newsfirstkannada.com

×

ಭೀಕರ ಗುಡ್ಡ ಭೂಕುಸಿತ.. ಒಂದೇ ಕುಟುಂಬದ 9 ಮಂದಿ ಸೇರಿ ಒಟ್ಟು 25 ನಿವಾಸಿಗಳು ಸಾವು.. ಇನ್ನೂ 86 ಜನ ಮಿಸ್ಸಿಂಗ್

Share :

Published July 22, 2023 at 1:35pm

Update July 23, 2023 at 9:14pm

    ಘೋರ ದುರಂತದಲ್ಲಿ 4 ಮಕ್ಕಳ ಮೃತದೇಹ ಪತ್ತೆ

    229 ಜನರಲ್ಲಿ ಕೇವಲ 111 ಮಂದಿ ಮಾತ್ರ ರಕ್ಷಣೆ

    48 ಮನೆಗಳಿಗೆ ಹಾನಿ, ಮುಂದುವರಿದ ರಕ್ಷಣಾಕಾರ್ಯ

ಮಹಾರಾಷ್ಟ್ರದ ರಾಯಗಡ ಐರ್ಶಲ್​ವಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಸಾವನ್ನಪ್ಪಿರುವವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ ಇನ್ನು 86 ಮಂದಿ ಕಾಣೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಬುಡಕಟ್ಟು ಸಮುದಾಯ ವಾಸಿಸುತ್ತಿದ್ದ ಗ್ರಾಮದಲ್ಲಿದ್ದ ಗುಡ್ಡವೊಂದು ಕುಸಿದು ಮನೆಗಳ ಮೇಲೆ ಬಿದ್ದಿದೆ. ಕಳೆದ ಬುಧವಾರ ರಾತ್ರಿ ದುರ್ಘಟನೆ ಸಂಭವಿಸಿದ ಪರಿಣಾಮ ಭಾರಿ ಅನಾಹುತ ನಡೆದಿದೆ. ರಕ್ಷಣಾಕಾರ್ಯ ನಿನ್ನೆ ಸಂಜೆಯವರೆಗೆ 16 ಇತ್ತು. ಇವತ್ತು ಮಧ್ಯಾಹ್ನದ ವೇಳೆಗೆ 26ಕ್ಕೆ ಏರಿಕೆಯಾಗಿದೆ.

229 ಜನರಲ್ಲಿ ಕೇವಲ 111 ಮಂದಿ ಮಾತ್ರ ರಕ್ಷಣೆ

ಮೃತರಲ್ಲಿ 9 ಮಂದಿ ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ. 9 ಮಂದಿ ಪುರುಷರು, ಹಲವು ಮಹಿಳೆಯರು ಹಾಗೂ ನಾಲ್ಕು ಮಕ್ಕಳು ಕೂಡ ಜೀವಂತ ಸಮಾಧಿ ಆಗಿದ್ದಾರೆ. ದುರ್ಘಟನಾ ಸ್ಥಳದಲ್ಲಿ ನಿನ್ನೆಯಿಂದ ಎನ್​ಡಿಆರ್​​ಎಫ್ ಪಡೆ ಬೀಡು ಬಿಟ್ಟಿದೆ. ಎಸ್​ಡಿಆರ್​​ಎಫ್ ಕೂಡ ಅಲ್ಲೇ ಇದೆ. ಮಾತ್ರವಲ್ಲ, ಸ್ಥಳೀಯರು ಕೂಡ ರಕ್ಷಣೆಗೆ ಸಾಥ್ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಪರಿಣಾಮ ಗುಡ್ಡ ಕುಸಿದಿದೆ. ಗುಡ್ಡ ಕುಸಿತ ಹಿನ್ನೆಯಲ್ಲಿ 48 ಮನೆಗಳಿಗೆ ಹಾನಿಯಾಗಿದೆ. ಹೀಗಾಗಿ ಅಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಭೂಕುಸಿತ ದುರಂತದಿಂದ ಗ್ರಾಮದಲ್ಲಿ ಒಟ್ಟು 229 ಮಂದಿ ವಾಸಿಸುತ್ತಿದ್ದರು. ಅವರಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 10 ಮಂದಿಗೆ ಗಾಯವಾಗಿದೆ. 111 ಮಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. 86 ಜನ ಇನ್ನೂ ಪತ್ತೆ ಆಗಿಲ್ಲ, ಶೋಧಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದ ಇದೇ ಜಿಲ್ಲೆಯ ಮಹದ್ ತೆಹಸಿಲ್ ಗ್ರಾಮದಲ್ಲಿ ಜುಲೈ 22, 2021ರಂದು ಭುಕುಸಿತ ಸಂಭವಿಸಿತ್ತು. ಈ ಸಂದರ್ಭದಲ್ಲಿ 87 ಮಂದಿ ಜೀವ ಕಳೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಗುಡ್ಡ ಭೂಕುಸಿತ.. ಒಂದೇ ಕುಟುಂಬದ 9 ಮಂದಿ ಸೇರಿ ಒಟ್ಟು 25 ನಿವಾಸಿಗಳು ಸಾವು.. ಇನ್ನೂ 86 ಜನ ಮಿಸ್ಸಿಂಗ್

https://newsfirstlive.com/wp-content/uploads/2023/07/MAHARASTRA.jpg

Load More