newsfirstkannada.com

ಕೂಲಿಂಗ್ ಗ್ಲಾಸ್​​, ಹ್ಯಾಂಡ್​ ಶೇಕ್ ಮಾಡಿ ಜೈಲಿಗೆ ಎಂಟ್ರಿ; ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟ ದರ್ಶನ್..!

Share :

Published August 29, 2024 at 1:53pm

    ರಾಜಾತಿಥ್ಯದ ತಪ್ಪಿಗೆ ಬಳ್ಳಾರಿಗೆ ಶಿಫ್ಟ್ ಆದ್ರೂ ತಗ್ಗದ ದರ್ಶನ್ ಸ್ಟೈಲ್

    ಬಳ್ಳಾರಿ ಜೈಲಿಗೂ ಸ್ಟೈಲಾಗಿ ಎಂಟ್ರಿ ಕೊಟ್ಟ ಕೊಲೆ ಆರೋಪಿ ದರ್ಶನ್!

    ಬ್ಲಾಕ್ ಟೀ ಶರ್ಟ್, ಬ್ಲ್ಯೂ ಜೀನ್ಸ್​​ ಜೊತೆಗೊಂದು ಕೂಲಿಂಗ್ ಗ್ಲಾಸ್

ಬಳ್ಳಾರಿ ಜೈಲಿಗೆ ನಟ ದರ್ಶನ್ ಅವರ ಎಂಟ್ರಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಜೈಲಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ಅವರನ್ನು ಜೈಲು ಸಿಬ್ಬಂದಿ ಕರೆದುಕೊಂಡು ಬಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಿಡಿಯೋದಲ್ಲಿ ಕಂಡುಬಂದಿದ್ದು ಏನು..?

ಅಂದ್ಹಾಗೆ ರಾಜಾತಿಥ್ಯದ ತಪ್ಪಿಗೆ ನಟ ದರ್ಶನ್​ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದಾರೆ. ಬಳ್ಳಾರಿಗೆ ಬಂದರೂ ನಟ ದರ್ಶನ್​ ಸ್ಟೈಲ್​ ಮಾತ್ರ ತಗ್ಗಿಲ್ಲ. ನಗು ನಗುತ್ತಲೇ ಜೈಲಿಗೆ ಬಂದ ದಾಸ ಬ್ರಾಂಡೆಡ್​ ಉಡುಪುಗಳನ್ನು ಧರಿಸಿ ​ಆಗಮಿಸಿದ್ದಾರೆ. ನಟ ದರ್ಶನ್​ ಟೀ ಶರ್ಟ್​​, ನೀಲಿ ಜೀನ್ಸ್,​ ಕೈಲ್ಲೊಂದು ಶರ್ಟ್​​, ಕಪ್ಪು ಕೂಲಿಂಗ್​ ಗ್ಲಾಸ್​ ಟೀ ಶರ್ಟ್​ ಮೇಲೆ ಸಿಕ್ಕಿಸಿಕೊಂಡು ಬಳ್ಳಾರಿ ಜೈಲಿಗೆ ಎಂಟ್ರಿ ನೀಡಿದ್ದಾರೆ. ನಗು ನಗುತ್ತಲೇ ಜೈಲಿಗೆ ಬಂದ ದರ್ಶನ್​​ ಜೈಲಿನ ಒಳಕ್ಕೆ ಹೋಗಿದ್ದಾರೆ. ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಜೈಲಿನ ಬ್ಯಾರಕ್​ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೀಗ ದರ್ಶನ್​ ಅಷ್ಟು ಸ್ಟೈಲ್​ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅನೇಕರು ಕೊಲೆ ಆರೋಪಿಗೆ ಇಷ್ಟೆಲ್ಲಾ ಫೆಸಿಲಿಟಿ ಯಾರು ಕೊಟ್ರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಬಳ್ಳಾರಿ ಜೈಲು ಸೇರಿದ ನಟ ದರ್ಶನ್.. ಜೈಲಿಗೆ ಎಂಟ್ರಿಯಾಗುವ ಫೋಟೋಗಳು ಇಲ್ಲಿವೆ..!

ಕೂಲಿಂಗ್ ಗ್ಲಾಸ್​ಗೆ ಅವಕಾಶ ಕೊಟ್ಟ ಬೆಂಗಾವಲು ಪಡೆಗೆ ಇದೀಗ ಸಂಕಷ್ಟ ಎದುರಾಗಿದೆ. ಬೆಂಗಾವಲು ಪಡೆಗೆ ಬಂಧೀಖಾನೆ ಇಲಾಖೆ ಉತ್ತರ ವಲಯ ಡಿಐಜಿ ನೋಟಿಸ್ ನೀಡಲು ಸಿದ್ಧತೆ ಮಾಡಿದ್ದಾರೆ. ನ್ಯೂಸ್‌ ಫಸ್ಟ್​​ಗೆ ಇಲಾಖೆ ಉತ್ತರ ವಲಯ ಡಿಐಜಿ ಶೇಷಾ ಮಾಹಿತಿ ನೀಡಿದ್ದು, ಜೈಲಿನಲ್ಲಿ ಕೂಲಿಂಗ್ ಗ್ಲಾಸ್‌ನಂಥ ವಸ್ತುಗಳನ್ನು ಒಯ್ಯುವ ಹಾಗಿಲ್ಲ. ನಿಯಮ ಉಲ್ಲಂಘಿಸಿದ ಬೆಂಗಾವಲು ಪಡೆಗೆ ನೋಟಿಸ್ ನೀಡಲು ಸಿದ್ಧತೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೂಲಿಂಗ್ ಗ್ಲಾಸ್​​, ಹ್ಯಾಂಡ್​ ಶೇಕ್ ಮಾಡಿ ಜೈಲಿಗೆ ಎಂಟ್ರಿ; ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟ ದರ್ಶನ್..!

https://newsfirstlive.com/wp-content/uploads/2024/08/DARSHAN-10.jpg

Load More