newsfirstkannada.com

ನಿನ್ನೆಗಿಂತ ಇಂದು ಜಾಸ್ತಿ! ಒಳಹರಿವು ಹೆಚ್ಚಿಸುತ್ತಿದ್ದಾಳೆ ತುಂಗಭದ್ರೆ.. ಸದ್ಯ ನೀರಿನ ಪ್ರಮಾಣ ಎಷ್ಟಿದೆ?

Share :

Published August 20, 2024 at 9:05am

Update August 20, 2024 at 9:11am

    ಇತ್ತೀಚೆಗೆ ತುಂಗಭದ್ರಾ ಜಲಾಶಯದ ಕ್ರೆಸ್ಟ್​ ಗೇಟ್​ ತುಂಡರಿಸಿತ್ತು

    ಗೇಟ್​ ತುಂಡಾಗಿ ಹೋಗಿದ್ದ ಕಾರಣ ಡ್ಯಾಂ ನೀರಿನ ಪ್ರಮಾಣ ಕಡಿಮೆಯಾಗಿತ್ತು

    ಗೇಟ್​ ಅಳವಡಿಕೆ ಸಕ್ಸಸ್​​ ಆದಂತೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ

ವಿಜಯನಗರ: ತುಂಗಭದ್ರಾ ಜಲಾಶಯ ಕ್ರೆಸ್ಟ್​ ಗೇಟ್​ ತುಂಡರಿಸಿ ಅನೇಕ ಪ್ರಮಾಣದ ನೀರು ನದಿ ಪಾಲಾಗಿತ್ತು. ಆದರೀಗ ಡ್ಯಾಂ ತಜ್ಞ ಕನ್ನಯ್ಯ ಅವರ ಸಹಾಯದಿಂದ ತುಂಗಭಧ್ರಾ ನೀರಿಗೆ ತಾತ್ಕಾಲಿತ ಗೇಟ್​ ಅಳವಡಿಸಲಾಗಿದೆ. ತಾತ್ಕಾಲಿಕ ಗೇಟ್​ ಅಳವಡಿಕೆ ಸಕ್ಸಸ್​ ಆದ ಕಾರಣ ಜಲಾಶಯದಲ್ಲಿ ನೀರು ಶೇಖರಣೆಯಾಗುತ್ತಿದೆ. ಮಾತ್ರವಲ್ಲದೆ ಒಳಹರಿವು ಪ್ರಮಾಣದಲ್ಲೂ ಏರಿಕೆ ಕಂಡಿದೆ.

19ನೇ ಕ್ರೆಸ್ಟ್​ ಗೇಟ್​ ತುಂಡರಿಸಿದ ಕಾರಣ ತುಂಗಭದ್ರಾ ಜಲಾಶಯದಿಂದ ಅನೇಕ ನೀರು ನದಿ ಸೇರಿತ್ತು. ಇದರಿಂದ ರೈತರಿಗೆ ಬೇಸರವಾಗಿತ್ತು. ಕಾರಣ ಮಳೆಯಿಂದಾಗಿ ತುಂಗಭದ್ರಾ ಡ್ಯಾಂ ಭರ್ತಿಯಾಗಿ ಕೊನೆಗೆ ಕ್ರೆಸ್ಟ್​ ಗೇಟ್​ ತುಂಡಾದ ಕಾರಣ ನೀರೆಲ್ಲಾ ನದಿ ಪಾಲಾಗಿ ಪ್ರಮಾಣ ಕಡಿಮೆಯಾಗುತ್ತಾ ಬಂತು.

ಇದನ್ನೂ ಓದಿ: ಸೊಸೆ ಮಾಡಿದ ಮೋಸ, ಬೀದಿಗೆ ಬಂದ ಅತ್ತೆ! ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ 

ಆದರೀಗ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ತುಂಗಭದ್ರಾ ಡ್ಯಾಂನ ಒಳಹರಿವು ಏರಿಕೆಯಾಗಿದೆ. ಜಲಾಶಯದಲ್ಲಿ ದಿನಕ್ಕೊಂದು ಟಿಎಂಸಿ ನೀರಿನ ಪ್ರಮಾಣ ಹೆಚ್ಚುತ್ತಿದೆ.

ಇದನ್ನೂ ಓದಿ: VIDEO: ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ.. ಮಗುವಿದ್ದ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಅಟ್ಟಹಾಸ

ನಿನ್ನೆ 75 ಟಿಎಂಸಿ ನೀರು ಸಂಗ್ರಹವಿತ್ತು. ಇಂದು 76.912 ಟಿಎಂಸಿ ನೀರು ಸಂಗ್ರಹವಾಗಿದೆ. 31,033 ಕ್ಯೂಸೆಕ್ ನೀರು ಒಳಹರಿವಿದೆ. 10,201 ಕ್ಯೂಸೆಕ್ ನೀರು ಹೊರ ಹರಿವಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸಮೋಸ ತಿಂದ ಅನಾಥಾಶ್ರಮದ ಮೂವರು ವಿದ್ಯಾರ್ಥಿಗಳು ಸಾವು.. ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು

ತುಂಗಭದ್ರೆಯನ್ನು ನಂಬಿ ಅದೆಷ್ಟೋ ಜೀವರಾಶಿಗಳು ಬದುಕುತ್ತಿವೆ. ಅದರಲ್ಲೂ ರೈತರು ಇದನ್ನೇ ನಂಬಿ ಕೃಷಿಯನ್ನು ಮಾಡುತ್ತಾರೆ. ಆದರೆ 19ನೇ ಕ್ರೆಸ್ಟ್​ ಗೇಟ್​​ ಒಡೆದ ಕಾರಣ ರೈತರಲ್ಲಿ ಭಯದ ಜೊತೆಗೆ ಈ ಬಾರಿ ನೀರಿಲ್ಲದೆ ಕೃಷಿ ಮಾಡುವುದು ಹೇಗೆ ಎಂಬ ಭಯವಿತ್ತು. ಆದರೀಗ ಆ ಭಯವನ್ನು ತುಂಗಭದ್ರೆಯೇ ನಿವಾರಿಸುತ್ತಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನ್ನೆಗಿಂತ ಇಂದು ಜಾಸ್ತಿ! ಒಳಹರಿವು ಹೆಚ್ಚಿಸುತ್ತಿದ್ದಾಳೆ ತುಂಗಭದ್ರೆ.. ಸದ್ಯ ನೀರಿನ ಪ್ರಮಾಣ ಎಷ್ಟಿದೆ?

https://newsfirstlive.com/wp-content/uploads/2024/08/TUNGABHADRA-DAM-HISTORY.jpg

Load More