newsfirstkannada.com

×

ಮುಂಬೈ ರೋಡಲ್ಲಿ.. ಲ್ಯಾಂಬೋರ್ಗಿನಿ ಕಾರಲ್ಲಿ.. ರೋಹಿತ್​​ ಸುತ್ತೋ ಕಾರಿಗಿಂತ ನಂಬರ್​ ಪ್ಲೇಟ್​ ಮೇಲಿದೆ ಎಲ್ಲರ ಕಣ್ಣು!

Share :

Published August 17, 2024 at 11:55am

    ಲ್ಯಾಂಬೋರ್ಗಿನಿ ಉರುಸ್​​ನಲ್ಲಿ ಸುತ್ತುತ್ತಿರುವ ರೋಹಿತ್​ ಶರ್ಮಾ

    ರೋಹಿತ್ ಕಾರಿನ ನಂಬರ್​ ಪ್ಲೇಟ್​ ವಿಶೇಷತೆ ಏನು ಗೊತ್ತಾ?

    ಏಕದಿನ ಪಂದ್ಯದಲ್ಲಿ ಮಾಡಿದ ಸಾಧನೆಯನ್ನು ಹೇಳುತ್ತಿದೆಯಾ ಇದು?

ಹಿಟ್​ಮ್ಯಾನ್​ ರೋಹಿತ್​ ಶರ್ಮಾರ ಲ್ಯಾಂಬೋರ್ಗಿನಿ ಕಾರು ಸದ್ಯ ಸಖತ್​ ಸುದ್ದಿಯಲ್ಲಿದೆ. ಮುಂಬೈನ ಬೀದಿಗಳಲ್ಲಿ ಹಿಟ್​ಮ್ಯಾನ್ ಸುತ್ತಾಡಿದ ಬಳಿಕ, ಕಾರಿಗಿಂತ ಈ ಕಾರ್​ನ ನಂಬರ್​​ ಪ್ಲೇಟ್​ ಎಲ್ಲರ ಕಣ್ಣು ಕುಕ್ಕಿಸಿದೆ. ಆ ಫ್ಯಾನ್ಸಿ ನಂಬರ್​ ಹಿಂದಿರೋ ಇಂಟರೆಸ್ಟಿಂಗ್​ ಕಥೆಯನ್ನ ತಿಳಿಯೋಣ.

ಶ್ರೀಲಂಕಾ ಪ್ರವಾಸದ ಬಳಿಕ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಚಿಲ್​ ಮೂಡ್​ಗೆ ಜಾರಿದ್ದಾರೆ. ಮುಂಬೈನಲ್ಲಿ ಬೀಡು ಬಿಟ್ಟಿರೋ ರೋಹಿತ್​, ಫ್ಯಾಮಿಲಿ ಹಾಗೂ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳಿಯುತ್ತಿದ್ದಾರೆ. ಜೊತೆ ಮುಂಬೈ ರೌಂಡ್ಸ್​ ಕೂಡ ಹೋಡಿತಾ ಇದ್ದಾರೆ. ತಮ್ಮ ನೆಚ್ಚಿನ ಲ್ಯಾಂಬೊರ್ಗಿನಿ ಉರುಸ್​ನಲ್ಲಿ ಮುಂಬೈ ಸುತ್ತಿದ್ದಾರೆ. ಇದ್ರ ವಿಡಿಯೋ ಸಖತ್​ ವೈರಲ್​ ಆಗಿದೆ. ಇದ್ರ ಜೊತೆಗೆ ಒಂದು ಇಂಟರೆಸ್ಟಿಂಗ್​ ಕಥೆ ಕೂಡ ರಿವೀಲ್​ ಆಗಿದೆ.

ಇದನ್ನೂ ಓದಿ: ಧೋನಿ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ BCCI: ಹಳೆಯ ನಿಯಮ ಮತ್ತೆ ಜಾರಿಗೆ, ಏನದು?

ರೋಹಿತ್​ ಶರ್ಮಾ ಚಲಾಯಿಸಿದ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಉರುಸ್​​ನ ನಂಬರ್​ ಪ್ಲೇಟ್​ ಸದ್ಯ ಎಲ್ಲರ ಕಣ್ಣು ಕುಕ್ಕಿಸಿದೆ. MH 01 EB 0264 ನಂಬರ್​​ನ ಕಾರು ಅದಾಗಿದ್ದು, 264ನ ಹಿಂದೆ ಅವಿಸ್ಮರಣೀಯ ಇನ್ನಿಂಗ್ಸ್​ನ ಕಥೆಯಿದೆ. 2014ರಲ್ಲಿ ಈಡನ್​​ ಗಾರ್ಡನ್​ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ ಆರ್ಭಟಿಸಿದ್ರು. ಕೇವಲ 173 ಎಸೆತಗಳನ್ನ ಎದುರಿಸಿ ಘರ್ಜಿಸಿದ್ದ ರೋಹಿತ್​, 33 ಬೌಂಡರಿ, 9 ಸಿಕ್ಸರ್​ ಸಹಿತ 264 ರನ್​ ಚಚ್ಚಿದ್ರು. ಈ ಸ್ಕೋರ್ ಇಂದಿಗೂ​ ಏಕದಿನ ಇತಿಹಾಸದ ವೈಯಕ್ತಿಕ ಹೈಯೆಸ್ಟ್​ ಸ್ಕೋರ್​ ಆಗಿ ಉಳಿದಿದೆ. ಈ ನೆನಪಿಗಾಗಿಯೇ ರೋಹಿತ್​ ಶರ್ಮಾ ವಿಶೇಷವಾಗಿ ಮನವಿ ಮಾಡಿ ತಮ್ಮ ಕಾರ್​ಗೆ 264 ಎಂಬ ನಂಬರ್​​ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ರೋಡಲ್ಲಿ.. ಲ್ಯಾಂಬೋರ್ಗಿನಿ ಕಾರಲ್ಲಿ.. ರೋಹಿತ್​​ ಸುತ್ತೋ ಕಾರಿಗಿಂತ ನಂಬರ್​ ಪ್ಲೇಟ್​ ಮೇಲಿದೆ ಎಲ್ಲರ ಕಣ್ಣು!

https://newsfirstlive.com/wp-content/uploads/2024/08/Rohit-sharma-4.jpg

Load More