newsfirstkannada.com

×

ತುತ್ತು ಅನ್ನಕ್ಕೂ ಪರದಾಡ್ತಿದ್ದ ರಿಷಭ್ ಪಂತ್.. ಇಂದು ಕೋಟಿ, ಕೋಟಿಗೆ ಬೆಲೆಬಾಳುವ ರೀತಿ ಬೆಳೆದಿದ್ದೇಗೆ?

Share :

Published October 17, 2024 at 11:21am

Update October 17, 2024 at 11:24am

    ಗುರುದ್ವಾರದಲ್ಲಿ ಎಷ್ಟೋ ರಾತ್ರಿಗಳನ್ನ ಕಳೆದಿರುವ ರಿಷಬ್ ಪಂತ್​!

    ಇಂದು ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಯುವ ಪ್ಲೇಯರ್​ಗೆ ಸ್ಥಾನ

    ಯುವ ಪ್ಲೇಯರ್ ಪಂತ್​ ಖಜಾನೆ ಸೇರಿದ ಕೋಟಿ ಕೋಟಿ ಹಣ

ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​, ಇದೀಗ ಭಾರತೀಯ ಕ್ರಿಕೆಟ್​ನ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿದ್ದಾರೆ. ಇಂದು ಕೋಟಿ, ಕೋಟಿಗೆ ಬೆಲೆಬಾಳುತ್ತಿರುವ ಪಂತ್​, ಅಂದು ಒಂದು ಹೊತ್ತಿನ ಊಟ, ಉಳಿಯಲು ಜಾಗವಿಲ್ಲದೇ ಪರದಾಡಿದ್ದರು. ಏನೂ ಇಲ್ಲದ ಪಂತ್​, ಕೋಟಿ ವೀರ ಆಗಿದ್ದು ಹೇಗೆ?.

ರಿಷಭ್​ ಪಂತ್​.. ಭಾರತೀಯ ಕ್ರಿಕೆಟ್​ನ ಭವಿಷ್ಯ. ಈ ಪಂತ್​ ಮೋಡಿಗೆ ಮರುಳಾಗದವರಿಲ್ಲ. ರಣಭಯಂಕರ ಬ್ಯಾಟಿಂಗ್, ಚಾಣಾಕ್ಷ ಕೀಪಿಂಗ್​ಗೆ ಫಿದಾ ಆಗದ ಫ್ಯಾನ್ಸ್​ ಇಲ್ಲ. ಆನ್​ಫೀಲ್ಡ್​ನಲ್ಲಿ ಎಲ್ರೂ ಸೀರಿಯಸ್ಸಾಗಿದ್ರೆ, ತರ್ಲೆ-ತಮಾಷೆ ಮನೋಭಾವದಿಂದ ಗಮನಸೆಳೆಯೋ ಕ್ರಿಕೆಟಿಗ. ಅಂಡರ್​-19 ವಿಶ್ವಕಪ್​ ಮುಗಿಸಿ, ಟೀಮ್​ ಇಂಡಿಯಾಗೆ ಡೆಬ್ಯೂ ಮಾಡಿದ ರಿಷಭ್​ ಪಂತ್​, ಈಗ 3 ಫಾರ್ಮೆಟ್​ಗಳಲ್ಲಿ ತಂಡದ ಖಾಯಂ ಪ್ಲೇಯರ್​​. ಐಪಿಎಲ್​ನಲ್ಲೂ ಸ್ಟಾರ್​ ಆಟಗಾರರ ಸಾಲು ಸೇರಿದ್ದಾರೆ ವಿಶ್ವದ್ಯಾಂತ ಪಂತ್​ಗೆ ಸಪರೇಟ್​ ಫ್ಯಾನ್​ ಬೇಸ್​ ಕೂಡ ಸೃಷ್ಟಿಯಾಗಿದೆ. ಇದರ ಜೊತೆಗೆ ಕೋಟಿ ಕೋಟಿ ಹಣವೂ ಪಂತ್​ ಖಜಾನೆ ಸೇರಿದೆ. ಸದ್ಯ ಕೋಟ್ಯಧಿಪತಿ ಕ್ರಿಕೆಟರ್​ ಆಗಿರೋ ಪಂತ್​, ಅಂದು ಒಂದು ತತ್ತು ಅನ್ನಕ್ಕಾಗಿ, ಉಳಿಯಲು ಚಿಕ್ಕ ಜಾಗಕ್ಕಾಗಿ ಪರದಾಡಿದ್ರು.

ಇದನ್ನೂ ಓದಿ: 2, 0, 0 ಇದು ಟಾಪ್ ಆರ್ಡರ್ ಬ್ಯಾಟ್ಸ್​ಮನ್​​ಗಳು​ ಗಳಿಸಿದ ಸ್ಕೋರ್; ಟೀಂ ಇಂಡಿಯಾಗೆ ದೊಡ್ಡ ಆಘಾತ..!

ಕ್ರಿಕೆಟರ್​ ಆಗಬೇಕು ಅನ್ನೋ ದೊಡ್ಡ ಕನಸನ್ನ ಹೊತ್ತ ರಿಷಭ್​ ಪಂತ್​ ಚಿಕ್ಕ ವಯಸ್ಸಿನಲ್ಲೇ ಉತ್ತರಾಖಾಂಡ್​ನಿಂದ ದೆಹಲಿಗೆ ವಲಸೆ ಬಂದಿದ್ರು. ದೆಹಲಿಗೆ ಬಂದು ಕ್ರಿಕೆಟ್​ ಅಕಾಡೆಮಿಯೊಂದನ್ನ ಸೇರಿದ ಪಂತ್​ ಬಳಿ ದೆಹಲಿಯಲ್ಲಿ ಜೀವನ ನಡೆಸಲು ಬೇಕಾದ ಹಣವಿರಲಿಲ್ಲ. ಪ್ರತಿದಿನ ಮನೆಯಿಂದ ಓಡಾಡೋದು ಅಸಾಧ್ಯದ ಮಾತಾಗಿತ್ತು. ಈ ವೇಳೆ ಹಣದ ಸಮಸ್ಯೆ ಎದುರಿಸಿದ್ದ ಪಂತ್​, ಎಷ್ಟೋ ದಿನ ಮಲಗುತ್ತಿದ್ದದ್ದು ಗುರದ್ವಾರದಲ್ಲಿ. ಗುರುದ್ವಾರದಲ್ಲಿ ರಾತ್ರಿ ಕಳೆಯುತ್ತಿದ್ದ ಪಂತ್​ಗೆ ಅಲ್ಲಿ ನೀಡುತ್ತಿದ್ದ ಪ್ರಸಾದವೇ ಊಟವಾಗಿತ್ತು. ಆ ಕಷ್ಟದ ನಡುವೆ ಕ್ರಿಕೆಟ್​ ಮೇಲಿನ ಪ್ರೀತಿ ಬಿಡದೇ, ಕಠಿಣ ಪರಿಶ್ರಮ, ಛಲದಿಂದ ಹೋರಾಡಿದ ಪಂತ್​, ಈಗೇನಾಗಿದ್ದಾರೆ ಅನ್ನೋದು ಇತಿಹಾಸ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ತುತ್ತು ಅನ್ನಕ್ಕೂ ಪರದಾಡ್ತಿದ್ದ ರಿಷಭ್ ಪಂತ್.. ಇಂದು ಕೋಟಿ, ಕೋಟಿಗೆ ಬೆಲೆಬಾಳುವ ರೀತಿ ಬೆಳೆದಿದ್ದೇಗೆ?

https://newsfirstlive.com/wp-content/uploads/2024/10/RISHABH_PANT.jpg

Load More