newsfirstkannada.com

INDvsBAN; ಭಾರತ 2ನೇ ಟೆಸ್ಟ್​ ಗೆಲ್ಲುವುದು ಬಹುತೇಕ ಕನ್​ಫರ್ಮ್​​.. ಬಾಂಗ್ಲಾ ಕೊಟ್ಟ ಟಾರ್ಗೆಟ್ ಎಷ್ಟು?

Share :

Published October 1, 2024 at 12:49pm

    2-0ದಿಂದ ಟೆಸ್ಟ್​ ಸರಣಿಯನ್ನು ಭಾರತ ಕೈವಶ ಮಾಡಿಕೊಳ್ಳುತ್ತಾ?

    ಅಲ್ಪ ಮೊತ್ತಕ್ಕೆ ಆಲೌಟ್ ಆಗಿರುವ ಬಾಂಗ್ಲಾ ಬ್ಯಾಟ್ಸ್​ಮನ್​​ಗಳು

    ಬೂಮ್ರಾ, ಆರ್​​​.ಅಶ್ವಿನ್ ಎಷ್ಟು ವಿಕೆಟ್ ಪಡೆದು ಸಂಭ್ರಮಿಸಿದ್ರು?

ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 2ನೇ ಇನ್ನಿಂಗ್ಸ್​ನಲ್ಲಿ ಕೇವಲ 146 ರನ್​ಗಳಿಗೆ ಆಲೌಟ್ ಆಗಿದೆ. 95 ರನ್​ಗಳ ಟಾರ್ಗೆಟ್ ಕೊಟ್ಟಿದ್ದು ಭಾರತ ಗೆಲ್ಲಲು ಇದು ಸುಲಭವಾದ ಗುರಿಯಾಗಿದೆ. ಈ ಟೆಸ್ಟ್ ಗೆದ್ದರೇ ಟೀಮ್ ಇಂಡಿಯಾ 2-0 ದಿಂದ ಸರಣಿ ಕೈವಶ ಮಾಡಿಕೊಂಡಂತೆ ಆಗಲಿದೆ.

ಇದನ್ನೂ ಓದಿ: 6 ಆಟಗಾರರ​ ರಿಟೈನ್​ಗೆ ಅನುಮತಿ.. ಧೋನಿಗೂ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ..!​

2ನೇ ಇನ್ನಿಂಗ್ಸ್ ಆರಂಭಿಸಿದ್ದ ಬಾಂಗ್ಲಾದೇಶ ನಿನ್ನೆಯೇ 26 ರನ್​ಗೆ 2 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಇಂದು ಬ್ಯಾಟಿಂಗ್ ಮುಂದುವರೆಸಿದ ಬಾಂಗ್ಲಾದೇಶ ಪ್ಲೇಯರ್ಸ್​ ಆಟ ಭಾರತದ ಬೌಲರ್​ಗಳ ಮುಂದೆ ನಡೆಯಲಿಲ್ಲ. ಹೀಗಾಗಿ 2ನೇ ಇನ್ನಿಂಗ್ಸ್​ನಲ್ಲಿ ಕೇವಲ 146 ರನ್​ಗೆ ಆಲೌಟ್ ಆಗಿದ್ದಾರೆ. ಈ ಮೂಲಕ 95 ರನ್​ಗಳ ಟಾರ್ಗೆಟ್​ ಅನ್ನು ಭಾರತಕ್ಕೆ ನೀಡಿದೆ. ಇನ್ನು ಭಾರತದ ಪರ ಬೌಲಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ, ಆರ್​ ಅಶ್ವಿನ್ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ 3 ವಿಕೆಟ್ ಪಡೆದು ಸಂಭ್ರಮಿಸಿದರು.

ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಭಾರತ-ಬಾಂಗ್ಲಾ ಟೆಸ್ಟ್​.. ಕೊಹ್ಲಿ, KL ರಾಹುಲ್ ಬ್ಯಾಟಿಂಗ್ ಆರ್ಭಟ ಹೇಗಿತ್ತು?

ಕ್ಯಾಪ್ಟನ್​ ರೋಹಿತ್ ಶರ್ಮಾ ಪಡೆ 2ನೇ ಟೆಸ್ಟ್ ಮ್ಯಾಚ್ ಗೆಲ್ಲಲು ಕೇವಲ 95 ರನ್​ಗಳ ಗುರಿ ಇದೆ. ಹೀಗಾಗಿ ಭಾರತ ಈ ಟೆಸ್ಟ್​ ಸರಣಿಯನ್ನು ಕೈವಶ ಮಾಡಿಕೊಳ್ಳುವುದು ಬಹುತೇಕ ಖಚಿತವಾದಂತೆ ಆಗಿದೆ. ಎರಡು ಇನ್ನಿಂಗ್ಸ್​​ನಲ್ಲಿ ಬೂಮ್ರಾ 6 ವಿಕೆಟ್ ಪಡೆದ್ರೆ, ಅಶ್ವಿನ್ 5 ವಿಕೆಟ್ ಪಡೆದು ಟೀಮ್ ಇಂಡಿಯಾಕ್ಕೆ ನೆರವಾಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsBAN; ಭಾರತ 2ನೇ ಟೆಸ್ಟ್​ ಗೆಲ್ಲುವುದು ಬಹುತೇಕ ಕನ್​ಫರ್ಮ್​​.. ಬಾಂಗ್ಲಾ ಕೊಟ್ಟ ಟಾರ್ಗೆಟ್ ಎಷ್ಟು?

https://newsfirstlive.com/wp-content/uploads/2024/10/KOHLI_JADEJA_TEAM.jpg

Load More