newsfirstkannada.com

Russia-Ukraine ಯುದ್ಧಕ್ಕೆ ಭಯಾನಕ ತಿರುವು; ಉಕ್ರೇನ್​ ಬೆನ್ನಿಗೆ ನಿಂತವಾ ಪಾಶ್ಚಾತ್ಯ ರಾಷ್ಟ್ರಗಳು? ಮುಂದೇನು..

Share :

Published September 26, 2024 at 3:48pm

Update September 26, 2024 at 3:59pm

    ಉಕ್ರೇನ್​ ಮೇಲೆ ಪರಮಾಣು ಬಾಂಬ್ ದಾಳಿ ನಡೆಸಲಿದೆಯಾ ರಷ್ಯಾ?

    ರಷ್ಯಾ ಮೇಲೆ ಕ್ರೂಸರ್ ಬಾಂಬ್ ದಾಳಿ ನಡೆಸುವಂತೆ ಉಕ್ರೇನ್​ಗೆ ಒತ್ತಡ?

    ರಷ್ಯಾದ ಮೇಲೆ ಕ್ರೂಸ್​ ಮಿಸೈಲ್​ ದಾಳಿಯಂತ ಭೀಕರ ಸುಳಿವು

ಮಾಸ್ಕೋ: ರಷ್ಯಾ ಮತ್ತು ಉಕ್ರೇನ್​ ನಡುವೆ ಭೀಕರ ರಣಕಾಳಗ ನಡೆಯಲು ಆರಂಭವಾಗಿ ಸುಮಾರು 2 ವರ್ಷಗಳೇ ಕಳೆದಿವೆ. ಉಭಯ ರಾಷ್ಟ್ರಗಳು ಕೂಡ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯುವಲ್ಲಿ ಸಜ್ಜಾಗಿಲ್ಲ. ದಿನದಿಂದ ದಿನಕ್ಕೆ ಯುದ್ಧದ ಕಾವು ಜೋರಾಗುತ್ತಿದೆಯೇ ಹೊರತು ತಗ್ಗುತ್ತಿಲ್ಲ. ಈಗ ಈ ಎರಡೂ ರಾಷ್ಟ್ರಗಳ ಯುದ್ಧ ಮತ್ತೊಂದು ಹಂತಕ್ಕೆ ಹೋಗಿ ನಿಂತಿದೆ. ಉಕ್ರೇನ್​ ಬೆನ್ನಿಗೆ ಪಾಶ್ಚಾತ್ಯ ರಾಷ್ಟ್ರಗಳು ನಿಲ್ಲುತ್ತಿದ್ದು. ಈ ಎರಡು ರಾಷ್ಟ್ರಗಳ ಕಾಳಗ ಮತ್ತೊಂದು ಪರಮಾಣು ಯುದ್ಧಕ್ಕೆ ಸಾಕ್ಷಿಯಾಗಲಿದೆಯಾ ಅನ್ನೋ ಆತಂಕ ಸೃಷ್ಟಿಸಿದೆ.

ದಿಢೀರನೇ ಉನ್ನತ ಭದ್ರತಾ ಮಂಡಳಿಯ ಸಭೆ ಕರೆದಿದ್ದೇಕೆ ಪುಟಿನ್?
ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್​ ಇತ್ತೀಚಿನ ನಡೆಗಳು ಅನೇಕ ಸಂಶಯಗಳನ್ನು ಮೂಡಿಸುತ್ತಿವೆ. ಸದ್ಯ ವ್ಲಾಡಮೀರ್ ಪುಟಿನ್ ಉನ್ನತ ಭದ್ರಾತ ಮಂಡಳಿಯೊಂದಿಗೆ ದಿಢೀರ್ ಮೀಟಿಂಗ್​ ಫಿಕ್ಸ್ ಮಾಡಿದ್ದಾರೆ.ಈ ಸಭೆಯಲ್ಲಿ ನ್ಯೂಕ್ಲೀಯರ್ ಯುದ್ಧದ ಬಗ್ಗೆ ಚರ್ಚೆ ನಡೆಯಲಿವೆ ಅನ್ನೋ ಗುಸು ಗುಸು ಸದ್ಯ ಮಾಸ್ಕೋದಲ್ಲಿ ಕೇಳಿಬರುತ್ತಿವೆ. ಪಾಶ್ಚಾತ್ಯ ಶಕ್ತಿಗಳು ರಷ್ಯಾದ ಒಳಗೆ ಕ್ರೂಸ್ ಮಿಸೈಲ್ ದಾಳಿ ನಡೆಸಲು ಉಕ್ರೇನ್​ನ್ನು ಉತ್ತೇಜಿಸುತ್ತಿರುವ ವಿಷಯ ಸ್ಪಷ್ಟವಾದ ಕಾರಣ ವ್ಲಾಡಮೀರ್ ಪುಟಿನ್ ಈ ಒಂದು ಸಭೆಯನ್ನು ದಿಢೀರ್​ನೆ ಕರೆದಿದ್ದಾರೆ. ಒಂದು ವೇಳೆ ಉಕ್ರೇನ್ ಆ ಹೆಜ್ಜೆಯನ್ನು ಇಟ್ಟಿದ್ದೇ ಆದ್ರೆ ಮುಂದಿನ ತಮ್ಮ ಯುದ್ಧದ ನೀತಿ ಹೇಗಿರಬೇಕು ಎಂಬ ಬಗ್ಗೆ ಈ ಒಂದು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಇದನ್ನೂ ಓದಿ: ಎಲಾನ್​ ಮಸ್ಕ್ ಪ್ರೀತಿಗೆ ಬಿದ್ರಾ ಜಾರ್ಜಿಯಾ ಮೆಲೋನಿ? ಇಟಲಿ ಪ್ರಧಾನಿಯನ್ನು ಗುಣಗಾನ ಮಾಡಿದ ಎಂದ ಟೆಸ್ಲಾ ಸಿಇಓ

ಕಳೆದ ವಾರವಷ್ಟೇ ಬ್ರಿಟನ್​ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ರಷ್ಯಾದ ಮೇಲೆ ಕ್ರೂಸ್​ ಮಿಸೈಲ್​ ದಾಳಿಯಂತ ರಣಭೀಕರ ನೆರಳೊಂದು ಸದ್ಯ ಉಭಯ ದೇಶಗಳ ನಡುವೆ ಸರಿದಾಡುತ್ತಿದೆ ಎಂದು ಬ್ರಿಟನ್ ಹೇಳಿತ್ತು. ಅದರ ಬೆನ್ನಲ್ಲೆ, ಬ್ರಿಟನ್​ ಪ್ರಧಾನ ಮಂತ್ರಿ ಕೈರ್ ಸ್ಟರ್ಮರ್ ಇತ್ತೀಚೆಗೆ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿ ಅಮೆರಿಕಾದ ಅಧ್ಯಕ್ಷ ಜೋ ಬೈಡನ್​ ಜೊತೆ ಮಾತುಕತೆಗಳನ್ನು ಕೂಡ ನಡೆಸಿದ್ದರು. ಈ ಇಬ್ಬರೂ ನಾಯಕರು ರಷ್ಯಾದ ನೆಲದ ಮೇಲೆ ಕ್ರೂಸ್ ಮಿಸೈಲ್ ದಾಳಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬೇಹುಗಾರಿಕೆ ಪಡೆಯಿಂದ ಪಕ್ಕಾ ಮಾಹಿತಿ ಪಡೆದ ರಷ್ಯಾ ಸದ್ಯ ನ್ಯೂಕ್ಲಿಯರ್ ಯುದ್ಧ ನೀತಿಯನ್ನು ತನ್ನದಾಗಿಸಿಕೊಳ್ಳಬೇಕಾ ಹೇಗೆ ಎಂಬ ಬಗ್ಗೆ ದೊಡ್ಡ ಚರ್ಚೆ ನಡೆಸುತ್ತಿದೆ. ಕ್ರೆಮಿಲಿಯನ್ ವಕ್ತಾರ ಡ್ಮಿಟ್ರೀ ಪೆಸ್ಕೋವ್ ಈ ಬಗ್ಗೆ ಮಾತನಾಡಿದ್ದು. ವ್ಲಾಡಮಿರ್ ಪುಟಿನ್ ಈಗಾಗಲೇ ತಮ್ಮ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಮುಂದಿನ ಯುದ್ಧನೀತಿಯ ಬಗ್ಗೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅದರ ಬಗ್ಗೆ ಸದ್ಯದಲ್ಲಿಯೇ ಅಧ್ಯಕ್ಷ ವ್ಲಾಡಮೀರ್​ ಪುಟಿನ್ ಮಾತನಾಡಲಿದ್ದು, ಮುಂದಿನ ನಮ್ಮ ಯೋಜನೆ ಏನೂ ಅನ್ನೋದು ಅತ್ಯಂತ ರಹಸ್ಯವಾಗಿಡಲಾಗುವುದು ಎಂದು ಪೆಸ್ಕೋವ್ ಹೇಳಿದ್ದಾರೆ.

ಇದನ್ನೂ ಓದಿ: ಮಹಾಯುದ್ಧದ ಕಾರ್ಮೋಡ; ರಷ್ಯಾ- ಉಕ್ರೇನ್ ಘರ್ಷಣೆ ಮತ್ತೆ ಆರಂಭ.. ನ್ಯೂಕ್ಲಿಯರ್- ಕ್ಷಿಪಣಿ ದಾಳಿಗೆ ಪ್ಲಾನ್?

ರಷ್ಯಾ ವಿಶ್ವದ ಅತ್ಯಂತ ಅಣುಶಕ್ತಿ ಹೊಂದಿರುವ ರಾಷ್ಟ್ರ ಅಮೆರಿಕಾ ಹಾಗೂ ರಷ್ಯಾ ಜಗತ್ತಿನ ಶೇಕಡಾ 88ರಷ್ಟು ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳು. ಒಂದು ವೇಳೆ ಶತ್ರು ರಾಷ್ಟ್ರದಿಂದ ಅಣುಬಾಂಬ್​ನ ಬೆದರಿಕೆ ಅಥವಾ ರಷ್ಯಾದ ಮೇಲೆ ದಾಳಿ ನಡೆಸುವ ಯೋಜನೆ ಕೇಳಿ ಬಂದಿದ್ದೇ ಆದಲ್ಲಿ ರಷ್ಯಾ ಅಣುಬಾಂಬ್ ದಾಳಿ ನಡೆಸಲಿದೆ ಅನ್ನೋ ಪರಮಾಣು ನೀತಿಯನ್ನು ರಷ್ಯಾ ಹೊಂದಿದೆ. ಸದ್ಯ ಉಕ್ರೇನ್​ನಿಂದ ತನ್ನ ನೆಲದ ಮೇಲೆ ಕ್ರೂಸರ್ ಬಾಂಬ್​ ದಾಳಿಯಂತ ದಾಳಿಗಳು ನಡೆಯುವ ಸಾಧ್ಯತೆ ಇರುವ ಬಗ್ಗೆ ರಷ್ಯಾ ಮನಗಂಡಿದೆ. ಇದು ಮತ್ತೊಂದು ಪರಮಾಣು ದಾಳಿಗೆ ವಿಶ್ವ ಸಾಕ್ಷಿಯಾಗಲಿದೆ ಅನ್ನೋ ಆತಂವನ್ನು ಸೃಷ್ಟಿಸಿದೆ. ಈಗಾಗಲೇ ಮಧ್ಯಪ್ರಾಚ್ಯದಲ್ಲಿಯೂ ಕೂಡ ಯುದ್ಧದ ಭೀಕರ ಕಾರ್ಮೋಡ ಕವಿದಿದೆ. ಇತ್ತ ಯುರೋಪ್​ನಲ್ಲಿಯೂ ಕೂಡ ಈ ಎರಡು ರಾಷ್ಟ್ರಗಳು ಕಳೆದ ಎರಡು ವರ್ಷಗಳಿಂದ ಕಾದಾಡುತ್ತಲೇ ಇವೆ. ಇದು ಮುಂದೆ ಯಾವ ಹಂತಕ್ಕೆ ಹೋಗಲಿದೆಯೋ ಅನ್ನೋ ಅನುಮಾನಗಳು ಕಾಡುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Russia-Ukraine ಯುದ್ಧಕ್ಕೆ ಭಯಾನಕ ತಿರುವು; ಉಕ್ರೇನ್​ ಬೆನ್ನಿಗೆ ನಿಂತವಾ ಪಾಶ್ಚಾತ್ಯ ರಾಷ್ಟ್ರಗಳು? ಮುಂದೇನು..

https://newsfirstlive.com/wp-content/uploads/2024/09/VLADAMIR-PUTIN-MEETING.jpg

Load More