newsfirstkannada.com

ದ್ರಾವಿಡ್ ಎಂಟ್ರಿ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್​ ಶೇಕ್; ತಂಡ ತೊರೆಯಲು ಮುಂದಾದ ದಿಗ್ಗಜ..!

Share :

Published September 7, 2024 at 12:49pm

    ರಾಜಸ್ಥಾನ್ ರಾಯಲ್ಸ್​ನಲ್ಲಿ ಹೊಸ ಅಲೆ ಎದ್ದಿದೆ

    ಕೆಕೆಆರ್​ ಜೊತೆ ಸಂಪರ್ಕ ಬೆಳೆಸಿದ ಡೈರೆಕ್ಟರ್

    ಗಂಭೀರ್​​ ಸ್ಥಾನಕ್ಕೆ RR ತಂಡದ ಡೈರೆಕ್ಟರ್ ಕಣ್ಣು

ರಾಹುಲ್ ದ್ರಾವಿಡ್ ಎಂಟ್ರಿ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್​ನಲ್ಲಿ ಬಿರುಗಾಳಿ ಎದ್ದಂತಿದೆ. ಆರ್​ಆರ್​ ತಂಡ ನಿರ್ದೇಶಕ ಕುಮಾರ್​ ಸಂಗಕ್ಕಾರ ತಂಡ ತೊರೆಯೋದು ಖಚಿತವಾಗಿದೆ.

ವರದಿಗಳ ಪ್ರಕಾರ.. ದ್ರಾವಿಡ್​ ಬರ್ತಿದ್ದಂತೆಯೇ ಸಂಗಕ್ಕಾರ ಕೆಕೆಆರ್ ತಂಡದ ಮ್ಯಾನೇಜ್ಮೆಂಟ್​ ಜೊತೆ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಗಂಭೀರ್ ಸ್ಥಾನಕ್ಕೆ ಸಂಗಕ್ಕಾರ ಬರುವ ನಿರೀಕ್ಷೆಯಿದೆ. ಅಂದರೆ ಕೆಕೆಆರ್​ಗೆ ಸಂಗಕ್ಕಾರ ಮೆಂಟರ್ ಆಗಿ ಪ್ರವೇಶ ಮಾಡಲಿದ್ದಾರೆ.

ಇದನ್ನೂ ಓದಿ:ಜಯ್ ಶಾ ಸ್ಥಾನದ ಮೇಲೆ ಕಣ್ಣಿಟ್ಟ ಮೂವರು; ಆ ಪಟ್ಟಿಯಲ್ಲಿ ಓರ್ವ 3 ಪಂದ್ಯಗಳನ್ನು ಆಡಿದ ಕ್ರಿಕೆಟಿಗ

ಕುಮಾರ್ ಸಂಗಕ್ಕಾರ ಫ್ರಾಂಚೈಸಿ ತೊರೆಯುವ ಬಗ್ಗೆ ಯೋಚಿಸ್ತಿದ್ದಾರೆ ಎಂದು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದಾರೆ. ಕುಮಾರ ಸಂಗಕ್ಕಾರ ಹಾಲಿ ಚಾಂಪಿಯನ್ ಕೆಕೆಆರ್ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸ್ತಿದ್ದಾರೆ. ಗೌತಮ್ ಗಂಭೀರ್ ಸ್ಥಾನಕ್ಕೆ ಸಂಗಕ್ಕಾರ ಬರುವ ನಿರೀಕ್ಷೆಯಿದೆ ಎಂದಿದ್ದಾರೆ.

ಅಂದ್ಹಾಗೆ KKR ಶಿಬಿರದಲ್ಲಿ ಅನೇಕ ಸಹಾಯಕ ಸಿಬ್ಬಂದಿ ಸ್ಥಾನಗಳು ಖಾಲಿ ಇವೆ. ಗೌತಮ್ ಜೊತೆಗೆ, ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಮತ್ತು ಫೀಲ್ಡಿಂಗ್ ಕೋಚ್ ರಿಯಾನ್ ಸ್ಥಾನ ಕೂಡ ಖಾಲಿ ಆಗಿದೆ. ಇವರೆಲ್ಲ ಟೀಂ ಇಂಡಿಯಾದ ಕೋಚ್ ಸಿಬ್ಬಂದಿಯಾಗಿ ಸೇರಿಕೊಂಡಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸಂಗಕ್ಕಾರ 2021ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ನೇಮಕಗೊಂಡರು. ಅವರ ಅಧಿಕಾರಾವಧಿಯಲ್ಲಿ ರಾಜಸ್ಥಾನ ತಂಡ 2022 ರಲ್ಲಿ ಫೈನಲ್ ತಲುಪಿತ್ತು. ಆದರೆ ಟೈಟಾನ್ಸ್ ವಿರುದ್ಧ ಗುಜರಾತ್ ಸೋಲು ಅನುಭವಿಸಬೇಕಾಯಿತು.

ಇದನ್ನೂ ಓದಿ:ಈ ಐದು ಆಟಗಾರರ ಮೇಲೆ RCB ಕಣ್ಣು; ಮೆಗಾ ಹರಾಜಿನಲ್ಲಿ 4 ವಿದೇಶಿ ಆಟಗಾರರ ಖರೀದಿಗೆ ಟಾರ್ಗೆಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದ್ರಾವಿಡ್ ಎಂಟ್ರಿ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್​ ಶೇಕ್; ತಂಡ ತೊರೆಯಲು ಮುಂದಾದ ದಿಗ್ಗಜ..!

https://newsfirstlive.com/wp-content/uploads/2024/09/RAHUL-DRAVID-2.jpg

Load More