newsfirstkannada.com

×

ಮೂವರು ಮಹಿಳೆಯರ ವಿವಸ್ತ್ರಗೊಳಿಸಿದರು..19 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್.. ಬಳಿಕ ನಗ್ನಸ್ಥಿತಿಯಲ್ಲಿ ಮೆರವಣಿಗೆ ಮಾಡಿ ವಿಕೃತಿ

Share :

Published July 20, 2023 at 7:35am

    ದೇಶವನ್ನೇ ಬೆಚ್ಚಿಬೀಳಿಸಿದೆ ಮಣಿಪುರದ ಈ ಅಮಾನುಷ ವಿಡಿಯೋ

    ರೇಪ್ ಮಾಡಿ ಸಹೋದರನನ್ನು ಆಕೆಯ ಕಣ್ಣೆದುರಲ್ಲೇ ಕೊಲೆಗೈದರು

    ‘ನಾರಿ ಶಕ್ತಿಗೆ ನ್ಯಾಯ ಕೊಡೋದು ಅಂದ್ರೆ ಇದೇನಾ’ ಎಂದ ವಿಪಕ್ಷಗಳು

ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮಣಿಪುರ ಬೇಡದ್ದ ವಿಚಾರಗಳಿಗೆ ಹೆಚ್ಚು ಸುದ್ದಿಯಾಗುತ್ತಿದೆ. ಜನಾಂಗೀಯ ಹಿಂಸಾಚಾರಕ್ಕೆ ಒಳಗಾಗಿರುವ ಮಣಿಪುರದಲ್ಲಿ, ಅಮಾನುಷ ಕೃತ್ಯಗಳು ನಡೆದು ಹೋಗಿವೆ. ಇದೀಗ ಮೇ 4 ರಂದು ನಡೆದಿದೆ ಎನ್ನಲಾಗಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ!

ಏನಿದು ವಿಡಿಯೋ..?

ಕಂಗ್ಪೊಕ್ಪಿ ಜಿಲ್ಲೆಯಲ್ಲಿ ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದು, ಬಳಿಕ ಮೆರವಣಿಗೆ ಮಾಡಿದ ವಿಡಿಯೋ ಅದಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಯುವತಿ ಕುಕಿ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ. ಆಕೆಗೆ ಕೇವಲ 19 ವರ್ಷ.

ಕಿಡ್ನಾಪ್ ಮಾಡಿ ವಿಕೃತಿ..!

ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಮೂವರು ಮಹಿಳೆಯರು ಸೇರಿ ಒಟ್ಟು ಐವರನ್ನು ಅಪಹರಿಸಿ ವಿವಸ್ತ್ರಗೊಳಿಸಲಾಗಿದೆ. ನಂತರ 19 ವರ್ಷದ ಯುವತಿ ಮೇಲೆ ರೇಪ್ ನಡೆದಿದೆ. ಮಾತ್ರವಲ್ಲ, ಈಕೆಯ ತಮ್ಮನನ್ನು ಕೊಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಕೃತ್ಯವನ್ನು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಖಂಡಿಸಿದ್ದಾರೆ. ಮನುಷ್ಯತ್ವ ಅಪರಾಧದ ವಿರೋಧಿಯಾಗಿದೆ. ವಿಡಿಯೋ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಆದೇಶ ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ತನಿಖೆಗೆ ಆದೇಶ ಮಾಡಲಾಗಿದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿದೆ ಎಂದಿದ್ದಾರೆ.

ಅವತ್ತು ಏನಾಗಿತ್ತು ಮಣಿಪುರದಲ್ಲಿ..?

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಘಟನೆ ಬಗ್ಗೆ ಮೇ 4 ರಂದೇ ನಮಗೆ ದೂರು ಬಂದಿದೆ. ಆದರೆ ಅಪರಿಚಿತರ ವಿರುದ್ಧ ಜೂನ್ 21 ರಂದು ಗ್ಯಾಂಗ್​ ರೇಪ್​​, ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದು ಕೊಂಗ್ಪೊಕ್ಪಿ ಜಿಲ್ಲೆಯಲ್ಲಿ ನಡೆದ ಪ್ರಸಂಗವಾಗಿದೆ ಎಂದಿದ್ದಾರೆ. ಇನ್ನು ದೂರಿನಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ, ಮೇ 4 ರಂದು ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಸರಿಸುಮಾರು 800 ರಿಂದ 1000 ಮಂದಿ ಶಸ್ತ್ರಸಜ್ಜಿತವಾಗಿ ಬಂದು ಮಣಿಪುರದಲ್ಲಿ ಹಿಂಸಾಚಾರ ಮಾಡಿದ್ದರು. ಇವರು, AK ರೈಫಲ್ಸ್​​, ಎಸ್​​ಎಎಲ್​​ಆರ್ (SALR)​, ಐಎನ್​​​ಎಸ್​​ಎಎಸ್ (INSAS)​ ಮತ್ತು 303 ರೈಫಲ್ಸ್​​ ಹಿಡಿದು ಗ್ರಾಮಗಳಿಗೆ ನುಗ್ಗಿದ್ದರು. ಗ್ರಾಮದಲ್ಲಿದ್ದ ಅಂಗಡಿ, ಮನೆ-ಮಠಗಳನ್ನು ಧ್ವಂಸ ಮಾಡಿ ಹಿಂಸಾಚಾರ ನಡೆಸಿದ್ದರು.

ಮೂವರನ್ನು ವಿವಸ್ತ್ರಗೊಳಿಸಿದ್ದರು

ಇದೇ ಸಂದರ್ಭದಲ್ಲಿ ಗ್ರಾಮದಲ್ಲಿದ್ದ ಐವರನ್ನು ಅಪಹರಿಸಲಾಗಿತ್ತು. ಅವರಲ್ಲಿ ಮೂವರು ಮಹಿಳೆಯರು, ಇಬ್ಬರು ಪುರುಷರು ಅಪಹರಣಕ್ಕೆ ಒಳಗಾಗಿದ್ದರು. ಪೊಲೀಸ್ ಠಾಣೆಯಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿರುವ ಕಾಡಿಗೆ ಅವರನ್ನು ಎಳೆದೊಯ್ದಿದ್ದರು. ಅಲ್ಲಿ ಅತ್ಯಾಚಾರಿಗಳ ತಂಡ ಮೊದಲು ಓರ್ವ ವ್ಯಕ್ತಿಯನ್ನು ಕೊಲೆ ಮಾಡಿದೆ. ನಂತರ ಮೂವರು ಮಹಿಳೆಯರ ನಗ್ನಗೊಳಿಸಿದ್ದಾರೆ. ಅವರ ಎದುರಲ್ಲೇ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಆಕೆ ಸಹೋದರನ್ನೂ ಕೊಂದಿದ್ದಾರೆ. ಬಳಿಕ ಯುವತಿಯನ್ನು ಮೆರವಣಿಗೆ ಮಾಡಿದ್ದಾರೆ ಎನ್ನಲಾಗಿದೆ.

ವಿರೋಧ ಪಕ್ಷಗಳಿಂದ ಖಂಡನೆ..!

ಮಣಿಪುರದಲ್ಲಿ ನಡೆದ ಘಟನೆಯನ್ನು ವಿರೋಧ ಪಕ್ಷಗಳು ಖಂಡಿಸಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ಮಣಿಪುರದಲ್ಲಿ ನಡೆದಿರುವ ಈ ಘಟನೆ ಆತಂಕಕಾರಿ. ಸಾರ್ವಜನಿಕರು ಯಾರೂ ಕೂಡ ಇಂತಹ ವಿಡಿಯೋಗಳನ್ನು ಶೇರ್ ಮಾಡಬಾರದು ಎಂದು ಮನವಿ ಮಾಡಿಕೊಳ್ತೇನೆ. ಇಂತಹ ಕೃತ್ಯಗಳು ನಾಚಿಕೆಗೇಡಿನ ಸಂಗತಿ, ಇದನ್ನು ಯಾರೂ ಕೂಡ ಸಹಿಸಬಾರದು ಎಂದಿದ್ದಾರೆ.

ನಾರಿ ಶಕ್ತಿಗೆ ಎಲ್ಲಿದೆ ನ್ಯಾಯ..?

ತೃಣಮೂಲ ಕಾಂಗ್ರೆಸ್​ ಎಂದಿನಂತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ. ಮಣಿಪುರದಲ್ಲಿ ಇಂತಹ ಕೃತ್ಯಗಳು ನಡೆದರೂ, ನಮ್ಮ ಪ್ರಧಾನಿಗಳು ಕಣ್ಮುಚ್ಚಿ ಕೂತಿದ್ದಾರೆ. ಅವರು ಮೌನ ಮುರಿಯಬೇಕಿದೆ. ಕಳೆದ 78 ದಿನಗಳಿಂದ ಹಿಂಸಾಚಾರಕ್ಕೆ ಸಂಬಂಧಿಸಿದ ಸುದ್ದಿಗಳು ಬರುತ್ತಲೇ ಇವೆ. ನಾರಿ ಶಕ್ತಿ ಎಂದು ಹೇಳಿಕೊಳ್ಳುವ ಬಿಜೆಪಿ, ಎಲ್ಲಿ ಅವರಿಗೆ ನ್ಯಾಯ ಒದಗಿಸಿದೆ ಎಂದು ಟ್ವೀಟ್ ಮಾಡಿದೆ.

ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿ, ಮಣಿಪುರ ಹಿಂಸಾಚಾರ ಬಗ್ಗೆ ಯಾಕೆ ಪ್ರಧಾನಿ ಹಾಗೂ ಕೇಂದ್ರ ಸರ್ಕಾರ ಕಣ್ಮುಚ್ಚಿ ಕೂತಿದೆ. ಈ ರೀತಿಯ ವಿಡಿಯೋಗಳನ್ನು ನೋಡಿದಾಗಲೂ ಅವರ ಮನಸ್ಸು ಕಲುಷಿತಗೊಳ್ಳುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಮೇ 3 ರಂದು ಮಣಿಪುರದಲ್ಲಿ ಹಿಂಸಾಚಾರ

ಮೇ 3 ರಂದು ಮಣಿಪುರದಲ್ಲಿ ‘ಟ್ರೈಬಲ್ ಸಾಲಿಡರಿಟಿ ಮಾರ್ಚ್​’ ಹೆಸರಲ್ಲಿ ಮೇಟಿ ಸಮುದಾಯ ತಮಗೆ ಎಸ್​ಟಿ (Scheduled Tribe ) ಸ್ಥಾನಮಾನ ನೀಡುವಂತೆ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ದುರ್ಘಟನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರರು ಮಂದಿ ಗಾಯಗೊಂಡಿದ್ದಾರೆ. ಮಣಿಪುರದಲ್ಲಿ 53 ಪರ್ಸೆಂಟ್​ನಷ್ಟು ಮೇಟಿ ಸಮುದಾಯದ ಜನರಿದ್ದಾರೆ. ಇವರೆಲ್ಲ ಹೆಚ್ಚಾಗಿ ಇಂಫಾಲ್​​ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ನಾಗಾಸ್ ಮತ್ತು ಕುಕ್ಕಿಸ್ ಸಮುದಾಯ ಕೂಡ 40 ರಷ್ಟು ಮಂದಿ ಇದ್ದಾರೆ. ಇವರೆಲ್ಲ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೂವರು ಮಹಿಳೆಯರ ವಿವಸ್ತ್ರಗೊಳಿಸಿದರು..19 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್.. ಬಳಿಕ ನಗ್ನಸ್ಥಿತಿಯಲ್ಲಿ ಮೆರವಣಿಗೆ ಮಾಡಿ ವಿಕೃತಿ

https://newsfirstlive.com/wp-content/uploads/2023/07/MANIPURA-1.jpg

Load More