newsfirstkannada.com

×

RCB ನಾಯಕತ್ವಕ್ಕಾಗಿ KL​ ರಾಹುಲ್​​, ರೋಹಿತ್​ ಮಧ್ಯೆ ಭಾರೀ ಫೈಟ್​​; ಫ್ರಾಂಚೈಸಿ ನಿರ್ಧಾರವೇನು?

Share :

Published October 7, 2024 at 8:55pm

Update October 7, 2024 at 8:56pm

    ಬರೋಬ್ಬರಿ 17 ವರ್ಷಗಳಿಂದ ಕಪ್​​​ ಗೆಲ್ಲದ ಕೊರಗು ಆರ್​ಸಿಬಿಗೆ!

    ಈ ಸಲ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಆರ್​​ಸಿಬಿ ಪಣ

    ಐಪಿಎಲ್​ ವಿನ್ನಿಂಗ್​ ಕ್ಯಾಪ್ಟನ್​​ ಮೇಲೆ ಬೆಂಗಳೂರು ತಂಡದ ಕಣ್ಣು

ಬರೋಬ್ಬರಿ 17 ವರ್ಷಗಳಿಂದ ಕಪ್​​​ ಗೆಲ್ಲದ ಕೊರಗು ಆರ್​ಸಿಬಿ ಫ್ಯಾನ್ಸ್​ಗೆ ಇದೆ. ಈ ಕೊರಗಿಗೆ ಬ್ರೇಕ್​ ಹಾಕುವ ಲೆಕ್ಕಚಾರದಲ್ಲಿರುವ ಫ್ರಾಂಚೈಸಿ, ಹೊಸ ತಂಡವನ್ನ ಕಟ್ಟೋ ಪ್ಲಾನ್​ ಮಾಡಿಕೊಂಡಿದೆ. ಕೇವಲ ಆಟಗಾರರು ಮಾತ್ರವಲ್ಲ, ವಿನ್ನಿಂಗ್​ ಕ್ಯಾಪ್ಟನ್​ಗೆ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ.

ಸೀಸನ್​-17ರ ಐಪಿಎಲ್​ನಲ್ಲಿ ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂಬ ಘೋಷವಾಕ್ಯದಲ್ಲೇ ರೆಡ್ ಆರ್ಮಿ ಸೀಸನ್​ ಶುರು ಮಾಡಿತ್ತು. ಎಲ್ಲವೂ ಉಲ್ಟಾ ಆಗಿತ್ತು. ಸತತ ಸೋಲುಗಳಿಂದ ಕೆಂಗಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಗ ಸೀಸನ್​​​​​​​​-18ಕ್ಕೆ ತಯಾರಿ ನಡೆಸ್ತಿದೆ. ಹೊಸ ಸೀಸನ್​​​​ಗೆ ತಯಾರಿ ನಡೆಸ್ತಿರುವ ರೆಡ್ ಆರ್ಮಿ, ಹೊಸ ಅಧ್ಯಾಯಕ್ಕೂ ನಾಂದಿ ಹಾಡುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗೇ ಹೊಸ ಕಾಪ್ಟನ್​​​​​​ ಮೇಲೆ ಕಣ್ಣಿಟ್ಟಿದೆ.

ಫಾಫ್​ ಡುಪ್ಲೆಸಿಗೆ ಕೊಕ್ ನೀಡುವ ನಿರ್ಧಾರ ಮಾಡಿರುವ ಫ್ರಾಂಚೈಸಿ, ಈಗ ಹೊಸ ವಿನ್ನಿಂಗ್​ ಕ್ಯಾಪ್ಟನ್​​ ಹುಡುಕಾಟದಲ್ಲಿದೆ. ಇದಕ್ಕಾಗಿ ಈಗಾಗಲೇ ಲಿಸ್ಟ್​ ಕೂಡ ಮಾಡಿರುವ ರೆಡ್ ಆರ್ಮಿ, ನಾಯಕತ್ವಕ್ಕೆ ಸೂಕ್ತ ಐದು ಅಭ್ಯರ್ಥಿಗಳಿಗೆ ಗಾಳ ಹಾಕುವ ಮೆಗಾ ಪ್ಲಾನ್​​ನಲ್ಲಿ ಮಾಡಿದೆ.

RCBಯಿಂದ ಫಾಫ್ ಔಟ್.. ಯಾರಿಗೆ ಕ್ಯಾಪ್ಟನ್ಸಿ..?

ಐಪಿಎಲ್​ ​ಮೋಸ್ಟ್ ಪಾಪ್ಯುಲರ್ ಟೀಂ ಆರ್​ಸಿಬಿ 2025ರ ಟೂರ್ನಿಗೆ ಒಂದಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. 40 ವರ್ಷದ ಫಾಫ್ ಡುಪ್ಲೆಸಿ​ಗೆ ಗೇಟ್​ಪಾಸ್ ನೀಡೋದು ಕನ್ಫರ್ಮ್​. ಡುಪ್ಲೆಸಿ ಬದಲು ಕನ್ನಡಿಗ ಕೆ.ಎಲ್.ರಾಹುಲ್​​ಗೆ ಮಣೆ ಹಾಕೋ ಪ್ಲಾನ್​ ತಂಡದಲ್ಲಿ ನಡೆದಿದೆ. ಫ್ಯಾನ್ಸ್​​ ಒತ್ತಾಯವೂ ಇದೇ ಆಗಿದೆ. ಮೂಲಗಳ ಪ್ರಕಾರ ಮೆಗಾ ಹರಾಜಿನಲ್ಲಿ ರಾಹುಲ್​ನ ಬಿಡ್ ಮಾಡಲು 25 ಕೋಟಿ ಪಕ್ಕಕ್ಕಿಟ್ಟಿದೆ ಎನ್ನಲಾಗಿದೆ.

ರೋಹಿತ್ Vs ಹಾರ್ದಿಕ್.. ಯಾರಿಗೆ ಸಾರಥ್ಯ?

ಮುಂಬೈ ಇಂಡಿಯನ್ಸ್​ನಿಂದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹೊರ ಬೀಳುವ ಸುದ್ದಿ ಇದೆ. ಯಾವುದು ಕೂಡ ಅಧಿಕೃತವಲ್ಲ. ಹೀಗಾಗಿ ಇವರಿಬ್ಬರ ಮೇಲೆಯೂ ಆರ್​ಸಿಬಿ ಕಣ್ಣಿದೆ. ಯಾಕಂದ್ರೆ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ನಾಯಕ ರೋಹಿತ್, ಆರ್​ಸಿಬಿಗೆ ಬಂದ್ರೆ ಆನೆಬಲವೇ ಬರುತ್ತೆ. 5 ಬಾರಿ ಐಪಿಎಲ್ ಗೆದ್ದ ನಾಯಕನಿಗೆ ಗಾಳ ಹಾಕುವ ಲೆಕ್ಕಚಾರದಲ್ಲಿದೆ. ಅಕಸ್ಮಾತ್​ ರೋಹಿತ್ ಕೈತಪ್ಪಿದ್ರೆ, ಆಲ್​ರೌಂಡರ್​ ಹಾರ್ದಿಕ್​ಗೆ ಮೆಗಾ ಹರಾಜಿನಲ್ಲಿ ಬಿಡ್ ಮಾಡೋದು ಗ್ಯಾರಂಟಿ. ಇದೆಲ್ಲವೂ ಮುಂಬೈ ನಡೆ ಮೇಲೆ ನಿರ್ಧಾರವಾಗಲಿದೆ.

ಇದನ್ನೂ ಓದಿ: ರೋಹಿತ್​​, ಧೋನಿ ಇಬ್ಬರಲ್ಲಿ ಯಾರು ಬೆಸ್ಟ್​ ಕ್ಯಾಪ್ಟನ್​​? ಸತ್ಯ ಬಿಚ್ಚಿಟ್ಟ ಶಿವಂ ದುಬೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ನಾಯಕತ್ವಕ್ಕಾಗಿ KL​ ರಾಹುಲ್​​, ರೋಹಿತ್​ ಮಧ್ಯೆ ಭಾರೀ ಫೈಟ್​​; ಫ್ರಾಂಚೈಸಿ ನಿರ್ಧಾರವೇನು?

https://newsfirstlive.com/wp-content/uploads/2024/10/KL-Rahul_Rohit.jpg

Load More