ಬಾಂಗ್ಲಾ ಆಟಗಾರರಿಗೆ ಬಿಗ್ ಶಾಕ್ ಕೊಟ್ಟ ಸಂಜು ಸ್ಯಾಮ್ಸನ್!
8 ಸಿಕ್ಸ್, 11 ಬೌಂಡರಿಗಳ ನೆರವಿನಿಂದ 111 ರನ್ ಸಿಡಿಸಿದ ಸಂಜು
ಟೀಂ ಇಂಡಿಯಾದ ಟಾರ್ಗೆಟ್‌ಗೆ ಬೆಚ್ಚಿ ಬಿದ್ದಿರುವ ಬಾಂಗ್ಲಾದೇಶ
ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ T20 ಪಂದ್ಯದಲ್ಲಿ ಟೀಂ ಇಂಡಿಯಾ ಘರ್ಜಿಸಿದೆ. ಬಾಂಗ್ಲಾ ಬೌಲರ್‌ಗಳನ್ನು ಬೆಂಡೆತ್ತಿರುವ ಟೀಂ ಇಂಡಿಯಾ ಆಟಗಾರರು ಬಿಗ್ ಟಾರ್ಗೆಟ್ ಕೊಟ್ಟಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಸೂರ್ಯ ಕುಮಾರ್ ಯಾದವ್ ಪಡೆ ಬಾಂಗ್ಲಾ ಆಟಗಾರರಿಗೆ ಬಿಗ್ ಶಾಕ್ ಕೊಟ್ಟಿದೆ.
ಇದನ್ನೂ ಓದಿ: 6,6,6,6,6.. ಒಂದೇ ಓವರ್‌ನಲ್ಲಿ 5 ಸಿಕ್ಸ್ ಬಾರಿಸಿದ ಸಂಜು ಸ್ಯಾಮ್ಸನ್; ಬಾಂಗ್ಲಾ ವಿರುದ್ಧ ಹೇಗಿತ್ತು ಆರ್ಭಟ?
ಹೈದರಾಬಾದ್ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ನಾಯಕ ಸೂರ್ಯ ಕುಮಾರ್ ಯಾದವ್ ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಬ್ಯಾಟ್ ಬೀಸಿದ್ರು. ಸಂಜು ಜೊತೆಗೆ ಸೂರ್ಯ ಕುಮಾರ್ ಸೇರಿಕೊಂಡು ಬಾಂಗ್ಲಾ ಬೌಲರ್‌ಗಳಿಗೆ ದಶದಿಕ್ಕಿನಲ್ಲೂ ಬೌಂಡರಿಗಳ ಸುರಿಮಳೆಗೈದರು.
ಕೇವಲ 47 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ ಅವರು 8 ಸಿಕ್ಸ್, 11 ಬೌಂಡರಿಗಳ ನೆರವಿನಿಂದ 111 ರನ್ ಸಿಡಿಸಿದರು. ಜವಾಬ್ದಾರಿಯುತ ಆಟ ಪ್ರದರ್ಶಿಸಿದ ನಾಯಕ ಸೂರ್ಯ ಕುಮಾರ್ ಯಾದವ್ ಅವರು ಕೂಡ 75 ರನ್‌ಗಳ ಕಾಣಿಕೆ ನೀಡಿದರು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಸಹ 47 ರನ್ ಬಾರಿಸಿ ತಂಡದ ಬಿಗ್ ಟಾರ್ಗೆಟ್‌ಗೆ ಉತ್ತಮ ಕಾಣಿಕೆ ಕೊಟ್ಟರು.
ಸಂಜು ಸ್ಯಾಮ್ಸನ್ ಅವರು ಒಂದೇ ಓವರ್‌ನಲ್ಲಿ 5 ಸಿಕ್ಸರ್ ಹಾಗೂ ಅತ್ಯಂತ ವೇಗದ ಸೆಂಚುರಿ ಬಾರಿಸುವ ಮೂಲಕ ಟೀಂ ಇಂಡಿಯಾ 3ನೇ ಟಿ20 ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಟೀಂ ಇಂಡಿಯಾದ ಟಾರ್ಗೆಟ್‌ಗೆ ಬೆಚ್ಚಿ ಬಿದ್ದಿರುವ ಬಾಂಗ್ಲಾ ಆಟಗಾರರು ಯಾವ ರೀತಿಯಲ್ಲಿ ಉತ್ತರ ಕೊಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ