newsfirstkannada.com

ಅಯ್ಯಯ್ಯೋ! ಭೀಕರ ಮನೆ ಕುಸಿತ; ಮೂವರು ದುರ್ಮರಣ; ಹಲವರು ಸಾವು ಬದುಕಿನ ಮಧ್ಯೆ ಹೋರಾಟ

Share :

Published September 18, 2024 at 7:35pm

    ಸೆಂಟ್ರಲ್​ ಡೆಲ್ಲಿಯಲ್ಲಿರೋ ಕರೋಲ್ ಭಾಗ್​​ನಲ್ಲಿ ಭೀಕರ ಮನೆ ಕುಸಿತ

    ಇದುವರೆಗೂ 15ಕ್ಕೂ ಹೆಚ್ಚು ಮಂದಿ ರಕ್ಷಣೆಯಾಗಿದೆ ಎಂದ ಪೊಲೀಸ್​​!

    ಭೀಕರ ಮನೆ ಕುಸಿತದಲ್ಲಿ ಮೂವರು ದಾರುಣ ಸಾವು ಅನ್ನೋ ಮಾಹಿತಿ

ದೆಹಲಿ: ಸೆಂಟ್ರಲ್​ ಡೆಲ್ಲಿಯ ಕರೋಲ್ ಭಾಗ್​​ನಲ್ಲಿ ಮನೆಯೊಂದು ಕುಸಿದಿದ್ದು, ಇದುವರೆಗೂ 3 ಜನ ಅಸುನೀಗಿದ್ದಾರೆ. ಅಲ್ಲದೇ 15ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ ಎಂದು ದೆಹಲಿ ಪೊಲೀಸ್ರು ಮಾಹಿತಿ ನೀಡಿದ್ದಾರೆ.

ಏನಿದು ಘಟನೆ?

ಕರೋಲ್ ಭಾಗ್​ನಲ್ಲಿರೋ ಪ್ರಶಾದ್ ನಗರದಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಈ ಘಟನೆ ಸುಮಾರು ಬೆಳಗ್ಗೆ 9 ವೇಳೆಗೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳಗ್ಗೆಯಿಂದ ಅಗ್ನಿಶಾಮಕ ಸಿಬ್ಬಂದಿ, ದೆಹಲಿ ಪೊಲೀಸ್ರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಪೊಲೀಸ್ರು ಹೇಳಿದ್ದೇನು?

ನಾವು ಇದುವರೆಗೂ 15ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದೇವೆ. ಕೆಲವರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ. ಸುಮಾರು 3 ಮಂದಿ ದುರ್ಮರಣ ಹೊಂದಿದ್ದಾರೆ ಎಂದರು ಸೆಂಟ್ರಲ್​ ಡೆಲ್ಲಿ ಉಪ ಪೊಲೀಸ್ ಆಯುಕ್ತ ಎಂ ಹರ್ಷ್ ವರ್ಧನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯಯ್ಯೋ! ಭೀಕರ ಮನೆ ಕುಸಿತ; ಮೂವರು ದುರ್ಮರಣ; ಹಲವರು ಸಾವು ಬದುಕಿನ ಮಧ್ಯೆ ಹೋರಾಟ

https://newsfirstlive.com/wp-content/uploads/2024/09/House-Building.jpg

Load More