ರಷ್ಯಾ ಸಂಸ್ಕೃತಿಯಲ್ಲಿ ಅಪ್ಪಿಕೊಳ್ಳುವುದಕ್ಕೆ ವಿಶೇಷವಾದ ಅರ್ಥವಿದೆ
ಶುಭಾಶಯದ ವಿನಿಮಯದಲ್ಲಿ ಸಾಕಷ್ಟು ವಿಭಿನ್ನರಾಗಿದ್ದಾರೆ ರಷ್ಯನ್ನರು
ಮಹಿಳಾ ಸಹೋದ್ಯೋಗಿಗಳಿಗೆ ಕೆನ್ನೆಯ ಮೇಲೆ ಚುಂಬಿಸುವ ಮೂಲಕ ಪ್ರೀತಿ
ನಮ್ಮ ದೇಶದಲ್ಲಿ ಪರಸ್ಪರ ಪರಿಚಿತರು ಎದುರಾದಾಗ ನಮಸ್ಕಾರ ಮಾಡುತ್ತೇವೆ. ತುಂಬಾ ಹತ್ತಿರದವರು, ಆತ್ಮೀಯರು ಇದ್ದಾಗ ನಮಸ್ಕರಿಸಿ ಕೈ ಕುಲುಕುತ್ತೇವೆ. ಇತ್ತೀಚೆಗೆ ಅತ್ಯಂತ ಆತ್ಮೀಯರು ಪರಸ್ಪರ ಆಲಂಗಿಸಿಕೊಳ್ಳುತ್ತಾರೆ. ಆದರೆ ರಷ್ಯಾದಲ್ಲಿ ಪರಸ್ಪರ ಭೇಟಿಯಾದಾಗ ಚುಂಬಿಸಿ, ತಬ್ಬಿಕೊಳ್ಳುತ್ತಾರೆ.
ಪ್ರಪಂಚದಾದ್ಯಂತ ರಷ್ಯನ್ನರ ಸಂಸ್ಕೃತಿ ವಿಶಿಷ್ಟತೆಗೆ ಹೆಸರುವಾಸಿಯಾಗಿದೆ. ರಷ್ಯಾದ ಜನ ಶುಭಾಶಯದ ವಿನಿಮಯದಲ್ಲಿ ಸಾಕಷ್ಟು ವಿಭಿನ್ನರಾಗಿದ್ದಾರೆ. ಅವರು ಒಬ್ಬರಿಗೊಬ್ಬರು ಭೇಟಿಯಾದಾಗ ತಬ್ಬಿಕೊಳ್ಳುತ್ತಾರೆ ಮತ್ತು ಪರಸ್ಪರ ಚುಂಬಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ಒಂದು ಕೂಲ್ ಡ್ರಿಂಕ್ಸ್‌ಗೆ ₹16,000.. ಕಾಫಿ ಕುಡಿಯೋಣ ಅಂತ ಕರೆದಿದ್ದ ಹುಡುಗಿ ಬಲೆಗೆ ಬಿದ್ದ ಹುಡುಗರು ಶಾಕ್!
ರಷ್ಯನ್ನರು ಅಪ್ಪಿಕೊಳ್ಳುವುದು ಯಾಕೆ?
ರಷ್ಯಾದ ಸಂಸ್ಕೃತಿಯಲ್ಲಿ ಅಪ್ಪಿಕೊಳ್ಳುವುದು ಕೇವಲ ಶುಭಾಶಯದ ಮಾರ್ಗವಲ್ಲ, ಇದು ಆಳವಾದ ಸಾಮಾಜಿಕ ಸಂಪರ್ಕದ ಸಂಕೇತ ಎನಿಸಿದೆ. ರಷ್ಯಾದ ಜನರು ತಬ್ಬಿಕೊಳ್ಳುವ ಮೂಲಕ ಅವರೊಂದಿಗಿನ ತಮ್ಮ ನಿಕಟತೆ, ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇದು ಕುಟುಂಬದ ಆತ್ಮೀಯ ಸ್ನೇಹಿತರು, ಅತ್ಯಂತ ಆತ್ಮೀಯರಾದ ಸಂಬಂಧಿಗಳಲ್ಲಿ ಅಪ್ಪಿಕೊಳ್ಳುವುದು, ಚುಂಬಿಸುವುದು ಸಾಮಾನ್ಯವಾಗಿದೆ.
ಹಾಗಂತ ಎಲ್ಲರನ್ನೂ ತಬ್ಬಿಕೊಳ್ಳುವುದಾಗಲಿ, ಚುಂಬಿಸುವುದಾಗಲಿ ಮಾಡುವುದಿಲ್ಲ. ರಷ್ಯಾದ ಜನ ಅವರು ಅತ್ಯಂತ ವಿಶ್ವಾಸಾರ್ಹ ಮತ್ತು ಆಳವಾದ ಸಂಬಂಧವನ್ನು ಹೊಂದಿರುವ ಜನರನ್ನು ಮಾತ್ರ ತಬ್ಬಿಕೊಳ್ಳುತ್ತಾರೆ. ಅಲ್ಲದೆ, ಅಪ್ಪಿಕೊಳ್ಳುವುದು ಗೌರವದ ಸಂಕೇತವೂ ಎನಿಸಿದೆ. ಅಂದರೆ ಅವರು ಪರಸ್ಪರ ಗೌರವಿಸುತ್ತಾರೆ ಎಂಬುದರ ಸಂಕೇತ.
ರಷ್ಯನ್ನರು ಯಾರನ್ನು ಚುಂಬಿಸುತ್ತಾರೆ?
ರಷ್ಯಾದಲ್ಲಿ, ಯುವತಿಯರು ತಮ್ಮ ಸ್ನೇಹಿತರು, ನಿಕಟ ಸಂಬಂಧಿಗಳು ಅಥವಾ ಮಹಿಳಾ ಸಹೋದ್ಯೋಗಿಗಳನ್ನು ಕೆನ್ನೆಯ ಮೇಲೆ ಚುಂಬಿಸುವ ಮೂಲಕ ಪ್ರೀತಿ ತೋರಿಸುತ್ತಾರೆ. ವಾಸ್ತವವಾಗಿ, ಈ ರೀತಿಯಲ್ಲಿ ಯಾರನ್ನಾದರೂ ಭೇಟಿಯಾದಾಗ ಅಪ್ಪಿಕೊಳ್ಳುವುದು, ಚುಂಬಿಸುವುದು ಪರಸ್ಪರ ಪ್ರೀತಿಯನ್ನು ತೋರಿಸುತ್ತದೆ. ಅಲ್ಲದೆ, ಇದು ಜನರನ್ನು ಹೃದಯದಿಂದ ಪರಸ್ಪರ ಹತ್ತಿರ ತರುತ್ತದೆ ಎಂಬ ನಂಬಿಕೆ ಅವರದ್ದು.
ಇದನ್ನೂ ಓದಿ: ಅಬ್ಬಾ.. ಬುರ್ಜ್ ಖಲೀಫಾಗೆ ಸೆಡ್ಡು; ಸೌದಿ ಅರೇಬಿಯಾದಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ದೊಡ್ಡ ಕಟ್ಟಡ! ಏನಿದರ ವಿಶೇಷ?
ಯಾವಾಗ ಕೈಕುಲುಕುತ್ತಾರೆ?
ಅತ್ಯಂತ ಆತ್ಮೀಯರೊಂದಿಗೆ ಪರಸ್ಪರ ಅಪ್ಪಿಕೊಳ್ಳುವುದು, ಚುಂಬಿಸುವುದು ಮಾಡಿದರೆ, ಕೆಲವು ಔಪಚಾರಿಕ ಸಂದರ್ಭಗಳಲ್ಲಿ ಕೈಕುಲುಕುತ್ತಾರೆ. ವ್ಯವಹಾರಿಕ ಸಭೆ, ಸಾಮಾಜಿಕ ಕಾರ್ಯಕ್ರಮ ಅಥವಾ ಹೊಸ ವ್ಯಕ್ತಿಯನ್ನು ಭೇಟಿಯಾದಾಗ. ಕೈಕುಲುಕಿ ಔಪಚಾರಿಕ ಶುಭಾಶಯ ಕೋರುತ್ತಾರೆ. ಅದು ಗೌರವ ಮತ್ತು ಸೌಜನ್ಯದ ಸಂಕೇತ. ರಷ್ಯನ್ನರಿಗೆ ಕೈಕುಲುಕುವುದಕ್ಕಿಂತ ತಬ್ಬಿಕೊಳ್ಳುವುದು ಹೆಚ್ಚು ವೈಯಕ್ತಿಕ ಮತ್ತು ಆಳವಾದ ಸಂಬಂಧದ ಸಂಕೇತ. ಅವರು ಔಪಚಾರಿಕ ಸಂದರ್ಭಗಳಲ್ಲಿ ಮಾತ್ರ ಹಸ್ತಲಾಘವ ಮಾಡಲು ಇಷ್ಟಪಡುತ್ತಾರೆ. ಇದರ ಹೊರತಾಗಿ, ರಷ್ಯಾದ ಸಂಸ್ಕೃತಿಯಲ್ಲಿ ಪರಸ್ಪರ ಭೇಟಿಯಾಗುವ ಸಂಸ್ಕೃತಿ ವಿಭಿನ್ನವಾಗಿದೆ. ಪರಸ್ಪರ ಭೇಟಿಯಾದಾಗ ಅವರು ತಬ್ಬಿಕೊಳ್ಳದಿದ್ದರೆ ಅಪರಿಚಿತರೊಂದಿಗೆ ಬೇಗನೆ ಬೆರೆಯಲು ಸಾಧ್ಯವಾಗುವುದಿಲ್ಲ ಅನ್ನೋದು ಅವರ ನಂಬಿಕೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ