newsfirstkannada.com

×

WhatsApp: 80 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳು ಬ್ಯಾನ್​! ಇಷ್ಟಕ್ಕೆಲ್ಲಾ ಕಾರಣ ಏನು ಗೊತ್ತಾ?

Share :

Published October 16, 2024 at 8:43am

Update October 16, 2024 at 8:47am

    ವಾಟ್ಸ್​ಆ್ಯಪ್​ ತ್ವರಿತವಾಗಿ ಸಂದೇಶ ಕಳುಹಿಸುವ ಅಪ್ಲಿಕೇಶನ್

    ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಎದುರಾಗುತ್ತಿದೆ ಉಪಟಳ

    ಭಾರತೀಯರ ಕೆಲವು ಖಾತೆಗಳನ್ನು ಬ್ಯಾನ್​ ಮಾಡಲು ಇದುವೇ ಕಾರಣ

ವಾಟ್ಸ್ಆ್ಯಪ್​ ಅತ್ಯಂತ ತ್ವರಿತವಾಗಿ ಸಂದೇಶ ಕಳುಹಿಸುವ ಅಪ್ಲಿಕೇಶನ್​ ಆಗಿದೆ. ಈಗಾಗಲೇ ವಿಶ್ವದಾದ್ಯಂತ ಕೋಟಿಗೂ ಅಧಿಕ ಜನರು ವಾಟ್ಸ್​ಆ್ಯಪ್​ ಬಳಸುತ್ತಿದ್ದಾರೆ. ಇತ್ತ ಭಾರತದಲ್ಲೂ ವಾಟ್ಸ್​ಆ್ಯಪ್ ಬಳಕೆಯ ಜೊತೆಗೆ ದೈನಂದಿನ ವ್ಯವಹಾರ ಮಾಡಲು ಯೋಗ್ಯವಾದ ಅಪ್ಲಿಕೇಶನ್​ ಎಂದೆನಿಸಿಕೊಂಡಿದೆ. ಹೀಗಿರುವಾಗ ಭಾರತೀಯರ 80 ಲಕ್ಷಕ್ಕೂ ಅಧಿಕ ಖಾತೆಗಳನ್ನ ವಾಟ್ಸ್​ಆ್ಯಪ್​ ಬ್ಯಾನ್​ ಮಾಡಿದೆ.

ವಾಟ್ಸ್​ಆ್ಯಪ್​ ಜನಪ್ರಿಯತೆ ಜೊತೆಗೆ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಸ್ಕ್ಯಾಮರ್​ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾಟ್ಸ್​ಆ್ಯಪ್​ ಬಳಸಿಕೊಂಡು ಬೆದರಿಕೆ, ವಂಚನೆ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ಅಂತಹ ಅನುಮಾನದ ಖಾತೆಗಳನ್ನು ಪರಿಶೀಲಿಸಿ ನಿಷೇಧಿಸಿದೆ. ಸುಮಾರು 8,458.000 ಲಕ್ಷ ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್​ ಮಾಡಲಾಗಿದೆ.

ಇದನ್ನೂ ಓದಿ: ಅತೀ ಕಡಿಮೆ ಬೆಲೆ! ಜಿಯೋಭಾರತ್​ ಪರಿಚಯಿಸಿದೆ V3, V4 ಫೋನ್​.. ಜಿಯೋಟಿವಿ, ಜಿಯೋಸಿನಿಮಾ ವೀಕ್ಷಿಸುವ ಅವಕಾಶ

ಮಾಹಿತಿ ತಂತ್ರಜ್ಞಾನದ ನಿಯಮದ ಪ್ರಕಾರ, 2021ರ ನಿಯಮ 4(1)(ಡಿ) ಮತ್ತು 3ಎ (7)ಗೆ ಅನುಗುಣವಾಗಿ ಪ್ರಕಟವಾದ ವರದಿಯಂತೆ, ವಾಟ್ಸ್​ಆ್ಯಪ್​​ ತನ್ನ ನೀತಿಯನ್ನು ಉಲ್ಲಂಘಿಸುವ ಮತ್ತು ತೊಡಗಿಸಿಕೊಳ್ಳುವ ಖಾತೆಗಳ ವಿರುದ್ಧ ಜಾಗರೂಕತೆಯನ್ನು ಸಾರಿದೆ. ಹೀಗಾಗಿ ವಾಟ್ಸ್​ಆ್ಯಪ್​ ಬಳಕೆದಾರರ ಸುರಕ್ಷತೆ ಬಗ್ಗೆ ಗಮನಹರಿಸಿ ಆನ್​ಲೈನ್​ ವಂಚನೆ ತಡೆಯಲು 80 ಲಕ್ಷಕ್ಕೂ ಅಧಿಕ  ಖಾತೆಗಳನ್ನು ಬ್ಯಾನ್​​ ಮಾಡಿದೆ.

ಇದನ್ನೂ ಓದಿ: Blinkit: ಬರೀ 10 ನಿಮಿಷದಲ್ಲಿ ರಿಟರ್ನ್ ಮತ್ತು ಎಕ್ಸ್​ಚೇಂಜ್​​ ಮಾಡುವ ಅವಕಾಶ.. ಬ್ಲಿಂಕ್​ಇಟ್​ ತೆರೆದಿಟ್ಟಿದೆ ಹೊಸ ವೈಶಿಷ್ಟ್ಯ

1,661,000 ಖಾತೆಗಳನ್ನು ಬಳಕೆದಾರರ ದೂರುಗಳನ್ನು ಸ್ವೀಕರಿಸುವ ಮೊದಲೇ ಪತ್ತೆಹಚ್ಚಿ ಕ್ರಮ ಕೈಗೊಂಡಿದೆ. 2024ರಲ್ಲಿ ವಾಟ್ಸ್​ಆ್ಯಪ್​​ ತನ್ನ ಕಾರ್ಯವಿಧಾನದ ಮೂಲಕ 10,707 ಬಳಕೆದಾರರಿಮದ ದೂರನ್ನು ಸ್ವೀಕರಿಸಿಕೊಂಡಿದೆ. ಅದರಲ್ಲಿ 93 ದೂರುಗಳ ಮೇಲೆ ಕ್ರಮ ಕೈಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WhatsApp: 80 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳು ಬ್ಯಾನ್​! ಇಷ್ಟಕ್ಕೆಲ್ಲಾ ಕಾರಣ ಏನು ಗೊತ್ತಾ?

https://newsfirstlive.com/wp-content/uploads/2024/10/Whatsapp-1.jpg

Load More