newsfirstkannada.com

ಜಯ್ ಶಾ ಸ್ಥಾನದ ಮೇಲೆ ಕಣ್ಣಿಟ್ಟ ಮೂವರು; ಆ ಪಟ್ಟಿಯಲ್ಲಿ ಓರ್ವ 3 ಪಂದ್ಯಗಳನ್ನು ಆಡಿದ ಕ್ರಿಕೆಟಿಗ

Share :

Published September 7, 2024 at 11:43am

Update September 7, 2024 at 11:46am

    ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಜಯ್ ಶಾ ಬಾಸ್

    ಭಾರತೀಯ ಕ್ರಿಕೆಟ್ ಮಂಡಳಿ ಕಾರ್ಯಾಧ್ಯಕ್ಷರಾಗಿರುವ ಜಯ್ ಶಾ

    ಜಯ್ ಶಾ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಭಾರೀ ಪೈಪೋಟಿ

ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷದ ಕೊನೆಯಲ್ಲಿ ಬಿಸಿಸಿಐ ಮಂಡಳಿಯಿಂದ ಕೆಳಗಿಳಿಯಲಿದ್ದಾರೆ.

ಜಯ್ ಶಾ ಡಿಸೆಂಬರ್ 1 ರಿಂದ ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಇದರಿಂದ ಬಿಸಿಸಿಐನಲ್ಲಿ ಅವರ ಸ್ಥಾನ ತೆರವಾಗಲಿದೆ. ಈಗ ಜಯ್ ಶಾ ಬದಲಿಗೆ ಯಾರು ಎಂಬ ಪ್ರಶ್ನೆ ಮೂಡಿದೆ. ಕೆಲವು ಮಾಹಿತಿಗಳ ಪ್ರಕಾರ.. ಗುಜರಾತ್‌ನ ಮಾಜಿ ಕ್ರಿಕೆಟಿಗ ಅನಿಲ್ ಪಟೇಲ್‌ಗೆ ಈ ಹುದ್ದೆ ಸಿಗಬಹುದು ಎಂದು ಹೇಳಲಾಗಿದೆ. ಅನಿಲ್ ಪಟೇಲ್ ಗುಜರಾತ್ ಪರ 3 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಗುಜರಾತ್ ಕ್ರಿಕೆಟ್ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದೆ.

ಅನಿಲ್ ಪಟೇಲ್

  • ಗುಜರಾತ್ ಮಾಜಿ ಬ್ಯಾಟ್ಸ್‌ಮನ್ ಅನಿಲ್ ಪಟೇಲ್
  • ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ​​ಜೊತೆಗಿನ ಒಡನಾಟ
  • ಅನಿಲ್ ಪಟೇಲ್ ಪ್ರಸ್ತುತ ಜಿಸಿಎ ಕಾರ್ಯದರ್ಶಿಯಾಗಿದ್ದಾರೆ
  • ಅನಿಲ್ ಪಟೇಲ್ ಗುಜರಾತ್ ಪರ 3 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ
  • WTC-2023 ಫೈನಲ್‌ನಲ್ಲಿ ಟೀಂ ಇಂಡಿಯಾದ ಮ್ಯಾನೇಜರ್ ಆಗಿದ್ದರು

ಇದನ್ನೂ ಓದಿ:ಇನ್ನೂ ಬುದ್ಧಿ ಕಲಿಯದ IPL ಸ್ಟಾರ್; ಗಾಯಕ್ವಾಡ್​ಗೆ ಅವಮಾನ ಮಾಡಿದ ಬೌಲರ್..!

ಅರುಣ್ ಧುಮಾಲ್

  • ಕೇಂದ್ರ ಸಚಿವ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸಹೋದರ
  • ಕಳೆದ ಕೆಲವು ವರ್ಷಗಳಿಂದ ಬಿಸಿಸಿಐ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ
  • 2019ರಲ್ಲಿ ಬಿಸಿಸಿಐ ಖಜಾಂಚಿಯಾಗಿ ಕೆಲಸ ಮಾಡಿದ ಅನುಭವ ಇದೆ
  • ಎರಡು ವರ್ಷಗಳ ಹಿಂದೆ ಐಪಿಎಲ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು
  • ಇವರ ನಾಯಕತ್ವದಲ್ಲಿ ಐಪಿಎಲ್‌ನ ಮೂರು ಸೀಸನ್‌ ಯಶಸ್ವಿ ಆಗಿದೆ
  • ಮಹಿಳಾ ಪ್ರೀಮಿಯರ್ ಲೀಗ್ ಕೂಡ ಯಶಸ್ವಿಯಾಗಿ ಮುಗಿಸಿದ್ದಾರೆ
  • ಈ ಹಿಂದೆ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು

ಆಶಿಶ್ ಶೇಲಾರ್

  • ಆಶಿಶ್ ಶೆಲಾರ್ ಬಿಸಿಸಿಐನ ಹೊಸ ಖಜಾಂಚಿ ಆಗಿದ್ದಾರೆ
  • ಮಹಾರಾಷ್ಟ್ರದ ಬಿಜೆಪಿ ಶಾಸಕ ಆಶಿಶ್ ಶೆಲಾರ್
  • ತುಂಬಾ ವರ್ಷಗಳಿಂದ ಬಿಸಿಸಿಐ ಜೊತೆ ನಿಕಟ ಸಂಪರ್ಕ
  • 2015 ರಲ್ಲಿ ಮೊದಲ ಬಾರಿಗೆ ಬಿಸಿಸಿಐ ಸದಸ್ಯರಾದರು
  • 2017ರಲ್ಲಿ ಅವರು ಎಂಸಿಎ ಅಧ್ಯಕ್ಷರಾಗಿ ಆಯ್ಕೆಯಾದರು

2019ರಲ್ಲಿ ಜಯ್ ಶಾ ಮೊದಲ ಬಾರಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಜಯ್ ಶಾ ಈ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರ ಅಧಿಕಾರಾವಧಿ ಒಂದು ವರ್ಷ ಮಾತ್ರ ಉಳಿದಿದೆ. ಅದಕ್ಕೂ ಮುನ್ನ ಅವರು ಐಸಿಸಿಯ ಜವಾಬ್ದಾರಿ ವಹಿಸಿಕೊಳ್ಳಲು ನಿರ್ಧರಿಸಿದ್ದರು. ಆಗಸ್ಟ್ 27ರಂದು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಾ ನಾಮಪತ್ರ ಸಲ್ಲಿಸಿದ್ದರು. ಆ ಸ್ಥಾನಕ್ಕೆ ಬೇರೆ ಯಾರೂ ಸ್ಪರ್ಧಿಸದ ಕಾರಣ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ:ಈ ಐದು ಆಟಗಾರರ ಮೇಲೆ RCB ಕಣ್ಣು; ಮೆಗಾ ಹರಾಜಿನಲ್ಲಿ 4 ವಿದೇಶಿ ಆಟಗಾರರ ಖರೀದಿಗೆ ಟಾರ್ಗೆಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಯ್ ಶಾ ಸ್ಥಾನದ ಮೇಲೆ ಕಣ್ಣಿಟ್ಟ ಮೂವರು; ಆ ಪಟ್ಟಿಯಲ್ಲಿ ಓರ್ವ 3 ಪಂದ್ಯಗಳನ್ನು ಆಡಿದ ಕ್ರಿಕೆಟಿಗ

https://newsfirstlive.com/wp-content/uploads/2024/03/JAYA_SHAH.jpg

Load More