ಸಲ್ಮಾನ್ ಖಾನ್-ಶಾರುಖ್ ಖಾನ್ರನ್ನ ಒಂದಾಗಿಸಿದ್ದ ಲೀಡರ್
ಪಟಾಕಿ ಸಿಡಿಸುವ ಶಬ್ಧದ ನಡುವೆ 4 ಸುತತ್ತಿನ ಗುಂಡಿನ ದಾಳಿ
ಸುಮಾರು 48 ವರ್ಷಗಳ ಕಾಲ ಕಾಂಗ್ರೆಸ್ಲ್ಲಿದ್ದ ಬಾಬಾ ಸಿದ್ದಿಕಿ
ಮಾಜಿ ಸಚಿವ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಲೀಡರ್ ಬಾಬಾ ಸಿದ್ದಿಕಿಯನ್ನ ಮುಂಬೈನಲ್ಲಿ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಒಟ್ಟು 4 ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಬಾ ಸಿದ್ದಿಕಿ ಕೊನೆಯುಸಿರೆಳೆದಿದ್ದಾರೆ. ಬಾಂದ್ರಾ ಬಾಯ್ ಅಂತ ಕರೆಸಿಕೊಳ್ಳುತ್ತಿದ್ದ ಬಾಬಾ ಸಿದ್ದಿಕಿ, ಬಾಲಿವುಡ್ನ ಸಲ್ಮಾನ್ ಖಾನ್ ಅವರ ಆಪ್ತ ಸ್ನೇಹಿತರಾಗಿದ್ದರು.
ಮಹಾರಾಷ್ಟ್ರದ ಪವರ್ಫುಲ್ ಲೀಡರ್. ಮಾಜಿ ಸಚಿವ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಹಿರಿಯ ನಾಯಕ ಬಾಬಾ ಸಿದ್ದಿಕಿಯನ್ನ ಭೀಕರ ಹತ್ಯೆ ಮಾಡಲಾಗಿದೆ. ಶನಿವಾರ ಮುಂಬೈನ ಕಚೇರಿಯ ಮುಂಭಾಗ ದುಷ್ಕರ್ಮಿಗಳು 4 ಸುತ್ತಿನ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಆದ್ರೆ, ಹತ್ಯೆಗೆ ಕಾರಣ ದುಡ್ಡಿನ ವ್ಯವಹಾರ ಎಂದು ಶಂಕಿಸಲಾಗುತ್ತಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡದ ಚರ್ಚೆ ಇದೆ.
ಇದನ್ನೂ ಓದಿ: ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ.. ಹರ್ಷೋದ್ಗಾರದಲ್ಲಿ ಮಿಂದೆದ್ದ ಜನ; ಅಭಿಮನ್ಯುಗೆ ಅಭಿನಂದನೆ
ಬಾಂದ್ರಾದಲ್ಲಿ ಪಟಾಕಿ ಸಿಡಿಸ್ತಿದ್ದ ವೇಳೆ ಗುಂಡಿನ ದಾಳಿ
ರಾತ್ರಿ 9.15.. ಬಾಂದ್ರಾದ ನಿರ್ಮಲ್ ನಗರ ಪ್ರದೇಶದ ಪುತ್ರನ ಕಚೇರಿ ಬಳಿ ಪಟಾಕಿ ಸಿಡಿಸ್ತಿದ್ರು. ಈ ವೇಳೆ ದುಷ್ಕರ್ಮಿಗಳಿಂದ 4 ಸುತ್ತಿನ ಗುಂಡಿನ ದಾಳಿ ನಡೆಸಿದ್ದು, 3 ಗುಂಡು ದೇಹ ಸೇರಿದೆ. ಅದರಲ್ಲಿ ಒಂದು ಎದೆ ಭಾಗವನ್ನ ಸೀಳಿದೆ. ಘಟನೆ ಬೆನ್ನಲ್ಲೆ ಸಿದ್ದಿಕಿಯನ್ನ ಲೀಲಾವತಿ ಆಸ್ಪತ್ರೆಗೆ ಸೇರಿಸಿದ್ರು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸದ್ಯ ಪ್ರಕರಣ ಸಂಬಂಧ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ.
ಯಾರಿದು ಬಾಬಾ ಸಿದ್ದಿಕಿ?
ಇದನ್ನೂ ಓದಿ: 2,847 ಹುದ್ದೆಗಳಿಗೆ ನೇರ ನೇಮಕಾತಿ.. ಬೆಳಗಾವಿಯ 2 ಹಂತದ Rallyಯಲ್ಲಿ ನೀವೂ ಭಾಗಿಯಾಗಿ
ಬಾಲಿವುಡ್ ಪಾಲಿನ ‘ಬಾಂದ್ರಾ ಬಾಯ್’ ಈ ಸಿದ್ದಿಕಿ?
ಬಾಬಾ ಸಿದ್ದಿಕಿ ರಾಜಕಾರಣಿ ಮಾತ್ರವಲ್ಲ. ಬಾಲಿವುಡ್ನ ಹಲವರ ಪಾಲಿನ ಬ್ಯಾಕ್ಬೋನ್. ಬಾಬಾ ಸಿದ್ದಿಕಿ, ಬಾಂದ್ರಾ ಬಾಯ್ ಅಂತಾನೆ ಖ್ಯಾತಿ. ಸಲ್ಮಾನ್-ಶಾರುಖ್ ನಡುವಿನ ಸ್ಟಾರ್ ವಾರ್ ಖತಂ ಮಾಡಿದ ಸಿದ್ದಿಕಿ, ರಂಜಾನ್ನ ಇಫ್ತಾರ್ ಕೂಟದಲ್ಲಿ ಒಂದಾಗಿಸಿದರು. ಪ್ರತಿವರ್ಷ ಆಯೋಜನೆ ಆಗುವ ಈ ಪಾರ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳಿಂದ ತುಂಬಿ ತುಳುಕುತ್ತಿತ್ತು. ಅದರಲ್ಲೂ ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ಗೆ ಬಾಬಾ ಸಿದ್ದಿಕಿ ಅತ್ಯಾಪ್ತರಾಗಿದ್ದರು.
ದಸರಾದಂದೇ ಈ ಗುಂಡಿನ ದಾಳಿ ನಡೆದಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ನಡೆದಿರುವ ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ