಕುಸ್ತಿ ಗ್ಯಾರಂಟಿ!
ನಾನು ಪುಟ್ಟ ಹುಡುಗಿ. ಪುಟ್ಟ ಹಳ್ಳಿಯಿಂದ ಬಂದವಳು. ಒಲಂಪಿಕ್ಸ್ ರಿಂಗ್ಗಳ ಬಗ್ಗೆಯೂ ಜ್ಞಾನವಿರದ ಸಾಮಾನ್ಯ ಹುಡುಗಿಯಾಗದ್ದೆ. ನನ್ನ ತಂದೆ ಓರ್ವ ಬಸ್ ಡ್ರೈವರ್ ಆಗಿದ್ದವರು. ನಾನು ತಂದೆಯ ಫೇವರೇಟ್ ಮಗಳು. ಯಾಕಂದ್ರೆ ನಾನೇ ಚಿಕ್ಕಮಗಳು. ನಾನು ಆಕಾಶದಲ್ಲಿ ವಿಮಾನದಲ್ಲಿ ಹಾರಬೇಕು ಅನ್ನೋ ಆಸೆ ಅಪ್ಪಂದು. ಆದ್ರೆ, ಒಂದಿನ ಅಪ್ಪ ನಮ್ಮನ್ನ ಬಿಟ್ಟು ಹೋಗ್ಬಿಟ್ರು. ನನ್ನ ತಾಯಿ ಕಷ್ಟದಿಂದ ನಮ್ಮನ್ನ ಬೆಳೆಸಿದ್ದಾರೆ. ಬಹುಶಃ ವಿಭಿನ್ನ ಸಂದರ್ಭಗಳಲ್ಲಿ, ನಾನು 2032 ರವರೆಗೆ ಆಡುವುದನ್ನು ನಾನು ನೋಡಬಹುದು. ಏಕೆಂದರೆ ನನ್ನಲ್ಲಿನ ಹೋರಾಟ ಮತ್ತು ನನ್ನಲ್ಲಿನ ಕುಸ್ತಿ ಯಾವಾಗಲೂ ಜೀವಂತ. ನನಗೆ ಭವಿಷ್ಯ ಏನಾಗುತ್ತದೆ ಮತ್ತು ಮುಂದಿನ ಈ ಪ್ರಯಾಣದಲ್ಲಿ ನನಗೆ ಏನು ಕಾಯುತ್ತಿದೆ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಆದರೆ ನಾನು ನಂಬಿದ್ದಕ್ಕಾಗಿ ಮತ್ತು ಸರಿಯಾದ ವಿಷಯಕ್ಕಾಗಿ ನಾನು ಯಾವಾಗಲೂ ಹೋರಾಡುವುದನ್ನು ಮುಂದುವರಿಸುತ್ತೇನೆ ಎಂದು ನನಗೆ ಖಾತ್ರಿಯಿದೆ.
– ವಿನೇಶ್ ಫೋಗಟ್, ಕುಸ್ತಿ ಪಟು
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೊಂದು ಅನಾಚಾರ.. ಬಾಲ್ಯ ವಿವಾಹ ದಿಢೀರ್ ಹೆಚ್ಚಳ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಭವಿಷ್ಯ ಏನೋ ಗೊತ್ತಿಲ್ಲ ಅಂತಿರೋ ಫೋಗಟ್ 2032ರ ತನಕವೂ ಹೋರಾಡ್ತೀನಿ ಎಂದಿದ್ದಾರೆ. ಈಗಾಗಲೇ ನಿವೃತ್ತಿ ಘೋಷಿಸಿರೋ ಫೋಗಟ್ ಹೇಗೆ ಕಮ್ಬ್ಯಾಕ್ ಮಾಡ್ತಾರೆ ಅನ್ನೋ ಕುತೂಹಲ ಮೂಡಿದೆ. ಒಲಂಪಿಕ್ಸ್ ಆಟ ಮುಗಿಸಿ ದೇಶಕ್ಕೆ ವಾಪಾಸ್ ಆದ ಆಟಗಾರರನ್ನ ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡಾಪಟುಗಳ ಜೊತೆ ಕೆಲಕಾಲ ಸಂವಾದ ನಡೆಸಿದ್ರು. ಈ ವೇಳೆ ವಿನೇಶ್ ಫೋಗಟ್ ಫೈನಲ್ ತಲುಪಿದ್ದು ನಮ್ಮೆಲ್ಲರ ಹೆಮ್ಮೆಯ ಕ್ಷಣ ಎಂದು ಅಭಿನಂದನೆ ತಿಳಿಸಿದ್ದು ವಿಶೇಷವಾಗಿತ್ತು. ಕುಸ್ತಿಯಲ್ಲಿ ಕಾದಾಡಿದ್ರೂ ಪದಕ ದಕ್ಕಲಿಲ್ಲ ಅನ್ನೋದು ಬೇಸರವೇ. ಆದರೆ, ಇಷ್ಟಾದ್ರೂ ಎದೆಗುಂದದೇ ಕುಸ್ತಿಯನ್ನ ನಿಲ್ಲಿಸಲ್ಲ ಎಂದ ವಿನೇಶ್ ಫೋಗಟ್ ಆತ್ಮಸ್ಥೈರ್ಯಕ್ಕೆ ಒಂದು ಸಲಾಂ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ