newsfirstkannada.com

ಕ್ರಿಕೆಟ್ ಆಚೆ ಬೇರೆ ಕ್ರೀಡೆಯನ್ನು ಪ್ರೀತಿಸುವುದನ್ನೇ ಮರೆತರಾ ಭಾರತೀಯರು? ನೊಂದ ಹಾಕಿಪಟು ಹೇಳಿದ್ದೇನು?

Share :

Published September 27, 2024 at 8:34pm

Update September 27, 2024 at 8:36pm

    ನಮ್ಮದೇ ದೇಶದಲ್ಲಿ ನಮಗೇ ಅಪರಿಚಿತರಂತೆ ಉಳಿದರಾ ಹಾಕಿ ಪಟುಗಳು

    ಭಾರತೀಯ ಹಾಕಿಪಟು ಹಾರ್ದಿಕ್ ಸಿಂಗ್ ನೊಂದು ಹೇಳಿದ ಮಾತುಗಳೇನು?

    ಭಾರತೀಯರು ಕ್ರಿಕೆಟ್​ ಒಂದನ್ನು ಬಿಟ್ಟು ಯಾವ ಕ್ರೀಡೆಯನ್ನು ಪ್ರೀತಿಸಲೇ ಇಲ್ವಾ?

ಭಾರತವೊಂದು ಕ್ರಿಕೆಟ್ ಪ್ರೇಮಿ ದೇಶವಾಗಿಯೇ ಉಳಿದುಬಿಟ್ತಾ? ಬೇರೆ ಕ್ರೀಡಾಪಟುಗಳುಗೆ ತಮ್ಮ ಜನಪ್ರಿಯತೆಯನ್ನು ಕಾಯ್ದುಕೊಳ್ಳುವುದೇ ಈ ದೇಶದಲ್ಲಿ ಕಠಿಣವಾಗಿ ಉಳಿದಿದೆಯಾ? ನಾವು ನಮ್ಮದೇ ದೇಶದ ಕ್ರೀಡೆಯಾದ ಹಾಕಿಯನ್ನು ಮರೆತಿದ್ದೇವೆ. ಕಬಡ್ಡಿಯನ್ನು ಮರೆತಿದ್ದೇವೆ. ಕ್ರಿಕೆಟ್​ವೊಂದನ್ನೇ ತಲೆಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದೇವೆ ಅನ್ನೋದಕ್ಕ ಪದೇ ಪದೇ ಸಾಕ್ಷಿಗಳು ಧಕ್ಕುತ್ತಲೇ ಇವೆ. ನಮಗೆ ಸಚಿನ್, ಗವಾಸ್ಕರ್ ಗೊತ್ತಿದ್ದಷ್ಟು ಧ್ಯಾನ್​ಚಂದ್, ಲಿಯಾಂಡರ್ ಫೇಸ್, ಧನ್​ರಾಜ್ ಪಿಳ್ಳೆ ಗೊತ್ತಿಲ್ಲ. ನಮಗೆ ಕೊಹ್ಲಿ ಗೊತ್ತಿದ್ದಷ್ಟು ಪಿ.ಟಿ. ಉಷಾ ಗೊತ್ತಿಲ್ಲ. ಕ್ರಿಕೆಟ್​ ಅಲ್ಲದೇ ಈ ದೇಶ ಬೇರೆ ಯಾವ ಕ್ರೀಡೆಯನ್ನು, ಕ್ರೀಡಾಪಟುವನ್ನು ಪ್ರೀತಿಸಲೇ ಇಲ್ವಾ? ಹೌದು ಎನ್ನುತ್ತಿವೆ ಭಾರತೀಯ ಹಾಕಿ ತಂಡದ ಮಿಡ್ಲ್ ಫಿಲ್ಡರ್ ಹಾರ್ದಿಕ್ ಸಿಂಗ್ ಹೇಳಿಕೆಗಳು.

ಇದನ್ನೂ ಓದಿ: ಸ್ಲ್ಯಾಪ್​ ಫೈಟ್​​ನಿಂದ ಮೆದುಳಿಗೆ ಭಾರೀ ಅಪಾಯ; ನೀವು ಓದಲೇಬೇಕಾದ ಸ್ಟೋರಿ!

ಇತ್ತೀಚೆಗೆ ಹಾರ್ದಿಕ್ ಸಿಂಗ್ ಒಂದು ಸಂದರ್ಶನದಲ್ಲಿ ತಮ್ಮ ಮನದಾಳದ ಮಾತನ್ನು ಮಾತು ಅನ್ನೋದಕ್ಕಿಂತ ನೋವನ್ನ ಹೊರ ಹಾಕಿದ್ದಾರೆ. ಈ ದೇಶಕ್ಕೆ ಡಾಲಿ ಚಾಯ್​ವಾಲಾ ಗೊತ್ತು. ಸತತ ಮೂರು ಕಂಚಿನ ಪದಕ ತಂದ ನಾವು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ಹಾಕಿ ತಂಡ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಾಧನೆಗಳನ್ನು ಮಾಡಿದೆ. ಬ್ಯಾಕ್ ಟು ಬ್ಯಾಕ್​ ಎರಡು ಒಲಿಂಪಿಕ್​ ಕಂಚಿನ ಪದಕವನ್ನು ಗೆದ್ದುಕೊಂಡು ಬಂದಿದೆ ಆದರೂ ನಮಗೊಂದು ಗುರುತನ್ನು ನಮ್ಮ ದೇಶದಲ್ಲಿ ಪಡೆಯಲು ಆಗುತ್ತಿಲ್ಲ ಎಂದು ಹಾರ್ದಿಕ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಟ್ರೋಲರ್ಸ್​ಗಳಿಗೆ ಶೂಟ್​ ಮಾಡಿದ Manu Bhaker.. ಇಷ್ಟೊಂದು ಪದಕಗಳನ್ನು ತೋರಿಸಿ ಹೇಳಿದ್ದೇನು?

ಒಂದು ದಿನ ಏರ್​ಪೋರ್ಟ್​ನಲ್ಲಿ ನಾನು ಹರ್ಮನ್​ಪ್ರೀತ್​ ಸಿಂಗ್, ಮಂದೀಪ್ ಸಿಂಗ್ ಐದಾರು ಜನ ಇದ್ದೆವು. ನಾನು ನನ್ನ ಕಣ್ಣಾರೆ ನೋಡಿದ್ದೇನೆ. ಅಲ್ಲಿದ್ದ ಜನರು ಡಾಲಿ ಚಾಯ್​ವಾಲಾನೊಂದಿಗೆ ಸೆಲ್ಫಿಗೆ ಮುಗಿಬಿದ್ದಿದ್ದರು. ಆದರೆ ಒಬ್ಬರೂ ಕೂಡ ನಮ್ಮನ್ನು ಗುರುತಿಸಲಿಲ್ಲ ನಾವು ಒಬ್ಬರಿಗೊಬ್ಬರು ಮುಖವನ್ನು ನೋಡಿಕೊಂಡು ಒಂದು ವಿಷಾದದ ನಗೆ ನಕ್ಕೆವು ಎಂದು ಹಾರ್ದಿಕ್ ಸಿಂಗ್​ ಸಂದರ್ಶನದಲ್ಲಿ ಹೇಳಿದ್ದಾರೆ.

ಹರ್ಮನ್​ಪ್ರೀತ್ 150 ಗೋಲ್ ಮಾಡಿದ್ದಾರೆ. ಮಂದೀಪ್​ 100 ಫಿಲ್ಡ್ ಗೋಲ್ ಮಾಡಿದ್ದಾರೆ. ನಾವು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಬಲಾಢ್ಯ ದೇಶಗಳನ್ನು ಮಣ್ಣು ಮುಕ್ಕಿಸಿ ಬಂದಿದ್ದೇವೆ ಆದ್ರೆ ನಮ್ಮ ದೇಶದಲ್ಲಿ ನಾವು ಅಪರಿಚತ ಮುಖಗಳಾಗಿ ಉಳಿದು ಬಿಟ್ಟಿದ್ದೇವೆ ಎಂದು ಹಾರ್ದಿಕ್ ತುಂಬ ಬೇಸರದಿಂದ ಹೇಳಿಕೊಂಡಿದ್ದಾರೆ. ಡಾಲಿ ಒಬ್ಬ ಅದ್ಭುತ ಚಹಾ ತಯಾರಕ ಅನ್ನೋದರಲ್ಲಿ, ಅವರು ಬಿಲ್​ ಗೇಟ್ಸ್​ರನ್ನು ಮೀಟ್ ಮಾಡುವ ಮಟ್ಟಕ್ಕೆ ಜನಪ್ರಿಯತೆ ಹೊಂದಿದ್ದಾರೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ನಾವು ಕೂಡ ಒಂದರ ಹಿಂದೊಂದರಂತೆ ಮೆಡಲ್​ಗಳನ್ನು ತಂದಿದ್ದೇವೆ. ನಮಗೆ ಸಿಗಬೇಕಾದ ಗೌರವ, ಗುರುತು ನಮಗೆ ಸಿಗುತ್ತಿಲ್ಲ ಎನ್ನುವುಕ್ಕೆ ಒಂದು ಬೇಸರವಿದೆ ಎಂದು ತಮ್ಮ ನೊಂದ ನುಡಿಗಳನ್ನ ಆಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರಿಕೆಟ್ ಆಚೆ ಬೇರೆ ಕ್ರೀಡೆಯನ್ನು ಪ್ರೀತಿಸುವುದನ್ನೇ ಮರೆತರಾ ಭಾರತೀಯರು? ನೊಂದ ಹಾಕಿಪಟು ಹೇಳಿದ್ದೇನು?

https://newsfirstlive.com/wp-content/uploads/2024/09/Hockey-Stars.jpg

Load More