newsfirstkannada.com

×

ಬೆಂಗಳೂರಲ್ಲಿ ಭರ್ಜರಿ ಮಳೆ; ನಾಳೆಯಿಂದ ಐಟಿ-ಬಿಟಿ ಉದ್ಯೋಗಿಗಳಿಗೆ ವರ್ಕ್​​ ಫ್ರಮ್​​ ಹೋಮ್​​!

Share :

Published October 15, 2024 at 8:42pm

Update October 15, 2024 at 8:47pm

    ಭಾರತೀಯ ಹವಾಮಾನ ಇಲಾಖೆಯಿಂದ ಜನತೆಗೆ ಮಹತ್ವದ ಮುನ್ಸೂಚನೆ

    ರಾಜಧಾನಿಯ ಶಾಲೆಗಳಿಗೆ ರಜೆ ನೀಡಲು ಸೂಚನೆ ನೀಡಿದ ಡಿಸಿ ಜಗದೀಶ್

    IT, BT ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿ ಎಂದು ಘೋಷಣೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆಯಿಂದ ಶುರುವಾದ ಜಿಟಿಜಿಟಿ ಮಳೆ ಒಂದಲ್ಲ, ಎರಡಲ್ಲ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದೆ. ನದಿಯಂತೆ ರಸ್ತೆಯಲ್ಲೇ ನೀರು ಹರಿದಾಡ್ಬಿಟ್ಟಿದೆ. 2 ಕಿಲೋ ಮೀಟರ್​ ದೂರ ಸಂಚಾರ ಸಾಧ್ಯವಾಗದಷ್ಟು ನರಕ ದರ್ಶನ ಆಗ್ಬಿಟ್ಟಿದೆ.

ಇದನ್ನೂ ಓದಿ: BBK11: ಯಾವನಾದ್ರು ಅಪ್ಪನಿಗೆ ಹುಟ್ಟಿದ್ರೆ.. ಚೈತ್ರಾ ಖಡಕ್ ಲುಕ್ಕು, ಘರ್ಜನೆಗೆ ಜಗದೀಶ್‌ ಸ್ಟನ್ ಆದ್ರಾ?

ಬಂಗಾಳ ಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯಕ್ಕೆ ಮಳೆಯ ಆರ್ಭಟ ಜೋರಾಗಿದೆ. ರಾಜ್ಯದ ಹಲವೆಡೆ ಇಂದು ಬೆಳಗ್ಗೆಯಿಂದ ಒಂದೇ ಸಮನೆ ಮಳೆಯಾಗುತ್ತಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ನಿರಂತರ ಸುರಿದ ಮಳೆಗೆ ಸಿಲಿಕಾನ್ ಸಿಟಿಯ ಹಲವೆಡೆ ಅನಾಹುತಗಳು ಸಂಭವಿಸಿದೆ. ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ಐಟಿ ಬಿಟಿ ಮತ್ತು ಖಾಸಗಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡಿ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ: Chennai Video: ರಸ್ತೆ ಪೂರ್ತಿ ನೀರು, ಫ್ಲೈ ಓವರ್​ ಮೇಲೆ ಕಾರು! ಮಳೆ ನೀರಿನಿಂದ ರಕ್ಷಿಸಲು ಎಂಥಾ ಐಡಿಯಾ ಗುರೂ

ಬೆಂಗಳೂರು ನಗರದಲ್ಲಿ ನಿರಂತರ ಮತ್ತು ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್‌ ಹೊರಡಿಸಿದೆ. ಹೀಗಾಗಿ ಬೆಂಗಳೂರಿನಲ್ಲಿರುವ ಐಟಿ, ಬಿಟಿ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಆದ್ಯತೆ ನೀಡುತ್ತಿದ್ದೇವೆ. ಪ್ರವಾಹ, ಜಲಾವೃತ ಮತ್ತು ಸಂಚಾರ ದಟ್ಟಣೆಯಿಂದಾಗಿ ಸಾರಿಗೆ ವ್ಯವಸ್ಥೆಗಳು ಅಸ್ತವ್ಯಸ್ತವಾಗಬಹುದು, ಕಚೇರಿ ಆವರಣಕ್ಕೆ ಪ್ರಯಾಣಿಸುವುದು ಅಪಾಯವನ್ನು ಉಂಟು ಮಾಡುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ, IT, Bt ಮತ್ತು ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ 16ನೇ ಅಕ್ಟೋಬರ್ 2024ರಂದು ಮನೆಯಿಂದ ಕೆಲಸ ಮಾಡಲು (WFH) ಅನುಮತಿ ನೀಡುವಂತೆ ಶಿಫಾರಸು ಮಾಡಲಾಗಿದೆ.

ಮತ್ತೊಂದು ಕಡೆ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಾಲೆಗೆ ಬರಲು ಕಷ್ಟ ಎದುರಾಗಿದೆ. ಹೀಗಾಗಿ ರಾಜಧಾನಿಯ ಶಾಲೆಗಳಿಗೆ ರಜೆ ನೀಡಲು ಬೆಂಗಳೂರು ನಗರ ಡಿಸಿ ಜಗದೀಶ್ ಅವರು ಸೂಚನೆ ನೀಡಿದ್ದಾರೆ. ನಾಳೆ ಬೆಂಗಳೂರು ವ್ಯಾಪ್ತಿಯ ಶಾಲಾ ಕಾಲೇಜಿಗಳಿಗೆ ರಜೆ ಘೋಷಿಸಿ ಬೆಂಗಳೂರು ಜಿಲ್ಲಾಡಳಿತ ಆದೇಶ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಭರ್ಜರಿ ಮಳೆ; ನಾಳೆಯಿಂದ ಐಟಿ-ಬಿಟಿ ಉದ್ಯೋಗಿಗಳಿಗೆ ವರ್ಕ್​​ ಫ್ರಮ್​​ ಹೋಮ್​​!

https://newsfirstlive.com/wp-content/uploads/2024/10/rain-4.jpg

Load More