newsfirstkannada.com

ಈ ಐದು ಆಟಗಾರರ ಮೇಲೆ RCB ಕಣ್ಣು; ಮೆಗಾ ಹರಾಜಿನಲ್ಲಿ 4 ವಿದೇಶಿ ಆಟಗಾರರ ಖರೀದಿಗೆ ಟಾರ್ಗೆಟ್..!

Share :

Published September 7, 2024 at 8:16am

    ಡಿಸೆಂಬರ್​ನಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ

    ಫಾಫ್ ಡುಪ್ಲೆಸಿಸ್, ಮ್ಯಾಕ್ಸ್​ವೆಲ್​​ಗೆ ಆರ್​ಸಿಬಿ ಕೊಕ್ ನೀಡಲಿದೆ

    ನಾಲ್ವರು ವಿದೇಶಿ, ಓರ್ವ ಟೀಂ ಇಂಡಿಯಾ ಸ್ಟಾರ್ ಖರೀದಿಗೆ ಒತ್ತು

ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಪ್ರಸಿದ್ಧ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದು. 17 ವರ್ಷಗಳಿಂದ ಆಡುತ್ತಿರುವ ಆರ್​ಸಿಬಿ ಇನ್ನೂ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ವಿಭಿನ್ನ ತಂತ್ರದೊಂದಿಗೆ IPL 2025ರ ಮೆಗಾ ಹರಾಜಿನಲ್ಲಿ ಇಳಿಯಲು ಫ್ರಾಂಚೈಸಿ ಪ್ಲಾನ್ ಮಾಡಿಕೊಂಡಿದೆ.

ಇಷ್ಟು ವರ್ಷಗಳಲ್ಲಿ ಆಗಿರುವ ತಪ್ಪುಗಳನ್ನು ತಿದ್ದುಕೊಂಡು ಮತ್ತೆ ಅದನ್ನು ಮಾಡದ ರೀತಿಯಲ್ಲಿ ತಂಡವನ್ನು ಕಟ್ಟಲು ಪ್ಲಾನ್ ಮಾಡಿದೆ. ಹೀಗಾಗಿ ಐದು ಆಟಗಾರರ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ. ಎಷ್ಟೇ ಕೋಟಿ ಖರ್ಚಾದರೂ ಸರಿ ಅವರನ್ನು ಖರೀದಿಸಲು ಹರಾಜಿನಲ್ಲಿ ಫೈಟ್ ಮಾಡಲು ನಿರ್ಧರಿಸಿದೆ.

ಕೆ.ಎಲ್.ರಾಹುಲ್
ಕೆಎಲ್ ರಾಹುಲ್ ಆರ್‌ಸಿಬಿ ಸೇರುತ್ತಾರೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ರಾಹುಲ್ ಈ ಹಿಂದೆಯೂ ಈ ತಂಡದ ಭಾಗವಾಗಿದ್ದಾರೆ. ಒಂದು ವೇಳೆ ಲಕ್ನೋವನ್ನು ತೊರೆದರೆ RCB ಅವರಿಗೆ ಖಂಡಿತವಾಗಿಯೂ ಅವಕಾಶ ನೀಡಬಹುದು.

ಟ್ರಾವೀಸ್ ಹೆಡ್​
ಎಸ್​ಆರ್​​ಹೆಚ್​ನ ವಿಧ್ವಂಸಕ ಬ್ಯಾಟ್ಸ್​​ಮನ್​ ಟ್ರಾವಿಸ್ ಹೆಡ್​ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ ಅನ್ನೋದು ಲೇಟೆಸ್ಟ್ ಸುದ್ದಿ. ಒಂದು ವೇಳೆ ಅವರನ್ನು ಸನ್​ ರೈಸರ್ಸ್​ ಹೈದರಾಬಾದ್ ತಂಡವು ಕೈಬಿಟ್ಟರೆ, ಆರ್​ಸಿಬಿ ಖರೀದಿಸೋದ್ರಲ್ಲಿ ಎರಡು ಮಾತಿಲ್ಲ.

ದುನಿತ್ ವಿಲ್ಲಲಗೆ
ಶ್ರೀಲಂಕಾದ ಈ ಆಲ್​ರೌಂಡರ್​​​ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ. ಇವರನ್ನು ಸ್ಪಿನ್ನರ್​​ ಕೋಟಾದಡಿ ಖರೀದಿಸಲು ಪ್ಲಾನ್ ಮಾಡಿದೆ ಎನ್ನಲಾಗಿದೆ. ಯಾಕೆಂದರೆ ಚಹಾಲ್​ ಅವರನ್ನು ಕೈಬಿಟ್ಟ ಮೇಲೆ ಆರ್​ಸಿಬಿ ತುಂಬಾ ವರ್ಷಗಳಿಂದ ಸ್ಪಿನ್ನರ್ ವಿಭಾಗದಲ್ಲಿ ಹಿನ್ನಡೆ ಅನುಭವಿಸುತ್ತಿದೆ.

ಮಿಚೆಲ್ ಸ್ಟಾರ್ಕ್
ಮಿಚೆಲ್ ಸ್ಟಾರ್ಕ್ ಒಬ್ಬ ಅತ್ಯುತ್ತಮ ಬೌಲರ್ ಮತ್ತು KKR ಕೇವಲ ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳುವುದರಿಂದ, ಅವರು ಸ್ಟಾರ್ಕ್ ಅವರನ್ನು ಕೈಬಿಡಬಹುದು. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿಗೆ ಸ್ಟಾರ್ಕ್‌ಗೆ ಅವಕಾಶ ಸಿಗಲಿದೆ.

ಫಿಲ್ ಸಾಲ್ಟ್
ಫಿಲ್ ಸಾಲ್ಟ್ ಒಬ್ಬ ಅದ್ಭುತ ಬ್ಯಾಟ್ಸ್‌ಮನ್. ಆರ್‌ಸಿಬಿ ಡು ಪ್ಲೆಸಿಸ್ ಅವರನ್ನು ಕೈಬಿಟ್ಟರೆ ಅವರ ಸ್ಥಾನದಲ್ಲಿ ಸಾಲ್ಟ್ ಸ್ಫೋಟಕ ಓಪನಿಂಗ್ ನೀಡಬಹುದು. ದಿನೇಶ್ ಕಾರ್ತಿಕ್ ನಿರ್ಗಮನದ ನಂತರ ಆರ್‌ಸಿಬಿಗೆ ವಿಕೆಟ್‌ ಕೀಪರ್ ಅಗತ್ಯವಿದ್ದು, ಆ ಸ್ಥಾನವನ್ನೂ ಆರ್​ಸಿಬಿ ತುಂಬಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಐದು ಆಟಗಾರರ ಮೇಲೆ RCB ಕಣ್ಣು; ಮೆಗಾ ಹರಾಜಿನಲ್ಲಿ 4 ವಿದೇಶಿ ಆಟಗಾರರ ಖರೀದಿಗೆ ಟಾರ್ಗೆಟ್..!

https://newsfirstlive.com/wp-content/uploads/2024/07/RCB-54.jpg

Load More