newsfirstkannada.com

×

ಲಂಡನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಮಿಂಚಿದ ರಾಧಿಕಾ ಆಪ್ಟೆ; ಬೇಬಿ ಬಂಪ್​ ಫೋಟೋಗೆ ಪೋಸ್​ ಕೊಟ್ಟ ನಟಿ

Share :

Published October 17, 2024 at 7:45pm

Update October 17, 2024 at 7:47pm

    ಲಂಡನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಕಾಣಿಸಿಕೊಂಡ ನಟಿ ರಾಧಿಕಾ ಆಪ್ಟೆ

    ಮೊದಲ ಬಾರಿ ಬೇಬಿ ಬಂಪ್ಸ್​ ಫೋಟೋಗೆ ಪೋಸ್ ಕೊಟ್ಟ ನಟಿ

    ಸಿಸ್ಟರ್ ಮಿಡ್​ನೈಟ್ ಸಿನಿಮಾದ ಪ್ರಿಮೀಯರ್​​ಗೆ ಬಂದಿದ್ದ ರಾಧಿಕಾ

ಲಂಡನ್ ಫಿಲ್ಮ್​ ಫೆಸ್ಟಿವಲ್ 2024, ಲಂಡನ್​ನ ಬ್ರಿಟಿಷ್ ಫಿಲ್ಮ್​ ಇನ್​ಸ್ಟಿಟ್ಯೂಟ್​ನಲ್ಲಿ ಈ ಬಾರಿ ನಡೆಯಿತು. ಅಲ್ಲಿ ನೆರೆದಿದ್ದ ಕ್ಯಾಮರಾಗಳು ಅತಿಹೆಚ್ಚು ಫೋಟೋ ಕ್ಲಿಕ್ಕಿಸಿದ್ದು ಬಹುಭಾಷಾ ನಟಿ ರಾಧಿಕಾ ಆಪ್ಟೆಯವರ ಫೋಟೋವನ್ನೇ. ಗರ್ಭಿಣಿಯಾದ ಬಳಿಕ ಇದೇ ಮೊದಲ ಬಾರಿ ರಾಧಿಕಾ ಆಪ್ಟೆ ಕಾಣಿಸಿಕೊಂಡಿದ್ದರು. ಅದು ಮಾತ್ರವಲ್ಲ ಮೊದಲ ಬಾರಿ ಬೇಬಿ ಬಂಪ್ಸ್ ಫೋಟೋಗೆ ಪೋಸ್ ಕೊಟ್ಟರು.ಅವರ ಮುಂದಿನ ಪ್ರಾಜೆಕ್ಟ್ ಆದ ಸಿಸ್ಟರ್ ಮಿಡ್​ನೈಟ್​ ಸಿನಿಮಾದ ಪ್ರಿಮೀಯರ್​ನಲ್ಲೂ ಕೂಡ ಭಾಗಿಯಾಗಿದ್ದರು.

ಇದನ್ನೂ ಓದಿ: ಡಿಸ್ಲೆಕ್ಸಿಯಾದಿಂದ ADHDವರೆಗೆ; ಬಾಲಿವುಡ್​ನ ಹಲವು ನಟ ನಟಿಯರು ಅನುಭವಿಸಿದ್ದಾರೆ ಇಂತಹ ಸಮಸ್ಯೆ

ಫೋಲ್ಡೆಡ್ ಹಾಫ್​ ಶೋಲ್ಡರ್​​ನ ಬ್ಲ್ಯಾಕ್​ ಗೌನ್​ನಲ್ಲಿ ಕಾಣಿಸಿಕೊಂಡ ನಟಿ ರಾಧಿಕಾ ಆಪ್ಟೆ ಅಲ್ಲಿದ್ದ ಕ್ಯಾಮರಾಗಳನ್ನು ತಮ್ಮತ್ತ ಸೆಳೆದರು. ಗೌನ್​ಗೆ ಹೊಂದಿಕೊಳ್ಳುವಂತ ಕಪ್ಪು ಬಣ್ಣದ ಲೋವ್ ಹೀಲ್ಸ್ ಧರಿಸಿದ್ದ ರಾಧಿಕಾ ಆಪ್ಟೆ ಕಾರ್ಯಕ್ರಮದಲ್ಲಿ ತಮ್ಮ ಮೊದಲ ಬೇಬಿ ಬಂಪ್ಸ್ ಫೋಟೋ ಕ್ಲಿಕ್ಕಿಸಿಕೊಂಡರು.

View this post on Instagram

A post shared by Radhika (@radhikaofficial)

ಮೆಸ್ಸಿ ಲೋವ್ ಬನ್ ಸ್ಟೈಲ್​ನಲ್ಲಿ ತಮ್ಮ ಕೇಶ ವಿನ್ಯಾಸ ಮಾಡಿಕೊಂಡಿದ್ದ ರಾಧಿಕಾ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು. ಮೇಕಪ್ ವಿಚಾರದಲ್ಲಿ ಅತ್ಯಂತ ಬ್ರೋಂಜ್ಡ್ ಗ್ಲ್ಯಾಮ್ ಲುಕ್​ನಲ್ಲಿ ರಾಧಿಕಾ ಆಪ್ಟೆ ಕಾಣಿಸಿಕೊಂಡರು. ಇನ್ನೂ ಜುವೆಲರಿ ವಿಚಾರದಲ್ಲಿ ರಾಧಿಕಾ ಯಾವುದೇ ರೀತಿಯ ನಕ್ಲೇಸ್ ಚೈನ್ ಧರಿಸದೇ ಇದ್ದಿದ್ದು ಕಾಣಿಸಿಕೊಂಡಿದೆ.

ಇದನ್ನೂ ಓದಿ: Bhoomi Hunnime: ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಸಂಭ್ರಮ; ಈ ಹಬ್ಬದ ವೈಶಿಷ್ಟ್ಯಗಳೇನು..?

ಈ ಫೋಟೋವನ್ನ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿಕೊಂಡಿರುವ ರಾಧಿಕಾ ಆಪ್ಟೆ ಸಿಸ್ಟರ್ ಮಿಡ್​ನೈಟ್ ಯುಕೆ ಪ್ರಿಮೀಯರ್ ಅಂತ ಕ್ಯಾಪ್ಷನ್ ಕೊಟ್ಟಿದ್ದಾರೆ. ಮದುವೆಯನ್ನು ಅಷ್ಟೇ ಗುಟ್ಟಾಗಿ ಮಾಡಿಕೊಂಡ ರಾಧಿಕಾ ಆಪ್ಟೆ ಗರ್ಭಿಣಿಯಾದ ಮೇಲೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು. ತಮ್ಮ ಮೊದಲ ಬೇಬಿ ಬಂಪ್ಸ್​ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಂಡನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಮಿಂಚಿದ ರಾಧಿಕಾ ಆಪ್ಟೆ; ಬೇಬಿ ಬಂಪ್​ ಫೋಟೋಗೆ ಪೋಸ್​ ಕೊಟ್ಟ ನಟಿ

https://newsfirstlive.com/wp-content/uploads/2024/10/RADHIKA-APTE.jpg

Load More