newsfirstkannada.com

ಟೆಸ್ಟ್​ನಲ್ಲಿ ಸ್ಫೋಟಕ ಶತಕ; ವಿಶ್ವ ಶ್ರೇಷ್ಠ ಆಟಗಾರನ ದಾಖಲೆ ಮುರಿಯಲಿದ್ದಾರೆ ಆರ್​​. ಅಶ್ವಿನ್​​!

Share :

Published September 20, 2024 at 5:32pm

Update September 20, 2024 at 5:36pm

    ಟೀಮ್​ ಇಂಡಿಯಾ, ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯ

    ಚೆನ್ನೈನ ಚಿದಂಬರಂ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಮ್ಯಾಚ್​​

    ಬಾಂಗ್ಲಾದೇಶದ ವಿರುದ್ಧ ಹೊಸ ದಾಖಲೆ ಬರೆದ ರವಿಚಂದ್ರನ್​ ಅಶ್ವಿನ್​​!

ಚೆನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಭಾರತ ಮತ್ತು ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ದಾಖಲೆ ಬರೆದಿದ್ದಾರೆ.

ಟೀಮ್​ ಇಂಡಿಯಾ ಸಂಕಷ್ಟದಲ್ಲಿದ್ದಾಗ ಆಸರೆಯಾದ ಅಶ್ವಿನ್​​ ಮೊದಲ ದಿನವೇ ಅದ್ಭುತ ಬ್ಯಾಟಿಂಗ್ ಮಾಡಿದ್ರು. 144 ರನ್​ಗೆ ಬ್ಯಾಕ್​​ ಟು ಬ್ಯಾಕ್ 6 ವಿಕೆಟ್​ ಬಿದ್ದ ಕಾರಣ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಬಂದ ಅಶ್ವಿನ್​​ ಜಡೇಜಾ ಜೊತೆ ಸೇರಿ 199 ರನ್‌ಗಳ ಬೃಹತ್ ಜೊತೆಯಾಟವಾಡಿದರು.

ಇನ್ನು, ಇಬ್ಬರ ಅಮೋಘ ಇನ್ನಿಂಗ್ಸ್ ನೆರವಿನಿಂದ ಟೀಮ್​ ಇಂಡಿಯಾ 376 ರನ್‌ ಕಲೆ ಹಾಕಿತ್ತು. ಅಶ್ವಿನ್​ ಅಂತೂ ಈ ಟೆಸ್ಟ್​ನಲ್ಲಿ ಅದ್ಭುತ ಶತಕ ಸಿಡಿಸಿದ್ರು. ತಮ್ಮ ಟೆಸ್ಟ್ ವೃತ್ತಿಜೀವನದ 6ನೇ ಶತಕ ಇದಾಗಿತ್ತು. ಏಕದಿನ ರೀತಿಯಲ್ಲೇ ಬ್ಯಾಟ್​ ಬೀಸಿದ ಇವರು 11 ಫೋರ್​​, 2 ಸಿಕ್ಸರ್‌ ಬಾರಿಸಿದ್ರು.

ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿ ಶ್ರೀಲಂಕಾದ ಮಾಜಿ ಕ್ರಿಕೆಟರ್​ ಮುರಳೀಧರನ್ ವಿಶ್ವ ದಾಖಲೆ ಅಪಾಯಕ್ಕೆ ಸಿಲುಕಿಸಿದ್ದಾರೆ. ಇವರು ಸದ್ಯದಲ್ಲೇ ಮುತ್ತಯ್ಯ ಮುರಳೀಧರನ್ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಬೌಲಿಂಗ್​​ನಲ್ಲಿ ಬುಮ್ರಾ ಕಮಾಲ್​​.. ಕೇವಲ 149 ರನ್​ಗೆ ಬಾಂಗ್ಲಾದೇಶ ಆಲೌಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೆಸ್ಟ್​ನಲ್ಲಿ ಸ್ಫೋಟಕ ಶತಕ; ವಿಶ್ವ ಶ್ರೇಷ್ಠ ಆಟಗಾರನ ದಾಖಲೆ ಮುರಿಯಲಿದ್ದಾರೆ ಆರ್​​. ಅಶ್ವಿನ್​​!

https://newsfirstlive.com/wp-content/uploads/2024/09/Ashwin_Century.jpg

Load More