newsfirstkannada.com

IND vs BAN; ಮತ್ತೆ ಅಬ್ಬರಿಸಿದ ಜೈಸ್ವಾಲ್​.. ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ

Share :

Published October 1, 2024 at 2:07pm

Update October 1, 2024 at 2:12pm

    2 ಇನ್ನಿಂಗ್ಸ್​​ನಲ್ಲಿ ವಿಕೆಟ್​ ಪಡೆದ ಜಡೇಜಾ, ಬೂಮ್ರಾ, ಅಶ್ವಿನ್

    ಕಾನ್ಪುರದಲ್ಲಿ ಅಮೋಘ ಗೆಲುವು ಪಡೆದ ರೋಹಿತ್ ಶರ್ಮಾ ಪಡೆ

    ಅಲ್ಪ ಮೊತ್ತಕ್ಕೆ ಎರಡು ಬಾರಿ ಆಲೌಟ್ ಆಗಿರುವ ಬಾಂಗ್ಲಾದೇಶ

ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ 7 ವಿಕೆಟ್​ಗಳಿಂದ ಅಮೋಘ ಗೆಲುವು ಸಾಧಿಸಿದೆ. 95 ರನ್​ಗಳ ಸುಲಭ ಗುರಿ ಬೆನ್ನತ್ತಿದ ನಾಯಕ ರೋಹಿತ್ ಶರ್ಮಾ ಬಳಗ ಗೆಲುವು ಸಾಧಿಸಿತು. ಈ ಮೂಲಕ ಭಾರತ 2-0ದಿಂದ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತು.

ಕಾನ್ಪುರದ ಗ್ರೀನ್ ಪಾರ್ಕ್​ ಸ್ಟೇಡಿಯಂನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ ಕೇವಲ 146 ರನ್​ಗಳಿಗೆ ಆಲೌಟ್ ಆಗಿತ್ತು. ಇದರಿಂದ ಭಾರತಕ್ಕೆ 95 ರನ್​ಗಳ ಗುರಿ ನೀಡಿತ್ತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಟೀಮ್ ಇಂಡಿಯಾ ಟೆಸ್ಟ್​ನ ಕೊನೆ ದಿನದಲ್ಲಿ ಗೆದ್ದು ಸಂಭ್ರಮಿಸಿತು. ರೋಹಿತ್ ಶರ್ಮಾ ಕೇವಲ 8 ರನ್​ಗೆ ಔಟ್ ಆದರು. ಆದರೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅಮೋಘವಾದ ಹಾಫ್​ ಸೆಂಚುರಿ (51) ಸಿಡಿಸಿ ಔಟ್ ಆದರು. ಬಳಿಕ ಬಂದ ವಿರಾಟ್ ಕೊಹ್ಲಿ 29 ರನ್ ಹಾಗೂ ಪಂತ್ 4 ರನ್​ ಗಳಿಸುವ ಮೂಲಕ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿತು.

ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಭಾರತ-ಬಾಂಗ್ಲಾ ಟೆಸ್ಟ್​.. ಕೊಹ್ಲಿ, KL ರಾಹುಲ್ ಬ್ಯಾಟಿಂಗ್ ಆರ್ಭಟ ಹೇಗಿತ್ತು?

2ನೇ ಟೆಸ್ಟ್ ಆರಭವಾಗಿದ್ದ ವೇಳೆ 2 ದಿನ ಮಳೆಯಿಂದ ಪಂದ್ಯವನ್ನು ಸ್ಟಾಪ್ ಮಾಡಲಾಗಿತ್ತು. ಆದರೆ 4ನೇ ದಿನದಲ್ಲಿ ಟಿ20 ಶೈಲಿಯಲ್ಲಿ ಅಭಿಮಾನಿಗಳಿಗೆ ಭಾರತದ ಬ್ಯಾಟ್ಸ್​ಮನ್​ಗಳು ಮನರಂಜನೆ ನೀಡಿದರು. ಬಾಂಗ್ಲಾ ಮೊದಲ ಇನ್ನಿಂಗ್ಸ್​​ನಲ್ಲಿ 233 ರನ್​ಗೆ ಆಲೌಟ್ ಆಗಿತ್ತು.​ ಇನ್ನು ಭಾರತದ ಬ್ಯಾಟ್ಸ್​ಮನ್​ಗಳು ಮೊದಲ ಇನ್ನಿಂಗ್ಸ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ 285 ರನ್​ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದ್ದರು. 2ನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾ 146 ರನ್​ಗಳಿಗೆ ಆಲೌಟ್ ಆಗಿತ್ತು. ಇದರಿಂದ ಭಾರತಕ್ಕೆ 95 ರನ್​ಗಳ ಟಾರ್ಗೆಟ್ ಫಿಕ್ಸ್ ಆಗಿತ್ತು. ಈ ಗುರಿ ಬೆನ್ನತ್ತಿದ ಭಾರತ ಗೆಲುವು ಸಾಧಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs BAN; ಮತ್ತೆ ಅಬ್ಬರಿಸಿದ ಜೈಸ್ವಾಲ್​.. ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ

https://newsfirstlive.com/wp-content/uploads/2024/10/JAISWAL_1.jpg

Load More