newsfirstkannada.com

9 ವರ್ಷ.. 8 ನಾಯಕರು.. ಸಂಜು ಸ್ಯಾಮ್ಸನ್​​ ಅಂದರೆ ಇವರಿಗೆ ಲೆಕ್ಕಕ್ಕೆ ಉಂಟು, ಆಟಕ್ಕಿಲ್ಲ..!

Share :

Published September 9, 2024 at 7:19am

Update September 9, 2024 at 12:34pm

    ಅನ್ಯಾಯ, ಅನ್ಯಾಯ, ಅನ್ಯಾಯ, ಸ್ಯಾಮ್ಸನ್​​ಗೆ ಅನ್ಯಾಯ

    9 ವರ್ಷ.. 8 ನಾಯಕರಿಂದ ಸಂಜು ಸ್ಯಾಮ್ಸನ್​ಗೆ ಡ್ರಾಪ್​​​ ಶಿಕ್ಷೆ

    ಸಂಜು ಭಾರತದ ಮೋಸ್ಟ್​​ ಅನ್​​​ಲಕ್ಕಿ ಪ್ಲೇಯರ್..!

ಕ್ರಿಕೆಟರ್ಸ್​ ಲೈಫಲ್ಲಿ ಕಡೆಗಣನೆ ಸಹಜ. ಅನ್ಯಾಯವು ತಪ್ಪಿದ್ದಲ್ಲ. ಆದ್ರೆ ಅನ್ಯಾಯವೇ ಪರಿಪಾಠವಾದ್ರೆ? ಬಿಗ್​ ಹಿಟ್ಟರ್​ ಸಂಜು ಸ್ಯಾಮ್ಸನ್ ಲೈಫಲ್ಲಿ ಆಗ್ತಿದೋದು ಇದೆ. ಸಂಜು ಕ್ರಿಕೆಟ್ ಕರಿಯರ್​ನಲ್ಲಿ ಅರ್ಧಶ ಡಜನ್​​ಗೂ ಅಧಿಕ ನಾಯಕರಿಂದ ಮೋಸಕ್ಕೊಳಗಾಗಿದ್ದಾರೆ. ಆ ಅನ್ಯಾಯದ ಕಹಾನಿ ಇಲ್ಲಿದೆ.

ಅನ್ಯಾಯ, ಅನ್ಯಾಯ, ಅನ್ಯಾಯ, ಅನ್ಯಾಯ..!
ಸಂಜು ಸ್ಯಾಮ್ಸನ್​​. ಈ ಕೇರಳ ಕ್ರಿಕೆಟರ್​​ ವೆಲ್​ ಟ್ಯಾಲೆಂಟೆಡ್​ ಕ್ರಿಕೆಟರ್ ಅನ್ನೋದು ಎಷ್ಟು ಸತ್ಯನೋ, ಅವರೋರ್ವ ಅನ್​​ಲಕ್ಕಿಯೆಸ್ಟ್​ ಕ್ರಿಕೆಟ್ ಅನ್ನೋದು ಕೂಡ ಅಷ್ಟೇ ಸತ್ಯ. ಇಂಡಿಯನ್​ ಕ್ರಿಕೆಟ್​ ಹಿಸ್ಟರಿಯಲ್ಲಿ ಈ ಬಿಗ್​​​​ ಹಿಟ್ಟರ್​​​​​​​​ನಷ್ಟು ಮೋಸಕ್ಕೊಳಗಾದ, ಅನ್ಯಾಯಕ್ಕೊಳಗಾದ ಕ್ರಿಕೆಟಿಗನ ಮತ್ತೊಬ್ಬ ಇಲ್ಲ. ಪ್ರತಿಭೆ ಇದ್ದರೂ ಸೂಕ್ತ ಅವಕಾಶ ಸಿಗ್ತಿಲ್ಲ. ಆಗೊಂದು, ಈಗೊಂದು ಚಾನ್ಸ್​​. ಆಡಿದ್ದಕ್ಕಿಂತ ಬೆಂಚ್​ ಕಾದಿದ್ದೇ ಹೆಚ್ಚು. ಪ್ರಸಕ್ತ ದುಲೀಪ್​ ಟ್ರೋಫಿಯಲ್ಲಿ ಮತ್ತದೇ ದುಸ್ಥಿತಿ ಬಂದೊದಗಿದೆ.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದಿದ್ದಕ್ಕೆ ಬೇಸರ; ಸ್ಟಾರ್ ಆಲ್​ರೌಂಡರ್ ಕ್ರಿಕೆಟ್​ಗೆ ಗುಡ್​ಬೈ

ಸಂಜು ಸ್ಯಾಮ್ಸನ್​​​ ಕಡೆಗಣಿಸಿದ ಕ್ಯಾಪ್ಟನ್​​​ ಶ್ರೇಯಸ್
ಇಂಜುರಿಗೊಳಗಾದ ಇಶಾನ್​ ಕಿಶನ್ ದುಲೀಪ್ ಟ್ರೋಫಿಯಿಂದ ಹೊರಬಿದ್ರು. ಇವರ ಬದಲಿಗೆ ಸಂಜು ಸ್ಯಾಮ್ಸನ್​​ ದುಲೀಪ್​​​​ ಇಂಡಿಯಾ ಡಿ ತಂಡಕ್ಕೆ ಸೆಲೆಕ್ಟ್ ಆದ್ರು. ಆದ್ರೆ ಯಾವುದೇ ಪ್ರಯೋಜನಕ್ಕೆ ಬರ್ಲಿಲ್ಲ. ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಸ್ಯಾಮ್ಸನ್​​ರನ್ನ ಕಡೆಗಣಿಸಿದ್ರು. ಬೆಂಚ್ ಕಾದ ಸಂಜುಗೆ ಮತ್ತೆ ಅನ್ಯಾಯ ತಪ್ಪಲಿಲ್ಲ. ಸ್ಯಾಮ್ಸನ್​​​​​​​ ಕಡೆಗಣನೆಯ ಅವಮಾನಕ್ಕೆ ಒಳಗಾಗ್ತಿರೋದು ಇದೇ ಮೊದಲೇನಲ್ಲ. 9 ವರ್ಷಗಳ ಕ್ರಿಕೆಟ್ ಕರಿಯರ್​​ನಲ್ಲಿ ಇನ್ನೂ ಏಳು ನಾಯಕರಿಂದ ಅನ್ಯಾಯಕ್ಕೊಳಗಾಗಿದ್ದಾರೆ.

ಲೆಜೆಂಡ್ರಿ ಧೋನಿ ಕ್ಯಾಪ್ಟನ್ಸಿಯಲ್ಲಿ ಡ್ರಾಪ್​​
ಸ್ಯಾಮನ್ಸ್ ಹೆಚ್ಚು ಅನ್ಯಾಯಕ್ಕೊಳಗಾದವರ ಕ್ಯಾಪ್ಟನ್ಸಿ ಲಿಸ್ಟ್​​ನಲ್ಲಿ ಧೋನಿ ಹೆಸರು ಮುಂಚೂಣಿಯಲ್ಲಿರುತ್ತೆ. ಮಾಹಿ ನಾಯಕತ್ವದಲ್ಲೇ ಸಂಜು ಅಂತಾರಾಷ್ಟ್ರೀಯ ಕ್ರಿಕೆಟ್​ ಡೆಬ್ಯು ಮಾಡಿದ್ರೂ ಹೆಚ್ಚು ಚಾನ್ಸ್​ ಸಿಗಲಿಲ್ಲ. ಸರಣಿಯಿಂದ ಸರಣಿಗೆ ಸಂಜು ಆಯ್ಕೆಯಾದ್ರು ಹನ್ನೊಂದರ ಬಳಗದಲ್ಲಿ ಆಡಿಸದೇ ಡ್ರಾಪ್​ ಮೇಲೆ ಡ್ರಾಪ್ ಮಾಡಲಾಯ್ತು. ಸ್ಯಾಮ್ಸನ್ ಪ್ರತಿಭೆಯನ್ನ ಧೋನಿ​ ಗುರುತಿಸುವಲ್ಲಿ ಫೇಲಾದ್ರು.

ಕೊಹ್ಲಿ ನಾಯಕತ್ವದಲ್ಲಿ ಸಂಜುಗೆ ತಪ್ಪದ ಡ್ರಾಪ್ ಶಿಕ್ಷೆ
ಕಿಂಗ್ ಕೊಹ್ಲಿ ನಾಯಕತ್ವದಲ್ಲೂ ಸ್ಯಾಮ್ಸನ್​ಗೆ ಡ್ರಾಪ್ ಶಿಕ್ಷೆ ತಪ್ಪಲಿಲ್ಲ. ವಿರಾಟ್​​ 8 ವರ್ಷಗಳ ಕಾಲ ನಾಯಕನಾಗಿ ತಂಡವನ್ನ ಮುನ್ನಡೆಸಿದ್ರು. ಸಂಜು ರಾ ಟ್ಯಾಲೆಂಟ್​​​ ಅಂತ ಗೊತ್ತಿದ್ರೂ ಬೆಂಚ್​ಗೆ ಸೀಮಿತಗೊಳಿಸಿದ್ರು. ಅವರ ಮೇಲೆ ನಂಬಿಕೆ ಇಟ್ಟು ಹೆಚ್ಚು ಅವಕಾಶಗಳನ್ನ ನೀಡದೇ ನಿರ್ಲಕ್ಷಿಸಿದ್ರು. ಸಂಜು ಕಡೆಗಣನೆ ವಿಚಾರವಾಗಿ ಕೊಹ್ಲಿ ಅದೆಷ್ಟೋ ಬಾರಿ ಟ್ರೋಲ್ ಆಗಿದ್ದಿದೆ.

ಇದನ್ನೂ ಓದಿ:ಇಂಗ್ಲೆಂಡ್​ನ ಸ್ಟಾರ್ ಆಟಗಾರನ ಮೇಲೆ ಕಣ್ಣಿಟ್ಟ ಆರ್​ಸಿಬಿ; ಇವರು ಬಂದರೆ ಒಂದೇ ಕಲ್ಲಲ್ಲಿ 2 ಹಕ್ಕಿ..!

ರೋಹಿತ್​​ ಕ್ಯಾಪ್ಟನ್ಸಿಯಲ್ಲಿ ಅದೇ ರಾಗ ಅದೇ ಹಾಡು
ಕೊಹ್ಲಿ ಬಳಿಕ ತಂಡದ ಚುಕ್ಕಾಣಿ ಹಿಡಿದಿರೋ ರೋಹಿತ್​ ಶರ್ಮಾ ಕೂಡ ಸ್ಯಾಮ್ಸನ್​ಗೆ ಡ್ರಾಪ್​​​ ಶಿಕ್ಷೆ ಕೊಟ್ಟಿದ್ದಾರೆ. ಆಯ್ಕೆ ಸಮಿತಿ ಸ್ಥಾನ ನೀಡಿದ್ರೂ ಪ್ಲೇಯಿಂಗ್​​​​-11 ನಲ್ಲಿ ಆಡಿಸದೇ ಅನ್ಯಾಯ ಮಾಡಿದ್ದಾರೆ. ನಾಮಾಕಾವಸ್ತೆಗೆ ಸ್ಯಾಮ್ಸನ್​ರನ್ನ ಆಯ್ಕೆ ಮಾಡಿ, ಅಮಾವಾಸ್ಯೆ, ಹುಣ್ಣಿಮೆಗೊಂದು ಚಾನ್ಸ್​ ಕೊಡ್ತಿದ್ದಾರೆ.

ಹಾರ್ದಿಕ್​​​, ಸೂರ್ಯ ಮತ್ತು ರಾಹುಲ್​ ನಾಯಕತ್ವದಡಿ ಅನ್ಯಾಯ
ಬರೀ ಧೋನಿ, ರೋಹಿತ್ ಹಾಗೂ ವಿರಾಟ್ ಕೊಹ್ಲಿ ಅಷ್ಟೇ ಅಲ್ಲ. ಹಾರ್ದಿಕ್​ ಪಾಂಡ್ಯ, ಕನ್ನಡಿಗ ಕೆಲ್ ರಾಹುಲ್, ಸೂರ್ಯಕುಮಾರ್ ಯಾದವ್ ಹಾಗೂ ರಿಷಬ್​ ನಾಯಕತ್ವದಲ್ಲಿ ಸ್ಯಾಮ್ಸನ್ ಆಡಿದ್ದಾರೆ. ಈ ಎಲ್ಲಾ ನಾಯಕರುಗಳಿಂದ ಕೂಡ ಸಂಜುಗೆ ಮೋಸವಾಗಿದೆ.
ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 8 ನಾಯಕರಿಂದ ಪವರ್​ ಹಿಟ್ಟರ್​​ಗೆ ಅನ್ಯಾಯವಾಗಿದೆ. ಇಷ್ಟಾದ್ರು ಸ್ಯಾಮ್ಸನ್ಸ್ ಮಾತ್ರ ಕುಗ್ಗಿಲ್ಲ. ಕಡೆಗಣನೆಗೆ ತಲೆಕೆಡಿಸಿಕೊಳ್ಳದೇ ಪರ್ಫಾಮೆನ್ಸ್​​ನಿಂದಲೇ ಸೆಲೆಕ್ಟರ್ಸ್​ ಮನ ಗೆಲ್ತಿದ್ದಾರೆ. ಕ್ಯಾಪ್ಟನ್ಸ್ ಅನ್ನಿಸಿಕೊಂಡೋರು ಮಾತ್ರ ಇದನ್ನ ಅರ್ಥೈಸಿಕೊಳ್ಳದಿರೋದು ನಿಜಕ್ಕೂ ವಿಪರ್ಯಾಸವೇ ಸೈ.

ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

9 ವರ್ಷ.. 8 ನಾಯಕರು.. ಸಂಜು ಸ್ಯಾಮ್ಸನ್​​ ಅಂದರೆ ಇವರಿಗೆ ಲೆಕ್ಕಕ್ಕೆ ಉಂಟು, ಆಟಕ್ಕಿಲ್ಲ..!

https://newsfirstlive.com/wp-content/uploads/2024/09/SANJU.jpg

Load More