ಅಭಿಷೇಕ್ ವೆಡ್ಸ್ ಅವಿವಾ ಲಗ್ನ ಪತ್ರಿಕೆ ವೈರಲ್
ಮೋದಿ ಕೊಟ್ಟ ಆಮಂತ್ರಣ ಪತ್ರಿಕೆಯಲ್ಲಿ ಏನೇನಿತ್ತು ಗೊತ್ತಾ?
ಲವ್ ವಿಥ್ ಆ್ಯರೇಜ್ ಮ್ಯಾರೇಜ್ ಆಗಲು ಹೊರಟ ಅಭಿಷೇಕ್
ನಟ ಅಭಿಷೇಕ್ ಅಂಬರೀಶ್ ಅವರ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ವಿಶೇಷ ಅತಿಥಿಗಳಿಗಾಗಿ ಸಿದ್ಧಪಡಿಸಿಲಾದ ಸ್ಪೆಷಲ್ ಆಮಂತ್ರಣ ಪತ್ರಿಕೆ ಇದಾಗಿದ್ದು, ಇತ್ತೀಚೆಗೆ ಸಂಸದೆ ಸುಮಲತಾ ಮತ್ತು ಅಭಿಷೇಕ್ ಇದೇ ಲಗ್ನ ಪತ್ರಿಕೆಯನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೊಟ್ಟು ಮದುವೆಗೆ ಆಹ್ವಾನಿಸಿದ್ದರು. ಇದೀಗ ಈ ವಿಶೇಷ ಆಮಂತ್ರಣ ಪತ್ರಿಕೆಯಲ್ಲಿ ಏನೇನಿದೆ ಎಂದು ಕೂಡ ದೃಶ್ಯದ ಮೂಲಕ ವೈರಲ್ ಆಗಿದೆ.
ಜೂನ್ನಲ್ಲಿ ಮದುವೆ
ಜೂನ್ 5ನೇ ತಾರೀಖು ಸೋಮವಾರದಂದು ಅಭಿಷೇಕ್ ಅಂಬರೀಶ್ ಮಾಡೆಲ್ ಅವಿವಾ ಬಿಡಪ ಅವರನ್ನು ವಿವಾಹವಾಗುತ್ತಿದ್ದಾರೆ. ಸಮಯ 9:30 10:30ರವರೆಗಿನ ಕರ್ಕಾಟಕ ಲಗ್ನದಲ್ಲಿ ಅವಿವಾ ಜೊತೆಗೆ ಅಭಿಷೇಕ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರಿನ ಸಿ.ಡಿ ಜಯಮಹಲ್ ಮುಖ್ಯ ರಸ್ತೆ ಬಳಿ ಇರುವ ಮಾಣಿಕ್ಯ ಚಾಮರ ವಜ್ರ ಮಂಟಪದಲ್ಲಿ ಇವರ ಮದುವೆ ನಡೆಯಲಿದೆ.
ಅಭಿಷೇಕ್ ಅಂಬರೀಶ್ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ವಿಶೇಷ ಅತಿಥಿಗಳಿಗಾಗಿ ಸಿದ್ಧಪಡಿಸಿಲಾದ ಸ್ಪೆಷಲ್ ಆಮಂತ್ರಣ ಪತ್ರಿಕೆ ಇದಾಗಿದ್ದು, ಇತ್ತೀಚೆಗೆ ಸಂಸದೆ ಸುಮಲತಾ ಮತ್ತು ಅಭಿಷೇಕ್ ಇದೇ ಲಗ್ನ ಪತ್ರಿಕೆಯನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೊಟ್ಟು ಮದುವೆಗೆ ಆಹ್ವಾನಿಸಿದ್ದರು.@sumalathaA @Ambareesh_Abhi pic.twitter.com/bZNHO0exjr
— NewsFirst Kannada (@NewsFirstKan) May 29, 2023
ಲಗ್ನ ಪತ್ರಿಕೆಯಲ್ಲಿ ಏನೇನಿದೆ?
ಅಭಿಷೇಕ್ ವೆಡ್ಸ್ ಅವಿವಾ ಲಗ್ನ ಪತ್ರಿಕೆ ಡ್ರೈ ಫುಡ್ಸ್ ಕೂಡ ಇಡಲಾಗಿದೆ. ಗೋಡಂಬಿ, ಒಣದ್ರಾಕ್ಷಿ, ಬಾದಾಮಿಯನ್ನು ದೃಶ್ಯದಲ್ಲಿ ಕಾಣಬಹುದಾಗಿದೆ. ಸದ್ಯ ಇದು ದುಬಾರಿಯ ಆಮಂತ್ರಣ ಪತ್ರಿಕೆ ಎಂಬುದು ಮೇಲ್ನೋಟಕ್ಕೆ ಕಾಣಿಸಿದೆ.
ಕಳೆದ ವರ್ಷ ನಿಶ್ಚಿತಾರ್ಥ
ಇನ್ನು ಕಳೆದ ವರ್ಷ ಡಿಸೆಂಬರ್ 22ರಂದು ಅಭಿಷೇಕ್ ಅಂಬರೀಶ್ ಅವರು ಅವಿವಾ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡರು. ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಜರುಗಿದ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡು ಕುಟುಂಬಗಳು ಭಾಗಿಯಾಗಿದ್ದವು.
ಲವ್ ವಿಥ್ ಆ್ಯರೇಜ್ ಮ್ಯಾರೇಜ್
ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ತಮ್ಮ ಪ್ರೀತಿ ವಿಷಯವನ್ನ ಎರಡು ಮನೆಯವರಿಗೆ ತಿಳಿಸಿ ಮದುವೆಗೆ ಒಪ್ಪಿಗೆ ಪಡೆದುಕೊಂಡಿದ್ದರು. ಈ ನಿಶ್ಚಿತಾರ್ಥ ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸಮಾರಂಭಕ್ಕೆ ಬಂದು ಶುಭ ಹಾರೈಸಿದ್ದರು. ಜೊತೆಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಚಿವರಾದ ಆರ್. ಅಶೋಕ್, ಅಶ್ವತ್ಥ ನಾರಾಯಣ್, ಗುರುಕಿರಣ್ ದಂಪತಿ, ಸುಧಾಕರ್ ಸೇರಿದಂತೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ