newsfirstkannada.com

ಅಬ್ಬಬ್ಬಾ! ಐಪಿಎಲ್​​ನಿಂದ ಬಿಸಿಸಿಐಗೆ ಬಂದ ಆದಾಯ ಎಷ್ಟು ಸಾವಿರ ಕೋಟಿ? ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!

Share :

Published August 20, 2024 at 6:34pm

    2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಈಗಿನಿಂದಲೇ ತಯಾರಿ

    ವರ್ಷದ ಕೊನೆಗೆ ನಡೆಯಲಿರೋ ಮೆಗಾ ಆಕ್ಷನ್​ಗೆ ಮುನ್ನ ಗುಡ್​ನ್ಯೂಸ್​​

    ಅಬ್ಬಬ್ಬಾ! ಐಪಿಎಲ್​​ನಿಂದ ಬಿಸಿಸಿಐಗೆ ಬಂದ ಆದಾಯ ಎಷ್ಟು ಕೋಟಿ?

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಆಕ್ಷನ್​ಗೆ ಮುನ್ನ ಎಲ್ಲಾ ಐಪಿಎಲ್​ ತಂಡಗಳಿಗೂ 4+2 ಆಟಗಾರರನ್ನು ರೀಟೈನ್​​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ ಎಂದು ವರದಿಯಾಗಿದೆ. ಇದರ ಮಧ್ಯೆ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಒಂದಿದೆ. ಐಪಿಎಲ್​​ನಿಂದ ಬಿಸಿಸಿಐಗೆ ಭಾರೀ ಆದಾಯ ಬಂದಿದೆ ಎಂದು ವರದಿಯಾಗಿದೆ.

ಬಿಸಿಸಿಐ 2023ರ ಐಪಿಎಲ್ ಆವೃತ್ತಿಯಿಂದ ಸುಮಾರು 5120 ಕೋಟಿ ರೂ. ಆದಾಯ ಗಳಿಸಿತ್ತು. 2022 ಐಪಿಎಲ್‌ನಲ್ಲಿ ಬಿಸಿಸಿಐ 2,367 ಕೋಟಿ ರೂ. ಇತ್ತು. ಬಿಸಿಸಿಐನ 2022-23ರ ವಾರ್ಷಿಕ ವರದಿ ಪ್ರಕಾರ, ಐಪಿಎಲ್ 2023ರ ಒಟ್ಟು ಆದಾಯ ವರ್ಷದಿಂದ ವರ್ಷಕ್ಕೆ 78% ರಷ್ಟು ಏರಿಕೆಯಾಗಿದೆ. ಅಂದರೆ ಬರೋಬ್ಬರಿ 11,769 ಕೋಟಿ ರೂ. ಆದಾಯ ಐಪಿಎಲ್​ನಿಂದ ಬಿಸಿಸಿಐ ಗಳಿಸಿದೆ ಎಂದು ವರದಿಯಾಗಿದೆ.

ಇನ್ನು,11,769 ಕೋಟಿ ಪೈಕಿ ಸುಮಾರು 6648 ಕೋಟಿ ಐಪಿಎಲ್ ಆಯೋಜನೆಗೆ ಖರ್ಚಾಗಿದೆ. 5120 ಕೋಟಿ ಆದಾಯ ಬಿಸಿಸಿಐ ಬೊಕ್ಕಸಕ್ಕೆ ಸಂದಿದೆ. ಕೇವಲ ಮಾಧ್ಯಮ ಹಕ್ಕು ಮತ್ತು ಪ್ರಾಯೋಜಕರ ವ್ಯವಹಾರಗಳಿಂದಲೇ ಇಷ್ಟು ಆದಾಯ ಬಂದಿದೆ ಎಂಬುದು ಗಮನಾರ್ಹ.

2023-27ರವರೆಗಿನ ಲೈವ್​ ಪ್ರಸಾರದ ಹಕ್ಕು 48,390 ಕೋಟಿಗೆ ಸೇಲ್ ಆಗಿದೆ. 2023-27ರ ಐಪಿಎಲ್‌ನ ಟಿವಿ ಹಕ್ಕನ್ನು ಡಿಸ್ನಿ ಸ್ಟಾರ್ 23,575 ಕೋಟಿ ರೂ.ಗೆ ಖರೀದಿಸಿದ್ದು, ವಯಾಕಾಮ್ 18 ಒಡೆತನದ ಜಿಯೋ ಸಂಸ್ಥೆ ಐಪಿಎಲ್‌ ಡಿಜಿಟಲ್ ಹಕ್ಕು 23,758 ಕೋಟಿಗೆ ಪಡೆದುಕೊಂಡಿದೆ.

ಇದನ್ನೂ ಓದಿ: RCB ಕ್ಯಾಪ್ಟನ್ಸಿಗೆ ಹೊಸ ಟ್ವಿಸ್ಟ್​​; ಕೊಹ್ಲಿ ಮತ್ತೆ ಕ್ಯಾಪ್ಟನ್; ಸ್ಫೋಟಕ ಸುಳಿವು ಕೊಟ್ಟ ಕೋಚ್!​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಬ್ಬಬ್ಬಾ! ಐಪಿಎಲ್​​ನಿಂದ ಬಿಸಿಸಿಐಗೆ ಬಂದ ಆದಾಯ ಎಷ್ಟು ಸಾವಿರ ಕೋಟಿ? ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/07/IPL-Teams.jpg

Load More