3 ವರ್ಷದಲ್ಲೆ ನಂ.1 ಬ್ಯಾಟ್ಸ್ಮನ್.. T20 ಕ್ಯಾಪ್ಟನ್..!
ಸೂರ್ಯನ ಶರವೇಗದ ಸಕ್ಸಸ್ ಹಿಂದೆ ನಾರಿ ಶಕ್ತಿ
30ನೇ ವರ್ಷಕ್ಕೆ ಡೆಬ್ಯು ಮಾಡಿ ವಿರಾಜಿಸಿದ್ದೆ ಮ್ಯಾಜಿಕ್
ಸಕ್ಸಸ್ ಯಾರಿಗೂ ಅಷ್ಟು ಬೇಗ ಸಿಗಲ್ಲ. ಅದೊಂದು ಮಹಾ ತಪಸ್ಸು. ಆದರೆ ಟೀಮ್ ಇಂಡಿಯಾದ ಡಿಸ್ಟ್ರಕ್ಟಿವ್ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ ಯಶಸ್ಸು ಬಹು ಬೇಗನೆ ಸಿಕ್ಕು ಬಿಡ್ತು. ತಡವಾಗಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟರೂ ನಂಬರ್ 1 ಟಿ20 ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಚುಟುಕು ಕ್ರಿಕೆಟ್ನ ನಾಯಕತ್ವ ಅರಸಿ ಬಂದಿದೆ. ಶಾರ್ಟ್ ಟೈಮ್ನಲ್ಲಿ ಸ್ಕೈ ಇಂತಹ ಹ್ಯೂಸ್ ಸಕ್ಸಸ್ಗೆ ಆ ನಾರಿ ಶಕ್ತಿ ಕಾರಣ.
ಸೂರ್ಯಕುಮಾರ್ ಯಾದವ್. ಕ್ರಿಕೆಟ್ ದುನಿಯಾದ ವಿಧ್ವಂಸಕಾರಿ ಬ್ಯಾಟ್ಸ್ಮನ್. ಈ ಡೇಂಜರಸ್ ಬ್ಯಾಟರ್ ಅಂಗಳಕ್ಕೆ ಎಂಟ್ರಿ ಕೊಟ್ಟರೆ ಸಾಕು, ಬೌಲರ್ಗಳ ಮಾರಣ ಹೋಮ ನಡೆಯುತ್ತೆ. ಅದೆಂಥಾ ಬೌಲರ್ ಆದರೂ ಸೈ. ಸೂರ್ಯನ ಭಯಾನಕ ಬ್ಯಾಟಿಂಗ್ ಶಾಖಕ್ಕೆ ಸುಟ್ಟು ಹೋಗ್ತಾರೆ. ಅಂತಹ ಟೆರರ್ ಬ್ಯಾಟಿಂಗ್. ವಿಭಿನ್ನ ವಿನೂತನ ಶಾಟ್ಸ್ ಮೂಲಕ ಕ್ರಿಕೆಟ್ ಲೋಕವನ್ನ ದಂಗಾಗಿಸಿದ್ದಾರೆ.
ಇದನ್ನೂ ಓದಿ:ಲಾಬಿ, ಒತ್ತಡ ಪಕ್ಕಕ್ಕೆ ಬಿಡಿ..! ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿನ ಅಸಲಿ ಕಾರಣ ರಿವೀಲ್..!
3 ವರ್ಷದಲ್ಲೇ ನಂ.1 ಬ್ಯಾಟ್ಸ್ಮನ್
ಮಾರ್ಚ್ 14, 2021.. ಸೂರ್ಯಕುಮಾರ್ ಅನ್ನೋ ಬೆಂಕಿ ಬ್ಯಾಟರ್ ಟಿ20 ಕ್ರಿಕೆಟ್ಗೆ ಡೆಬ್ಯು ಮಾಡಿದ್ರು. ಆಗ ಅವರಿಗೆ 30 ವರ್ಷ ವಯಸ್ಸಾಗಿತ್ತು. ತಡವಾಗಿ ಟೀಮ್ ಇಂಡಿಯಾದ ಕದ ತಟ್ಟಿದ ಸ್ಕೈ ಕನ್ಸಿಸ್ಟನ್ಸಿ ಮತ್ತು ಡಿಸ್ಟ್ರಿಕ್ಟವ್ ಆಟವಾಡಿ ಎಲ್ಲರನ್ನ ಚಕಿತಗೊಳಿಸಿದ್ರು. ರನ್ ಮೇಲೆ ರನ್ ಗಳಿಸಿ ಟಿ20 ಕ್ರಿಕೆಟ್ನ ಕಿಂಗ್ ಅನ್ನಿಸಿಕೊಂಡ್ರು. ಅದ್ಭುತ ಪ್ರದರ್ಶನದ ಪರಿಣಾಮ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ಸಿ ಪಟ್ಟವು ಒಲಿದು ಬಂತು. ಸ್ಕೈ ಇಷ್ಟೆಲ್ಲಾ ಸಾಧನೆ ಮಾಡಿದ್ದು ಜಸ್ಟ್ ಮೂರೇ ಮೂರು ವರ್ಷದಲ್ಲಿ. ಸೂರ್ಯನ ಈ ಶರವೇಗದ ಸಕ್ಸಸ್ಗೆ ಕಾರಣ ಪತ್ನಿ ದೇವಿಶಾ ಶೆಟ್ಟಿ.
ಸೂರ್ಯ-ದೇವಿಶಾ ಶೆಟ್ಟಿ ನಡ್ವೆ ಪ್ರೇಮ
ಟೀಮ್ ಇಂಡಿಯಾ ಕ್ರಿಕೆಟರ್ಸ್ಗೂ ಲವ್ಗೂ ಒಂದು ಸುದೀರ್ಘ ಬೆಸುಗೆ ಇದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ. ಈ ತ್ರಿಮೂರ್ತಿ ದಿಗ್ಗಜರು ಪ್ರೇಮಿಸಿಯೇ ವಿವಾಹವಾದರು. ಅದೇ ಹಾದಿಯಲ್ಲಿ ಸೂರ್ಯಕುಮಾರ್ ಯಾದವ್ ಕೂಡ. ಸ್ಕೈ ತನ್ನ ಬಹುಕಾಲದ ಗೆಳತಿ ದೇವಿಶಾ ಶೆಟ್ಟಿ ಅವರನ್ನ ಪ್ರೀತಿಸಿ 2016 ರಲ್ಲಿ ಸಪ್ತಪದಿ ತುಳಿದ್ರು. ಈ ಸ್ಟಾರ್ ಜೋಡಿ ನಡುವೆ ಪ್ರೇಮ ಚಿಗುರೊಡೆದಿದ್ದೆ ಬಲು ರೋಚಕ.
ಅದು 2012ನೇ ಇಸವಿ. ಆಗಿನ್ನೂ ಸೂರ್ಯಕುಮಾರ್ ಕ್ರಿಕೆಟ್ ಲೋಕಕ್ಕೆ ಅಪರಿಚಿತ. ಆ ಟೈಮ್ನಲ್ಲೇ R.A PODAR ಕಾಲೇಜಿನಲ್ಲಿ ಓದುತ್ತಿದ್ದ ದೇವಿಶಾ ಸ್ಕೈ ಕಣ್ಣಿಗೆ ಬೀಳ್ತಾರೆ. ಅಷ್ಟೆ, ಸೌಂದರ್ಯದಲ್ಲಿ ಗಂಭೀರವಂತೆ, ಆಂತರಿಕವಾಗಿ ಔದಾರ್ಯವಾದ ದೇವಿಶಾ ಜೊತೆ ಲವ್ನಲ್ಲಿ ಬೀಳ್ತಾರೆ. ಮುಂಬೈನ ಬೀದಿ ಬೀದಿಗಳಲ್ಲಿ ಪ್ರೇಮ-ಪಕ್ಷಿಗಳಂತೆ ಹಾರಾಟ. ಇಬ್ಬರ ನವಿರಾದ ಪ್ರೇಮ ಮುಂದೆ ಹೊಸ ತಿರುವು ಪಡೆದುಕೊಳ್ಳುತ್ತೆ.
ಇದನ್ನೂ ಓದಿ:ಆರೋಗ್ಯದ ಸಮಸ್ಯೆಗೆ ಸಿಲುಕಿದ ಸುನಿತಾ ವಿಲಿಯಮ್ಸ್; ಗಗನಯಾತ್ರಿಗೆ ಆಗಿದ್ದೇನು?
2012 ರಲ್ಲಿ ಲವ್ನಲ್ಲಿ ಬಿದ್ದ ಸೂರ್ಯ-ದೇವಿಶಾ ಕಾಲೇಜು ದಿನಗಳಲ್ಲಿ ಸ್ನೇಹಿತರಾಗಿ ಪರಿಚಯವಾದ್ರು. ಬಳಿಕ ಆ ಸ್ನೇಹ ಪ್ರೀತಿಗೆ ತಿರುಗ್ತು. 4 ವರ್ಷ ಡೇಟಿಂಗ್ ನಡೆಸಿದ್ದ ಇಬ್ಬರೂ ಎರಡು ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2016 ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ರು. ಆ ಮೂಲಕ ಪ್ರೇಮಿಗಳಾಗಿದ್ದ ಸೂರ್ಯ-ದೇವಿಶಾ ಬಾಳ ಸಂಗಾತಿಯಾಗಿ ದಾಂಪತ್ಯ ಜೀವನಕ್ಕೆ ಬಂಧ ಬೆಸೆದ್ರು.
ಸೂರ್ಯನಿಗೆ ಗೈಡರ್, ಮೆಂಟರ್, ಸಪೋರ್ಟರ್
ದೇವಿಶಾ ಶೆಟ್ಟಿ ಸೂರ್ಯಕುಮಾರ್ ಯಾದವ್ಗೆ ಬರೀ ಪತ್ನಿಯಷ್ಟೇ ಅಲ್ಲ. ಉತ್ತಮ ಮಾರ್ಗದರ್ಶಿ, ಮೆಂಟರ್ ಹಾಗೂ ದೊಡ್ಡ ಸಪೋರ್ಟರ್ ಕೂಡ ಹೌದು. ಸ್ಕೈ ಕ್ರಿಕೆಟ್ ಕರಿಯರ್ನಲ್ಲಿ ಹಲವು ಬಾರಿ ಏಳು ಬೀಳುಗಳನ್ನ ಕಂಡಿದ್ದಾರೆ. ದೇಶದ ಪರ ಬೇಗನೆ ಆಡಲು ಅವಕಾಶ ಸಿಗದೇ ಕುಗ್ಗಿ ಹೋಗಿದ್ದು ಇದೆ. ಆಗ ಸ್ಕೈಗೆ ಬೆನ್ನೆಲುಬಾಗಿ, ಮಾನಸಿಕವಾಗಿ ಸ್ಥೈರ್ಯ ತುಂಬಿದ್ದು ಇದೇ ದೇವಿಶಾ ಶೆಟ್ಟಿ. ಸೂರ್ಯ ಫೇಲ್ಯೂರ್ ಆದಾಗಲೆಲ್ಲಾ ಕೆಪಾಸಿಟಿ ಬಗ್ಗೆ ಪಾಸಿಟಿವ್ ಮಾತುಗಳನ್ನಾಡಿದ್ರು. ಹಿನ್ನಡೆಯಾದಾಗ ಪ್ರೇರಣಾದಾಯಕ ಮಾತುಗಳ ಮೂಲಕ ಹೊಸ ಹುಮ್ಮಸು ತುಂಬಿದ್ರು. ಆ ಎಲ್ಲದರ ಪರಿಣಾಮವೇ ಸ್ಕೈ ಇಂದು ಟಿ20 ಕ್ರಿಕೆಟ್ನ ಚಕ್ರವರ್ತಿಯಾಗಿ ಮೆರೆದಾಡ್ತಿದ್ದಾರೆ.
ಇದನ್ನೂ ಓದಿ:ಕೇವಲ 36 ಗಂಟೆಯಲ್ಲಿ ಕಾರ್ಯಾಚರಣೆ ಯಶಸ್ವಿ; ಸಕ್ಸಸ್ನಲ್ಲೂ ಮಾತೃ ಹೃದಯ ಮಿಡಿದ ಡ್ಯಾಂ ತಜ್ಞ ಕನ್ನಯ್ಯ
ಪ್ರತಿಯೊಬ್ಬ ಪುರುಷರ ಸಕ್ಸಸ್ ಹಿಂದೆ ಒಬ್ಬ ಮಹಿಳೆ ಇರ್ತಾಳೆ ಅನ್ನೋ ಮಾತಿದೆ. ಅದು ಸೂರ್ಯಕುಮಾರ್-ದೇವಿಶಾ ಶೆಟ್ಟಿ ವಿಚಾರದಲ್ಲಿ ಅಕ್ಷರಶಃ ನಿಜವಾಗಿದೆ. ದೇವಿಶಾಳ ದೊಡ್ಡ ಬೆಂಬಲದಿಂದ ಸೂರ್ಯ ಟಿ20 ಕ್ರಿಕೆಟ್ನ ಡಾನ್ ಆಗಿ ಮೆರೆದಾಡ್ತಿದ್ದಾರೆ. ಸ್ಕೈ ಅವರ ಈ ಸಿಂಹ ಘರ್ಜನೆ ಭವಿಷ್ಯದಲ್ಲಿ ಹೀಗೆ ಮುಂದುವರಿಯಲಿ ಅನ್ನೋದೇ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್