newsfirstkannada.com

×

50 ಅಲ್ಲ 100 ವರ್ಷ ನೀವು ಆರೋಗ್ಯವಾಗಿ ಇರಬೇಕಾ? ಹಾಗಿದ್ರೆ ಈ 9 ಅಭ್ಯಾಸಗಳನ್ನು ತಪ್ಪದೇ ಪಾಲಿಸಿ!

Share :

Published October 12, 2024 at 3:25pm

Update October 12, 2024 at 3:30pm

    ದೀರ್ಘಾಯುಷ್ಯದ ಬದುಕು ನಿಮ್ಮದಾಗಬೇಕು ಅಂದ್ರೆ ಏನು ಮಾಡಬೇಕು?

    ನಿತ್ಯ ಬದುಕಿನಲ್ಲಿ ಈ 9 ನಿಯಮಗಳನ್ನು ಅನುಸರಿಸಿದರೆ 100 ವರ್ಷ ನಿಮ್ಮದು

    ಧ್ಯಾನ, ದುರಭ್ಯಾಸದಿಂದ ದೂರ, ಉತ್ತಮ ಆಹಾರ ಕ್ರಮ ನಿಮ್ಮದಾಗಿಸಿಕೊಳ್ಳಿ

ದೀರ್ಘಾಯುಷ್ಯ ಎನ್ನುವುದು ಎಲ್ಲರ ಆಸೆ. ಎಲ್ಲರಿಗೂ ಅತಿಹೆಚ್ಚು ಕಾಲ ಯಾವ ಆರೋಗ್ಯ ಸಮಸ್ಯೆಯಿಲ್ಲದೇ ಇನ್ನೊಬ್ಬರಿಗೆ ಭಾರವಾಗದೇ ಬದುಕಬೇಕು ಎನ್ನುವ ಆಸೆ ಸದಾ ಇರುತ್ತದೆ.ಆದ್ರೆ ಅದು ಅಷ್ಟು ಸರಳವಲ್ಲ. ನಿಮ್ಮ ಆಹಾರ ಕ್ರಮದಿಂದ ಹಿಡಿದು, ನೀವು ಬದುಕುವ ಶೈಲಿಯವರೆಗೂ ನಿಮ್ಮ ಆಯಸ್ಸು ನಿರ್ಧಾರವಾಗುತ್ತದೆ. ಅತ್ಯುತ್ತಮ ಜೀವನ ಕ್ರಮ ಆರೋಗ್ಯ ಕ್ರಮ ನಿಮ್ಮದಾಗಿದ್ದೇ ಆದಲ್ಲಿ ನಿವು ಕೂಡ ದೀರ್ಘಾಯುಷಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ದೀರ್ಘಾಯುಷಿಗಳು ಆಗಬೇಕಾದಲ್ಲಿ ಈ 9 ಅಭ್ಯಾಸಗಳನ್ನು ನಿಮ್ಮದಾಗಿಸಿಕೊಳ್ಳಿ.

01 )ನಿದ್ರೆಗೆ ಹೆಚ್ಚು ಹೆಚ್ಚು ಪ್ರಧಾನ್ಯತೆ ಕೊಡಿ
ಇಂದಿನ ಜಾಗತೀಕರಣ ಕಾಲದಲ್ಲಿ ನಿದ್ದೆ ಎಂಬುವುದು ಮರೀಚಿಕೆಯಾಗಿದೆ. ಹೇಳಿ ಕೇಳಿ ಇದು ಸ್ಮಾರ್ಟ್​ಫೋನ್ ಯುಗದಲ್ಲಿ ಜನರು ನಿದ್ದೆಯನ್ನೇ ಮರೆತಿದ್ದಾರೆ. ಕೈಯಲ್ಲಿ ಮೊಬೈಲ್ ಹಿಡಿದುಕೊಂಡರೆ ಹಗಲು ರಾತ್ರಿಗಳ ಪರಿವೇ ಇರುವುದಿಲ್ಲ. ಇದು ನಿಮ್ಮನ್ನು ದೀರ್ಘಾಯುಷಿಗಳಾಗುವುದರಲ್ಲಿ ದೊಡ್ಡ ತಡೆಯಾಗಿ ನಿಲ್ಲುತ್ತದೆ. ಹೀಗಾಗಿ ನಿತ್ಯದ ಚಟುವಟಿಕೆಗಳಲ್ಲಿ ಸ್ಕ್ರೀನ್ ಜೊತೆ ಕಾಲ ಕಳೆಯುವುದನ್ನು ಕಡಿಮೆ ಮಾಡಿ. ಹೆಚ್ಚು ನಿದ್ದೆ ಮಾಡಿ. ನಿದ್ದೆ ನಿಮ್ಮನ್ನು ಮಾನಸಿಕವಾಗಿ ಸದೃಢವಾಗಿಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

02) ಜ್ಞಾನವನ್ನು ಬೆಳೆಸಿಕೊಳ್ಳುವ ರೂಢಿ ಇಟ್ಟುಕೊಳ್ಳಿ
ನಾವು ಹೆಚ್ಚು ಮಾನಸಿಕವಾಗಿ ಆರೋಗ್ಯದಿಂದ ಇರಬೇಕಾದಲ್ಲಿ ಹೊಸದನ್ನು ಕಲಿಯುವದರತ್ತ ನಮ್ಮ ತುಡಿತವಿರಬೇಕು. ಹೆಚ್ಚು ಹೆಚ್ಚು ಕಮ್ಯೂನಿಟಿ ಕ್ಲಾಸ್​ಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.ಇಂತಹ ಅಭ್ಯಾಸಗಳು ನಮ್ಮ ಅರಿವಿನ ವೃದ್ಧಿಗೆ ಸಹಾಯಕವಾಗಿ0 ನಿಲ್ಲುತ್ತವೆ. ನಮ್ಮ ಜ್ಞಾನವನ್ನು ಅಥವಾ ಮೆದುಳನ್ನು ಹೆಚ್ಚು ಕ್ರಿಯಾಶೀಲವಾಗಿ ಇಡುವಂತಹ ಆಟಗಳಲ್ಲಿ ತೊಡಗಿಕೊಳ್ಳಬೇಕು ಉದಾಹರಣೆಗೆ ಚೆಸ್​, ಖಾಲಿ ಇರುವ ಸಮಯದಲ್ಲಿ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಇಂತಹ ಆಟಗಳೊಂದಿಗೆ ಬೆರೆಯುವುದರಿಂದ ಮಾನಸಿಕ ಆರೋಗ್ಯ ಹೆಚ್ಚು ಸ್ಥಿರವಾಗಿರುತ್ತದೆ.

ಇದನ್ನೂ ಓದಿ: ತೂಕ ಇಳಿಸಲು ಯಾವುದು ಒಳ್ಳೆಯದು? ಜೇನು ತುಪ್ಪವಾ ಇಲ್ಲವೇ ಬೆಲ್ಲವಾ?

03) ಮದ್ಯಪಾನ ಮಿತಿ ಮೀರದಿರಲಿ
ಒಂದು ಮಿತಿಯಲ್ಲಿ ಮದ್ಯಪಾನ ಮಾಡುವುದು ಕೂಡ ಒಳ್ಳೆಯದು ಎಂದು ವೈದ್ಯರೇ ಅನೇಕ ಬಾರಿ ಸಲಹೆ ಮಾಡುತ್ತಾರೆ. ವಿಪರೀತ ಮದ್ಯಪಾನ ಆರೋಗ್ಯವನ್ನು ಸರ್ವನಾಶ ಮಾಡುತ್ತದೆ. ಅದು ಮೆದುಳಿನ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಮರೆವಿನ ಕಾಯಿಲೆ, ಫ್ಯಾಟಿ ಲೀವರ್​ನಂಹ ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ. ಹೀಗಾಗಿ ಮದ್ಯಪಾನದಿಂದ ದೂರವಿರಬೇಕು. ಇಲ್ಲವೇ ಯಾವತ್ತಾದರೂ ಒಂದು ಬಾರಿ ಪಾರ್ಟಿಗಳು, ಪ್ರಮುಖವಾದ ದಿನಗಳಂದಷ್ಟೇ ಮದ್ಯಪಾನ ಸೇವನೆಯನ್ನು ಮಾಡಬೇಕು. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:ಹೆಣ್ಮಕ್ಕಳಲ್ಲಿ ಹೊಸ ಟ್ರೆಂಡ್.. ಏಕಾಂಗಿಯಾಗಿ ಪ್ರಪಂಚ ಸುತ್ತಿದ್ದಾರೆ, ಆದರೆ..!

04) ಕಿವಿ ಕೇಳುವ ಸಹಾಯಕಗಳನ್ನು ಬಳಸಿ
ಒಂದು ಹಂತದ ವಯಸ್ಸಿಗೆ ಬಂದ ತಕ್ಷಣ ಕಿವುಡು ಸಮಸ್ಯೆ ಉಂಟಾಗುವುದು ವಯೋಸಹಜ ಕಾಯಿಲೆ. ಹೀಗಾಗಿ, ಈ ಸಮಯದಲ್ಲಿ ನೀವು ಹೀಯರಿಂಗ್ ಸಾಧನಗಳನ್ನು ಬಳಸುವುದು ತುಂಬಾ ಉತ್ತಮ. ಇದರಿಂದ ನಮ್ಮ ಜ್ಞಾನದ ಕೊರತೆಯನ್ನು ನೀಗಿಸಬಹುದು. ಮತ್ತೊಬ್ಬರೊಡನೆ ಸರಳವಾಗಿ ಮಾತನಾಡಬಹುದು ಹಾಗೂ ವಿಚಾರ ವಿನಿಮಯ ಮಾಡಬಹುದು. ಇಲ್ಲವಾದರೆ ಕಿವಿ ಕೇಳುತ್ತಿಲ್ಲ ಎಂಬ ಖಿನ್ನತೆ ನಮ್ಮನ್ನು ಆವರಿಸಿ ನಾವು ಚಟುವಟಿಕೆಯಿಂದ ಇರಲು ಸಾಧ್ಯವಾಗದೇ ಹೋಗಬಹುದು. ಚಟುವಟಿಕೆಯಿಂದ ಇರದಿದ್ದಲ್ಲಿ, ಮಾನಸಿಕ ಸಮಸ್ಯೆಗಳಿಂದ ಒದ್ದಾಡಬೇಕಾಗುತ್ತದೆ.

05) ಆರೋಗ್ಯಕರವಾದ ಆಹಾರ ಕ್ರಮ
ನಾವು ಏನು ಆಹಾರ ಸೇವಿಸುತ್ತೇವೆಯೋ ನಾವು ಅದೇ ಆಗುತ್ತೇವೆ. ನಿಮ್ಮ ಊಟದ ಪ್ಲೇಟ್​ನಲ್ಲಿ ಸದಾ ಪೋಷಕಾಂಶ ಹಾಗೂ ಪೌಷ್ಠಿಕಾಂಶ ಇರುವ ಆಹಾರಗಳೇ ತುಂಬಿರಬೇಕು. ನೀವು ತುಂಬಾ ಎನರ್ಜಿಟಿಕ್ ಆಗಿ ನೂರಾರು ವರ್ಷಗಳ ಬಾಳಲು ನಿಮ್ಮ ಆಹಾರ ಕ್ರಮ ಸರಿಯಾಗಿ ಇರಲೇಬೇಕು.  ಹಣ್ಣು, ಕಾಳುಗಳು, ತರಕಾರಿ ಇವೆಲ್ಲವೂ ಕೂಡ ನಿಮ್ಮ ಆರೋಗ್ಯವಾಗಿಡುವಲ್ಲಿ ಸಹಾಯಕವಾಗುತ್ತವೆ. ಹೀಗಾಗಿ ನಮ್ಮ ಆರೋಗ್ಯದ ಕ್ರಮವನ್ನು ಸರಿಯಾಗಿ ನಿರ್ವಹಿಸಿದಲ್ಲಿ ಹೆಚ್ಚು ದಿನಗಳ ಕಾಲ ನಾವು ಎನರ್ಜಿಟಿಕ್ ಆಗಿ ಬದುಕು ನೂಕಲು ಅನುಕೂಲವಾಗುತ್ತದೆ.

06) ಧ್ಯಾನ
ಧ್ಯಾನ ಎನ್ನುವುದ ನಿಮ್ಮ ಧೈಹಿಕ ಹಾಗೂ ಆಂತರಿಕ ಆರೋಗ್ಯಕ್ಕೆ ತುಂಬಾ ಸಹಾಯಕಾರಿ. ಇದು ದೇಹ ಹಾಗೂ ಮನಸಿನ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ. ನಿತ್ಯ ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡಗಳಿಂದ ನಾವು ದೂರವಾಗುತ್ತೇವೆ. ನಿತ್ಯ ಮಲಗಲು ಹೋಗುವ ಮುನ್ನ ಒಂದಿಷ್ಟು ಗಂಟೆ  ಉಸಿರನ ಮೇಲೆ ನಿಗಾ ಇಟ್ಟುಕೊಂಡು ಧ್ಯಾನ ಮಾಡಿದಲ್ಲಿ ದೀರ್ಘಾಯುಷ್ಯ ಬದುಕಿಗೆ ಇದು ತುಂಬಾ ಸಹಾಯಕಾರಿ ಎನ್ನಲಾಗಿದೆ.

07) ನಿತ್ಯ ವ್ಯಾಯಾಮವೂ ಉತ್ತಮ ಆಯಸ್ಸು ನೀಡುತ್ತದೆ
ವ್ಯಾಯಾಮ ಎನ್ನುವುದು ಕೇವಲ ಒಂದು ಅಭ್ಯಾಸ ಅಥವಾ ರೂಢಿಯಲ್ಲ, ಇದು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಿರುವಂತಹ ಚಟುವಟಿಕೆ. ನಿತ್ಯ ಒಂದು ಅರ್ಧ ಇಲ್ಲವೇ ಒಂದು ಗಂಟೆಯಾದರೂ ಕೂಡ ವ್ಯಾಯಾಮ ಮಾಡಬೇಕು. ನಿತ್ಯ ಯೋಗ, ಸಾಧಾರಣ ವ್ಯಾಯಾಮಗಳು ನಿಮ್ಮನ್ನು ದೀರ್ಘಾಯುಷಿಯಾಗಿ ಬದುಕಲು ಸಹಾಯಕ.

08) ಹಳೆಯ ಸಮಸ್ಯೆಗಳನ್ನು ನಿರ್ವಹಣೆ ಮಾಡಬೇಕು
ಸಕ್ಕರೆ ಕಾಯಿಲೆ, ರಕ್ತದೊತ್ತಡದಂತಹ ಸಮಸ್ಯೆಗಳು ವಯಸ್ಸು ಆದಂತೆ ಆದಂತೆ ಹೆಚ್ಚು ಹೆಚ್ಚು ಬಾಧಿಸಲು ಶುರುವಾಗುತ್ತದೆ. ಇದನ್ನು ನಾವು ಸರಿಯಾಗಿ ನಿರ್ವಹಣೆ ಮಾಡಬೇಕು. ಈ ರೀತಿಯ ಸಮಸ್ಯೆಯಿದ್ದವರು. ವೈದ್ಯರು ನೀಡುವ ಸಲಹೆ ಹಾಗೂ ನೀಡುವ ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳಬೇಕು. ಈ ರೋಗಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದರೆ. ಅವು ಮಿತಿಮೀರದಂತೆ ನೋಡಕೊಳ್ಳುತ್ತಾ ಹೋದರೆ ನಿಮ್ಮ ಆಯಸ್ಸು ವೃದ್ಧಿಯಾಗುತ್ತದೆ.

09) ಸಾಮಾಜಿಕವಾಗಿ ಬೆರೆಯಬೇಕು
ಮನುಷ್ಯ ಸಂಘಜೀವಿ, ಈ ಜಗತ್ತಿನಲ್ಲಿ ಯಾವ ಮೂಲೆಗೆ ಹೋದರು ಪರಿಚಯವಿಲ್ಲದ ದೇಶಕ್ಕೆ ಹೋದರು ಕೆಲವು ದಿನಗಳಲ್ಲಿ ಅಥವಾ ಕೆಲವೇ ಗಂಟೆಗಳಲ್ಲಿ ಯಾರಾದರೂ ಕೂಡ ಒಬ್ಬರು ಸ್ನೇಹಿತರಾಗುತ್ತಾರೆ. ಒಂದು ಗುಂಪು ಬೆಳೆಯುತ್ತದೆ. ಮನುಷ್ಯ ಏಕಾಂಗಿಯಾಗಿ ಬದುಕುವುದು ಅಷ್ಟು ಸರಳವಿಲ್ಲ. ಹೀಗಾಗಿ ನಾವು ಸಮಾಜದ ಒಂದು ಭಾಗವಾಗಿ ಸಾಮಾಜಿಕವಾಗಿ ಬೆರೆಯುವುದನ್ನು ರೂಢಿಸಿಕೊಳ್ಳಬೇಕು. ಫ್ಯಾಮಿಲಿ ಡಿನ್ನರ್, ವಾರಕ್ಕೆ ಒಂದು ಬಾರಿ ಎಲ್ಲರೂ ಸೇರಿ ಹೊರಗೆ ಹೋಗುವುದು ಇವೆಲ್ಲವೂ ಕೂಡ ಮೆದುಳನ್ನು ಹೆಚ್ಚು ಆರೋಗ್ಯಕರವಾಗಿ ಇಡುತ್ತವೆ. ನಮ್ಮ ದೀರ್ಘಾಯುಷ್ಯದ ಕನಸಿಗೆ ಮೆಟ್ಟಿಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

50 ಅಲ್ಲ 100 ವರ್ಷ ನೀವು ಆರೋಗ್ಯವಾಗಿ ಇರಬೇಕಾ? ಹಾಗಿದ್ರೆ ಈ 9 ಅಭ್ಯಾಸಗಳನ್ನು ತಪ್ಪದೇ ಪಾಲಿಸಿ!

https://newsfirstlive.com/wp-content/uploads/2024/10/100-Years-1.jpg

Load More