newsfirstkannada.com

×

60 TMC ನೀರು ಖಾಲಿ ಮಾಡಿಸೋದನ್ನು ಸುಳ್ಳಾಗಿಸಿದ್ದೇಗೆ..? ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಟೀಮ್ ಮಹತ್ವದ ಕಾರ್ಯ

Share :

Published August 18, 2024 at 12:47pm

    ಈ ಬಾರಿ ಎರಡು ಬೆಳೆಗಳಿಗೂ ಟಿಬಿ ಡ್ಯಾಂನಿಂದ ನೀರು ಸಿಗುತ್ತಾ?

    ನೀರು ಹಾಗೇ ಬಿಟ್ಟಿದ್ರೆ ಕುಡಿಯುವ ನೀರಿಗೂ ಸಮಸ್ಯೆ ಆಗುತ್ತಿತ್ತಾ?

    ದೇಶದ ಜಲಾಶಯಗಳ ಇತಿಹಾಸದಲ್ಲೇ ಐತಿಹಾಸಿಕ ಮೈಲಿಗಲ್ಲು

ವಿಜಯನಗರ: ತುಂಗಭದ್ರಾ ಡ್ಯಾಂಗೆ 19ನೇ ಕ್ರಸ್ಟ್ ಗೇಟ್​ಗೆ ತಾತ್ಕಾಲಿಕ ಗೇಟ್ ಅಳವಡಿಕೆ ಮಾಡುವ ಮೂಲಕ ಕನ್ನಯ್ಯ ನಾಯ್ಡು ಟೀಮ್ ದೇಶದ ಜಲಾಶಯಗಳ‌ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಜನರು ಪ್ರಶಂಸೆಗಳ ಸುರಿಮಳೆಗೈಯ್ಯುತ್ತಿದ್ದಾರೆ. ​

ಇದನ್ನೂ ಓದಿ: ತುಂಗಭದ್ರಾ ಜಲಾಶಯ ಕಾಪಾಡಿದ ಕನ್ನಯ್ಯ ನಾಯ್ಡು ಯಾರು? ಡ್ಯಾಂ ತಜ್ಞನ ಹಿನ್ನೆಲೆ ಏನು? ಸಾಧನೆಗಳೇನು?

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್​ಗೆ ಸ್ಟಾಪ್​ ಲಾಗ್ ಅಳವಡಿಕೆ ಕಾರ್ಯ ಸಂಪೂರ್ಣ ಯಶಸ್ವಿಯಾಗಿದೆ. ಸತತ 36 ಗಂಟೆಗಳ ಕೆಲಸ ಮಾಡುವ ಮೂಲಕ ಸ್ಟಾಪ್​ ಲಾಗ್ ಅನ್ನು ಅಳವಡಿಸಲಾಗಿದೆ. ಮೊದಲ ಬಾರಿಗೆ ಹರಿಯುವ ನೀರಲ್ಲಿ ಕನ್ನಯ್ಯ ನಾಯ್ಡು ಟೀಮ್​ ಮಹತ್ವದ ಕಾರ್ಯದ ಮೂಲಕ ಕ್ರಸ್ಟ್ ಗೇಟ್ ಜೋಡಿಸಿರುವುದು ದೇಶದ ಇತಿಹಾಸದಲ್ಲೇ ಐತಿಹಾಸಿಕ ಮೈಲಿಗಲ್ಲು ಆಗಿದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಅಪ್ಲೇ ಮಾಡಲು ಕೊನೆ ದಿನಾಂಕ..?

ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್​​ ಗೇಟ್​ ಚೈನ್​ಲಿಂಕ್​ ಕಟ್ ಆದ ಮೇಲೆ 60 ಟಿಎಂಸಿ ನೀರು ಖಾಲಿ ಮಾಡಿ ಆ ನಂತರ ಗೇಟ್ ಅಳವಡಿಸಬೇಕು ಎಂದು ಹೇಳಲಾಗುತ್ತಿತ್ತು. ಆದ್ರೆ ಕೇವಲ 35 ಟಿಎಂಸಿ ನೀರು ಮಾತ್ರ ಪೋಲಾದ ಮೇಲೆ ಸ್ಟಾಪ್​ ಲಾಗ್ ಅಳವಡಿಕೆ ಕೆಲಸದಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಡ್ಯಾಂನಲ್ಲೇ ಸಾಕಷ್ಟು ನೀರು ಉಳಿತಾಯವಾಗಿದೆ. ಇದು ರೈತರಿಗೆ, ಜನರಿಗೆ ಸಂತಸದ ವಿಷಯವಾಗಿದೆ. ಅಲ್ಲದೇ ಈ ಸಲ ಎರಡು ಬೆಳೆಗಳಿಗೆ ನೀರು ಕೊಡುವ ಸಾಧ್ಯತೆಯೂ ಇದೆ.

ತುಂಗಭದ್ರಾ ಜಲಾಶಯದಲ್ಲಿ 71 ಟಿಎಂಸಿ ನೀರು ಸಂಗ್ರಹ ಇರುವುದರಿಂದ ಮೊದಲ ಬೆಳೆ, 2ನೇ ಬೆಳೆಗೆ ನೀರು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಡ್ಯಾಂನಲ್ಲಿ ಗೇಟ್​ ತುಂಡಾದ ಮೇಲೆ ಈ ಸಲ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತದೆ ಎಂದು ಭಾವಿಸಲಾಗಿತ್ತು. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ತಂಡದ ದೊಡ್ಡ ಕಾರ್ಯದಿಂದ ಎಲ್ಲರೂ ನಿರಾಳರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

60 TMC ನೀರು ಖಾಲಿ ಮಾಡಿಸೋದನ್ನು ಸುಳ್ಳಾಗಿಸಿದ್ದೇಗೆ..? ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಟೀಮ್ ಮಹತ್ವದ ಕಾರ್ಯ

https://newsfirstlive.com/wp-content/uploads/2024/08/TB_DAM-1.jpg

Load More