newsfirstkannada.com

×

T20 ಇತಿಹಾಸದಲ್ಲೇ ದಾಖಲೆ ಬರೆದ ಟೀಮ್ ಇಂಡಿಯಾ.. ಅಫ್ಘಾನ್ ದಾಖಲೆ ಉಡೀಸ್

Share :

Published October 13, 2024 at 8:10am

Update October 13, 2024 at 8:11am

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಸೂರ್ಯಕುಮಾರ್

    ಬಾಂಗ್ಲಾ ಬೌಲರ್​ಗಳನ್ನ ಮನಬಂದಂತೆ ಚಚ್ಚಿದ ಸೂರ್ಯ, ಸಂಜು

    40 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್​​ನಿಂದ ಸಂಜು ಸೆಂಚುರಿ

ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಪಡೆ ಮತ್ತೊಮ್ಮೆ ದೊಡ್ಡ ಘರ್ಜನೆ ಮಾಡಿದೆ. ಇಡೀ ಟಿ20 ಇತಿಹಾಸದಲ್ಲೇ 2ನೇ ಅತ್ಯಧಿಕ ರನ್​ ಗಳಿಸುವ ಮೂಲಕ ಸೂರ್ಯಕುಮಾರ್ ಸೇನೆ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಅಫ್ಘಾನ್ ದಾಖಲೆಯನ್ನ ಭಾರತ ಉಡೀಸ್ ಮಾಡಿದೆ.

ಹೈದರಾಬಾದ್​ನ ರಾಜೀವ್​ಗಾಂಧಿ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಸರಣಿಯ ಕೊನೆ ಮ್ಯಾಚ್​ನಲ್ಲಿ ಸೂರ್ಯಕುಮಾರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಯೋಜನೆಯಂತೆ ಟೀಮ್ ಇಂಡಿಯಾ ಬೃಹತ್ ಮೊತ್ತದ ರನ್​ಗಳನ್ನು ಕಲೆ ಹಾಕಿತು. ಸಂಜು ಸ್ಯಾಮ್ಸನ್ ಅವರ ಅಮೋಘ ಶತಕ ಹಾಗೂ ಕ್ಯಾಪ್ಟನ್ ಸೂರ್ಯ ಅವರ ಹಾಫ್ ಸೆಂಚುರಿ ನೆರವಿನಿಂದ ಭಾರತ 20 ಓವರ್​ಗಳಲ್ಲಿ 297 ರನ್​ಗಳ ಟಾರ್ಗೆಟ್ ನೀಡಿತ್ತು. ಆದರೆ ಈ ಗುರಿ ಬೆನ್ನತ್ತಿದ್ದ ಬಾಂಗ್ಲಾ ಅಲ್ಪ ಮೊತ್ತಕ್ಕೆ ಆಟ ಮುಗಿಸಿತು. ಹೀಗಾಗಿ ಭಾರತ 133 ರನ್​ಗಳ ಅಂತರದಿಂದ ಗೆಲುವು ಪಡೆಯಿತು.

ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ.. ಟೀಂ ಇಂಡಿಯಾ ಪರಾಕ್ರಮಕ್ಕೆ T20 ಸರಣಿ ಕ್ಲೀನ್‌ಸ್ವೀಪ್!

ಟಿ20ಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ತಂಡಗಳು

  • 2023 ಮಂಗೋಲಿಯಾ ವಿರುದ್ಧ ನೇಪಾಳ= 314/3
  • 2024 ಬಾಂಗ್ಲಾದೇಶ ವಿರುದ್ಧ ಭಾರತ= 297/6
  • 2019 ಐರ್ಲೆಂಡ್ ಜೊತೆ ಅಫ್ಘಾನ್= 278/3
  • 2023 ಥೈಲ್ಯಾಂಡ್ ವಿರುದ್ಧ ಮಲೇಷ್ಯಾ= 268/4
  • 2023 ವೆಸ್ಟ್​ ಇಂಡೀಸ್ ವಿರುದ್ಧ ಇಂಗ್ಲೆಂಡ್= 267/3
  • 2016 ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ= 263/3

ಬಾಂಗ್ಲಾದೇಶ ವಿರುದ್ಧ ಭಾರತ 297 ರನ್​ಗಳನ್ನು ಗಳಿಸುವ ಮೂಲಕ 3 ತಂಡಗಳ ಹೆಸರಲ್ಲಿದ್ದ ದಾಖಲೆಯನ್ನ ಬ್ರೇಕ್ ಮಾಡಿದೆ. ಟಿ20ಯಲ್ಲಿ ಅತಿ ಹೆಚ್ಚು ರನ್​ ಗಳಿಸಿರುವ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ. ಇನ್ನು ಈ ಪಂದ್ಯದಲ್ಲಿ ಸಂಜು ಕೇವಲ 40 ಬಾಲ್​​ನಲ್ಲಿ 11 ಬೌಂಡರಿ, 8 ಆಕಾಶದೆತ್ತರ ಸಿಕ್ಸರ್ ಸಮೇತ ಅಮೋಘವಾದ ಸೆಂಚುರಿ ಸಿಡಿಸಿ ಸಂಭ್ರಮಿಸಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 ಇತಿಹಾಸದಲ್ಲೇ ದಾಖಲೆ ಬರೆದ ಟೀಮ್ ಇಂಡಿಯಾ.. ಅಫ್ಘಾನ್ ದಾಖಲೆ ಉಡೀಸ್

https://newsfirstlive.com/wp-content/uploads/2024/10/SURYAKUMAR_SANJU.jpg

Load More