ಆರ್ಸಿಬಿಯಲ್ಲಿ ದಿನೇಶ್ ಕಾರ್ತಿಕ್ ಸ್ಥಾನ ತುಂಬೋದು ಯಾರು?
ಮೆಗಾ ಐಪಿಎಲ್ ಹರಾಜಿನ ಮೇಲೆ ಕಣ್ಣಿಟ್ಟಿರುವ ನಮ್ಮ ಆರ್ಸಿಬಿ
ಈ ಆಟಗಾರ ಬಂದರೆ ಕೀಪಿಂಗ್, ಓಪನಿಂಗ್ ಬ್ಯಾಟಿಂಗ್ ಎಲ್ಲ ಸರಾಗ
ಇಂಡಿಯನ್ ಪ್ರೀಮಿಯರ್ ಲೀಗ್ನ ಅತ್ಯಂತ ಪ್ರಸಿದ್ಧ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದು. 17 ವರ್ಷಗಳಿಂದ ಆಡುತ್ತಿರುವ ಆರ್ಸಿಬಿ ಇನ್ನೂ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ವಿಭಿನ್ನ ತಂತ್ರದೊಂದಿಗೆ IPL 2025ರ ಮೆಗಾ ಹರಾಜಿನಲ್ಲಿ ಇಳಿಯಲು ಫ್ರಾಂಚೈಸಿ ಪ್ಲಾನ್ ಮಾಡಿಕೊಂಡಿದೆ.
ಅಂತೆಯೇ ಆರ್ಸಿಬಿಗೆ ಚುರುಕು ಆಗಿರುವ ವಿಕೆಟ್ ಕೀಪರ್ ಒಬ್ಬರ ಅಗತ್ಯ ಇದೆ. ದಿನೇಶ್ ಕಾರ್ತಿಕ್ ಈ ವರ್ಷದಿಂದ ಫೀಲ್ಡಿಗೆ ಇಳಿಯುತ್ತಿಲ್ಲ. ಸದ್ಯ ಇರುವ ಅನುಜ್ ರಾವತ್ ಅಷ್ಟೊಂದು ಇಂಪ್ರೆಸೀವ್ ಆಗಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರ್ಸಿಬಿ ಹೊಸ ವಿಕೆಟ್ ಕೀಪರ್ ಹುಡುಕಾಟದಲ್ಲಿದೆ.
ಇದನ್ನೂ ಓದಿ:ದ್ರಾವಿಡ್-ಗಂಭೀರ್ ಬೇರೆ ಬೇರೆ, ವ್ಯತ್ಯಾಸ ಇದೆ -ದೊಡ್ಡ ವಿಚಾರ ಬಹಿರಂಗ ಮಾಡಿದ ಪಂತ್
ವರದಿಗಳ ಪ್ರಕಾರ.. ಫಿಲ್ ಸಾಲ್ಟ್ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ. ಫಿಲ್ ಸಾಲ್ಟ್ ಒಬ್ಬ ಅದ್ಭುತ ಬ್ಯಾಟ್ಸ್ಮನ್. ಆರ್ಸಿಬಿ ಡು ಪ್ಲೆಸಿಸ್ ಅವರನ್ನು ಕೈಬಿಟ್ಟರೆ ಅವರ ಸ್ಥಾನದಲ್ಲಿ ಸಾಲ್ಟ್ ಸ್ಫೋಟಕ ಓಪನಿಂಗ್ ನೀಡಬಹುದು. ದಿನೇಶ್ ಕಾರ್ತಿಕ್ ನಿರ್ಗಮನದ ನಂತರ ಆರ್ಸಿಬಿಗೆ ವಿಕೆಟ್ ಕೀಪರ್ ಅಗತ್ಯವಿದ್ದು, ಆ ಸ್ಥಾನವನ್ನೂ ಆರ್ಸಿಬಿ ತುಂಬಬಹುದು ಎಂಬ ಲೆಕ್ಕಾಚಾರದಲ್ಲಿ ಆರ್ಸಿಬಿ ಇದೆ. ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡುತ್ತಿರುವ ಇಂಗ್ಲೆಂಡ್ನ ಈ ದೈತ್ಯ ಬ್ಯಾಟ್ಸ್ಮನ್ ಖರೀದಿಸಲು ಆರ್ಸಿಬಿ ಬಿಗ್ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಈ ಮೂಲಕ ಓಪನಿಂಗ್ ಬ್ಯಾಟಿಂಗ್ ಹಾಗೂ ಕೀಪಿಂಗ್ ಎರಡು ವಿಭಾಗದಲ್ಲೂ ತಂಡವನ್ನು ಸರಿದೂಗಿಸಬಹುದು.
ಇದನ್ನೂ ಓದಿ:KL ರಾಹುಲ್ಗೆ ಟೀಂ ಇಂಡಿಯಾ ಡೋರ್ ಕ್ಲೋಸ್..? ಎಲ್ಲಾ ಅವಕಾಶ ಮುಚ್ಚಿದೆ, ಆದರೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ