newsfirstkannada.com

ಪಂಜಾಬ್ ಕಿಂಗ್ಸ್​ನಲ್ಲಿ ಬಿರುಗಾಳಿ; ಸಿಟ್ಟಿಗೆದ್ದು ಕೋರ್ಟ್​ ಮೆಟ್ಟಿಲೇರಿದ ನಟಿ ಪ್ರೀತಿ ಜಿಂಟಾ

Share :

Published August 17, 2024 at 5:07pm

Update August 17, 2024 at 6:12pm

    ಪ್ರೀತಿ ಜಿಂಟಾ ಕೋರ್ಟ್​ ಮೆಟ್ಟಿಲೇರಲು ಕಾರಣ ಏನು ಗೊತ್ತಾ?

    PBKS ತಂಡದ ಸಹ-ಮಾಲೀಕರಾಗಿರುವ ಬಾಲಿವುಡ್ ನಟಿ ಪ್ರೀತಿ

    ಆಗಸ್ಟ್ 20 ರಂದು ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ

ಐಪಿಎಲ್ 2025 ಆರಂಭಕ್ಕೂ ಮೊದಲೇ ಪಂಜಾಬ್ ಕಿಂಗ್ಸ್ (PBKS) ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದೆ. ತಂಡದ ಸಹ-ಮಾಲೀಕ ಮತ್ತು ಬಾಲಿವುಡ್ ನಟಿ ಪ್ರೀತಿ ಜಿಂಟಾ ಕೋರ್ಟ್​ ಮೆಟ್ಟಿಲೇರಿದ್ದಾರೆ!

ಫ್ರಾಂಚೈಸಿಯ ಅತಿದೊಡ್ಡ ಷೇರುದಾರ ಮೋಹಿತ್ ಬರ್ಮನ್ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಪ್ರೀತಿ ಜಿಂಟಾ ಅವರಿಗೆ ಕೋರ್ಟ್​​ನಲ್ಲಿ ಜಯ ಸಿಕ್ಕಿದ್ದು, ಮೋಹಿತ್ ಬರ್ಮನ್ ಫ್ರಾಂಚೈಸಿಯ ಷೇರಿನ ಪಾಲನ್ನು ಮಾರಟ ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಅರ್ಜಿಯ ವಿಚಾರಣೆ ಮುಂದುವರಿಯಲಿದೆ.

ಶೇ.11.5 ಷೇರಿನ ಪಾಲು ಮಾರಾಟಕ್ಕೆ ಯತ್ನ
ಪಂಜಾಬ್ ಕಿಂಗ್ಸ್‌ನ ಮೂಲ ಕಂಪನಿ KPH ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್‌ (K.P.H. Dream Cricket Pvt. Ltd). ಇದರಲ್ಲಿ ಬರ್ಮನ್ ಶೇಕಡಾ 48 ರಷ್ಟು ಪಾಲನ್ನು ಹೊಂದಿದ್ದಾರೆ. ಶೇಕಡಾ 11.5 ರಷ್ಟು ಷೇರನ್ನು ಮೂರನೇ ವ್ಯಕ್ತಿಗೆ ಮಾರಾಟ ಬರ್ಮನ್ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಗಗನಚುಂಬಿ ಸಿಕ್ಸರ್ ಬಾರಿಸಿದ ದ್ರಾವಿಡ್ ಪುತ್ರ; ಅದ್ಭುತ ಸಿಕ್ಸರ್​ನ ವಿಡಿಯೋ ಇಲ್ಲಿದೆ..!

ಷೇರುಗಳನ್ನು ಮಾರಾಟ ಮಾಡುವುದು ಸಾಮಾನ್ಯ ವ್ಯವಹಾರದ ಪ್ರಕ್ರಿಯೆ. ಆದರೆ ಫ್ರ್ಯಾಂಚೈಸಿ ಪಾಲುದಾರರ ನಡುವಿನ ಆಂತರಿಕ ಒಪ್ಪಂದದ ಪ್ರಕಾರ, ಪಾಲನ್ನು ಮೊದಲು ಅಸ್ತಿತ್ವದಲ್ಲಿರುವ ಪಾಲುದಾರರಿಗೆ ನೀಡಬೇಕು. ಈ ವಿಚಾರದಲ್ಲಿ ಪ್ರೀತಿ ಜಿಂಟಾ ಕಾನೂನು ಕ್ರಮ ಕೈಗೊಂಡಿದ್ದು, ಈ ಪ್ರಕರಣದ ವಿಚಾರಣೆ ಆಗಸ್ಟ್ 20 ರಂದು ಕೋರ್ಟ್​ನಲ್ಲಿ ನಡೆಯಲಿದೆ. ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆ-1996ರ ಸೆಕ್ಷನ್ 9ರ ಅಡಿಯಲ್ಲಿ ಪ್ರೀತಿ ಜಿಂಟಾ ಅರ್ಜಿ ಸಲ್ಲಿಸಿದ್ದಾರೆ.

ಈ ವಿವಾದದ ಬಗ್ಗೆ ಇತರ ಪಾಲುದಾರರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೆಲವು ವರದಿಗಳ ಪ್ರಕಾರ, ಬರ್ಮನ್ ಅವರು ತಂಡದಲ್ಲಿ ಅತಿ ಹೆಚ್ಚು ಪಾಲನ್ನು ಹೊಂದಿದ್ದಾರೆ. ಫ್ರಾಂಚೈಸಿಯ ನಿರ್ದೇಶಕರ ಮಂಡಳಿಯಲ್ಲೂ ಇದ್ದಾರೆ.

ಶೇ.11.5 ಷೇರಿನ ಮೌಲ್ಯ ಎಷ್ಟು?
ಪಂಜಾಬ್ ಕಿಂಗ್ಸ್‌ನ ಶೇಕಡಾ 11.5 ಪಾಲಿನ ಮೌಲ್ಯವು 540 ರಿಂದ 600 ಕೋಟಿ ರೂಪಾಯಿಗಳ ನಡುವೆ ಎಂದು ಅಂದಾಜಿಸಲಾಗಿದೆ. ಐಪಿಎಲ್‌ನಲ್ಲಿ ಪ್ರತಿ ತಂಡದ ಬೆಲೆ ತುಂಬಾ ಹೆಚ್ಚಾಗಿದೆ.

ಇದನ್ನೂ ಓದಿ:ಪಾಂಡ್ಯಗೆ ಇಲ್ಲ ಎಕ್ಸ್​​ಕ್ಯೂಸ್​.. ರೋಹಿತ್ ಇಟ್ಟ ಷರತ್ತು ಒಪ್ಪಿಕೊಂಡ MI..? ಭಾರೀ ಬದಲಾವಣೆ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಂಜಾಬ್ ಕಿಂಗ್ಸ್​ನಲ್ಲಿ ಬಿರುಗಾಳಿ; ಸಿಟ್ಟಿಗೆದ್ದು ಕೋರ್ಟ್​ ಮೆಟ್ಟಿಲೇರಿದ ನಟಿ ಪ್ರೀತಿ ಜಿಂಟಾ

https://newsfirstlive.com/wp-content/uploads/2024/08/PBKS-1.jpg

Load More